ಕುಂಭಮೇಳ ಸುಂದರಿ ಮೊನಾಲಿಸಾ ಭೋಸ್ಲೆ ಮದುವೆಗೆ ಟ್ವಿಸ್ಟ್ 
ದೇಶ

ವೈರಲ್ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್: ಗಂಡ ಫರ್ಮಾನ್ ಮೇಲೆ ಪೊಕ್ಸೋ ಕೇಸ್ ದಾಖಲು! Monalisa

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳ ಸುಂದರಿ ಮೊನಾಲಿಸಾ ಭೋಸ್ಲೆ ಮದುವೆಗೆ ಟ್ವಿಸ್ಟ್
  • ಮೊನಾಲಿಸಾ ಇನ್ನೂ ಮೈನರ್​ ಎನ್ನುವ ವಿಷಯ ವೈರಲ್​
  • ಪತಿ ಫರ್ಮಾನ್ ಮೇಲೆ ಪೋಕ್ಸೊ ಕೇಸ್​ ದಾಖಲು
ಇಂಧೋರ್​: ಕುಂಭಮೇಳದಲ್ಲಿ ತನ್ನ ಮೋಹಕ ಕಣ್ಣುಗಳಿಂದ ಖ್ಯಾತಿಗಳಿಸಿದ್ದ ಮೊನಾಲಿಸಾ (Monalisa) ಭೋಸ್ಲೆ ಇತ್ತೀಚೆಗೆ ಫರ್ಮಾನ್​ ಖಾನ್​ ಎಂಬಾತನನ್ನು ಮದುವೆಯಾಗುವ ಮೂಲಕ ಮತ್ತೆ ಟ್ರಂಡ್​​ ಆಗುತ್ತಿದ್ದಳು. ಅದರೆ ಈಗ ಮೊನಾಲಿಸಾ ಇನ್ನೂ ವಯಸ್ಕಳಾಗದೆ ಮದುವೆಯಾಗಿದ್ದಾಳೆ ಎಂಬ ದೂರನ್ನು ದಾಖಲಿಸಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ (NCST), ಆಕೆಯ ಗಂಡ ಫರ್ಮಾನ್​ ಖಾನ್​ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಮೊನಾಲಿಸಾ ಮೇಜರ್​ ಅಲ್ಲ; ಮೈನರ್​

ಈ ವೈರಲ್​ ಹುಡುಗಿ ಮೊನಾಲಿಸಾ ಪಾರ್ಡಿ ಬುಡಕಟ್ಟು ಸಮುದಾಯಕ್ಕೆ ಸೇರಿದವಳಾಗಿದ್ದು, NCST ತನಿಖೆಯಲ್ಲಿ ಈಕೆ ಅಪ್ರಾಪ್ತಳೆಂದು ತಿಳಿದು ಬಂದಿದೆ.
ಮದುವೆ ಸಮಯದಲ್ಲಿ ಮೊನಾಲಿಸಾ ಸುಳ್ಳು ಜನನ ಪ್ರಮಾಣಪತ್ರವನ್ನು ನೀಡಿದ್ದಾಳೆ. ಆಕೆ ಜನಿಸಿದ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯು ಮೊನಾಲಿಸಾ ಡಿಸೆಂಬರ್ 30, 2009 ರಂದು ಸಂಜೆ 5:50 ಕ್ಕೆ ಜನಿಸಿದ್ದಾಳೆ ಎಂದು ತಿಳಿಸಿದೆ.
ಆದ್ದರಿಂದ ಮೊನಾಲಿಸಾ ಮದುವೆಯಾದಾಗ ಆಕೆಯ ವಯಸ್ಸು ಕೇವಲ 16 ವರ್ಷ, 2 ತಿಂಗಳು ಮತ್ತು 12 ದಿನಗಳಾಗಿದ್ದು, ಈಗ ಈ ಮದುವೆ ಕಾನೂನು ಬದ್ಧವಾಗುತ್ತದೆಯೇ? ಇಲ್ಲವೇ ಎಂದು ತನಿಖೆ ನಂತರ ತಿಳಿದು ಬರಬೇಕಿದೆ. ಹೀಗಾಗಿ ಆಕೆಯ ಪತಿ ಫರ್ಮಾನ್​ ಮೇಲೆ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ನಿರ್ದೇಶಕ ಸನೋಜ್​ ಮಿಶ್ರಾ ಪ್ರತಿಕ್ರಿಯೆ

ಮೊನಾಲಿಸಾ ಮೈನರ್​ ಎಂಬ ಸುದ್ದಿ ಹೊರ ಬೀಳುತ್ತಿದಂತೆ ನಿರ್ದೇಶಕ ಸನೋಜ್​ ಮಿಶ್ರಾ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಾನು ಈ ಮೊದಲೇ ಹೇಳಿದ್ದೆ ಇದೊಂದು ಲವ್​ ಜಿಹಾದ್​ ಎಂದು, ಈಗ ಮೊನಾಲಿಸಾ ಮೈನರ್​ ಎನ್ನುವ ವಿಷಯ ಕೂಡ ಹೊರಬಿದ್ದಿದೆ. ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ. ಈ ಸತ್ಯ ದೇಶದ ಪ್ರತಿಯೊಬ್ಬರಿಗೂ ನಾನು ತಲುಪಿಸುತ್ತೇನೆ. ಇದಕ್ಕಾಗಿ ನಾನು ಜೈಲಿಗೆ ಹೀಗಲು ಸಿದ್ದನಿದ್ದೆನೆ ಎಂದು ಸನೋಜ್​ ಮಿಶ್ರಾ ಹೇಳಿದ್ದಾರೆ, (ಏಜನ್ಸೀಸ್​).