ಬೆಂಗಳೂರು: ಕರ್ನಾಟಕದ ಕೋಟ್ಯಾನುಕೋಟಿ ಅಭಿಮಾನಿಗಳ ನಿರೀಕ್ಷೆಯಂತೆ ಗಿಲ್ಲಿ ನಟ ಬಿಗ್‌ಬಾಸ್ 12ನೇ ಸೀಸನ್‌ನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಸುಮಾರು 40 ಕೋಟಿ ವೋಟ್ ಪಡೆಯುವ ಮೂಲಕ ಗಿಲ್ಲಿ ಈ ಸಲದ ಬಿಗ್ಬಾಸ್ನಲ್ಲಿ ಗೆಲುವಿನ ನಗೆ ಬೀರಿದ್ದು, ರಾಜ್ಯದ ಕೋಟ್ಯಾಂತರ ಅಭಿಮಾನಿಗಳ ಪೂಜಾಫಲ, ಹರಕೆ ಸೇರಿದಂತೆ ಇನ್ನಿತರ ಅಭಿಮಾನದ ನಡೆಗಳು ಕೊನೆಗೂ ಕೈಗೂಡಿವೆ.
ಅಂತಿಮವಾಗಿ ಟಾಪ್ 5 ನಲ್ಲಿ ರಘು, ಕಾವ್ಯ, ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿ ಗೌಡ ಇದ್ದರು. ಅಂತಿಮವಾಗಿ ಅಶ್ವಿನಿಗೌಡ ಸ್ಪರ್ಧೆಯಿಂದ ಹೊರಬೀಳುತ್ತಿದ್ದಂತೆ ಗಿಲ್ಲಿ ನಟ ಮತ್ತು ರಕ್ಷಿತಾ ಮಧ್ಯೆ ಪೈಪೋಟಿ ಏರ್ಪಟ್ಟಿತು. ಕೊನೆಗೆ ಕಿಚ್ಚ ಸುದೀಪ್ ಮಂಡ್ಯ ಹೈದನ ಕೈ ಎತ್ತುವ ಮೂಲಕ ಗಿಲ್ಲಿ ನಟನನ್ನು ಬಿಗ್‌ಬಾಸ್ ವಿನ್ನರ್ ಎಂದು ಅಧಿಕೃತವಾಗಿ ಘೋಷಿಸಿದರು. ಗಿಲ್ಲಿಗೆ 50 ಲಕ್ಷ ಹಣದೊಂದಿಗೆ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಪಡೆಯಲಿದ್ದಾರೆ.
ಬಿಗ್ ಬಾಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕಿಚ್ಚ ಸುದೀಪ್
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರೂಪಕ ಕಿಚ್ಚ ಸುದೀಪ್, ಬಿಗ್ ಬಾಸ್ 12 ಕನ್ನಡ ಸ್ಪರ್ಧಿಗಳು, ತಾಂತ್ರಿಕ ತಂಡ ಮತ್ತು ಬಿಗ್ ಬಾಸ್ ತಂಡವನ್ನು ಅಭಿನಂದಿಸಿದ್ದಾರೆ.
ಇಂದು ಸೂರ್ಯಾಸ್ತದ ವೇಳೆಗೆ, #BBK12 ಮುಕ್ತಾಯಗೊಳ್ಳಲಿದೆ.
ಈ ಸೀಸನ್ ಬೆಳವಣಿಗೆ ಮತ್ತು ಅದ್ಭುತದ ಅಸಾಧಾರಣ ಪ್ರಯಾಣ, ಪ್ರತಿ ಹಾದುಹೋಗುವ ಸೀಸನ್‌ನೊಂದಿಗೆ ಬಿಗ್‌ಬಾಸ್‌ನ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ಶ್ರದ್ಧಾಭರಿತ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು, ಎಲ್ಲಾ ಸ್ಪರ್ಧಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಸೀಸನ್‌ನ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಬಿ ಇಲ್ಲ. #BBK13 ಪ್ರಾರಂಭವಾಗುವವರೆಗೆ ವಿಶ್ರಾಂತಿ ಪಡೆಯಲು ನಾವು ಈಗ ಗೌರವಯುತವಾಗಿ ಬಾಗಿಲುಗಳನ್ನು ಮುಚ್ಚುತ್ತೇವೆ. ಲವ್ & ಹಗ್ಸ್ Ķ ಎಂದು ಬರೆದುಕೊಂಡಿದ್ದಾರೆ.