ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ Union Minister Chirag Paswan 
ದೇಶ

Bihar election | ವಿಪಕ್ಷಗಳ ವಿರುದ್ಧ ಚಿರಾಗ್​ ವಾಗ್ದಾಳಿ: ಚುನಾವಣಾ ಯಶಸ್ಸಿನ ಬಗ್ಗೆ ಪಾಸ್ವಾನ್​ ಹೇಳಿದ್ದೇನು..?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar election) ತಮ್ಮ ಪಕ್ಷದ ಸಾಧನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್, ಕೆಲವರು ನನ್ನ ರಾಜಕೀಯ ಜೀವನ 2020 ರಲ್ಲಿ ಕೊನೆಗೊಂಡಿದೆ ಎಂದು ಘೋಷಿಸಿದ್ದರು. ಅದರೆ ಪಕ್ಷವನ್ನು ಪುನರ್​ ನಿರ್ಮಿಸಲು ನಾನು ಹೋರಾಡಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಚಿರಾಗ್​ ಪಾಸ್ವಾನ್, 2020 ರಲ್ಲಿ ಹಲವಾರು ಪಕ್ಷಗಳು ನನ್ನ ಪಕ್ಷದ ಅಂತ್ಯವನ್ನು ಘೋಷಿಸಿದ ಪರಿಸ್ಥಿತಿಯನ್ನು ನಾನು ಎದುರಿಸಿದ್ದೇನೆ. ಅಲ್ಲದೆ, 2022ರ ಹೊತ್ತಿಗೆ, ಎಲ್​​ಜೆಪಿ ಮತ್ತು ನಾನು ಮುಗಿದುಹೋದೆವು ಎಂದು ವ್ಯಾಪಕವಾಗಿ ಹೇಳಲಾಗಿತ್ತು. ಆದರೆ ನನ್ನ ತಂದೆಯ ಪರಂಪರೆ ನನ್ನ ರಕ್ತದಲ್ಲಿದೆ. ತಂದೆಯವರು ಅಥವಾ ನಾನಾಗಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಪಕ್ಷವನ್ನು ಪುನರುಜ್ಜೀವನಗೊಳಿಸಲು ನಾನು ಹೋರಾಡಿದೆ ಮತ್ತು ಪಕ್ಷವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ ಎಂದು ಪಾಸ್ವಾಲ್​ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಚಿರಾಗ್​, ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಕಾಲದಲ್ಲಿ ಪಕ್ಷವು ಹೊಂದಿದ್ದ ಬಲವನ್ನು ಈಗ ಮರಳಿ ಪಡೆದಿದೆ. ನಮ್ಮ ಪಕ್ಷವು ನನ್ನ ತಂದೆ ಕನಸು ಕಂಡ ಹಂತವನ್ನು ಕಠಿಣ ಪರಿಶ್ರಮದ ಮೂಲಕ ತಲುಪಿದೆ ಎಂದು ನನಗೆ ಸಂತೋಷ ಮತ್ತು ಹೆಮ್ಮೆ ಇದೆ ಎಂದು ಗೆಲುವಿನ ಬಗ್ಗೆ ಪ್ರತಿಕ್ರಿಯಿದ್ದಾರೆ.
ಪಕ್ಷದ ರಾಜಕೀಯ ಪ್ರಯಾಣದ ಬಗ್ಗೆ ಮಾತನಾಡಿದ ಎಲ್​ಜೆಪಿ ನಾಯಕ, ಮೊದಲ ಮೈಲಿಗಲ್ಲು 2005 ರಲ್ಲಿ, ನನ್ನ ತಂದೆ ಯಾವುದೇ ಮೈತ್ರಿ ಇಲ್ಲದೆ ಸ್ಪರ್ಧಿಸಿ 29 ಸ್ಥಾನಳನ್ನು ಗೆದ್ದಿದರು. ತಮ್ಮ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದಾರೆಂದು ಪಾಸ್ವಾನ್ ವಿರೋಧ ಪಕ್ಷವಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಮುಂದಿನ ಮುಖ್ಯಮಂತ್ರಿ ಬಗ್ಗೆ ಪ್ರಶ್ನಿಸಿದಾಗ, ಪಾಸ್ವಾನ್, ಕೇಂದ್ರ ಗೃಹ ಸಚಿವರು ಹೇಳಿದಂತೆ, ಶಾಸಕರು ತಮ್ಮ ನಾಯಕನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ. ನನ್ನ ನಂಬಿಕೆಯ ಪ್ರಕಾರ, ನಿತೀಶ್ ಕುಮಾರ್ ಅವರೇ ಮತ್ತೆ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಸ್ಪರ್ಧಿಸಿದ್ದ 28 ಸ್ಥಾನಗಳಲ್ಲಿ ಪಾಸ್ವಾನ್​ರ ಎಲ್​ಜೆಪಿ ಪಕ್ಷ 19 ಸ್ಥಾನಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಎನ್‌ಡಿಎ 243 ಸದಸ್ಯ ಬಲದ ವಿಧಾನಸಭೆಯಲ್ಲಿ 202 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ,(ಏಜೆನ್ಸೀಸ್).