ಅತ್ತೆ ಗಿರಿಬಾಲಾ ಸಿಂಗ್​, ಪತಿ ಸಮರ್ಥ ಸಿಂಗ್​ ಸಿಬಿಐ ಕಸ್ಟಡಿಗೆ 
ದೇಶ

ತ್ವಿಶಾ ಶರ್ಮಾ ಕೇಸ್‌ಗೆ ಬಿಗ್ ಟ್ವಿಸ್ಟ್: ಅತ್ತೆ ಗಿರಿಬಾಲಾ, ಪತಿ ಸಮರ್ಥ ಸಿಬಿಐ ವಶಕ್ಕೆ; 5 ದಿನಗಳ ಕಸ್ಟಡಿ ವಿಧಿಸಿದ ಭೋಪಾಲ್​ ಕೋರ್ಟ್​! Twisha Sharma Case

ಪ್ರಮುಖ ಮುಖ್ಯಾಂಶಗಳು

  • ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣ
  • ಅತ್ತೆ ಗಿರಿಬಾಲಾ ಸಿಂಗ್​, ಪತಿ ಸಮರ್ಥ ಸಿಂಗ್​ ಸಿಬಿಐ ಕಸ್ಟಡಿಗೆ
  • ಭೋಪಾಲ್​ ನ್ಯಾಯಾಲಯದಿಂದ ಆದೇಶ!
ಭೋಪಲ್​: ನಟಿ, ಮಾಡೆಲ್​ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣ (Twisha Sharma Case) ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಶುಕ್ರವಾರ (ಮೇ.29) ಭೋಪಾಲ್​ ನ್ಯಾಯಾಲಯ ತ್ವಿಶಾ ಶರ್ಮಾಳ ಅತ್ತೆ ಗಿರಿಬಾಲಾ ಸಿಂಗ್​ ಹಾಗೂ ಪತಿ ಸಮರ್ಥ ಸಿಂಗ್​ರನ್ನು ಐದು ದಿನಗಳ ಮಟ್ಟಿಗೆ ಸಿಬಿಐ ಕಸ್ಟಡಿಗೆ ಹಸ್ತಾಂತರಿಸಿ ಆದೇಶಿಸಿದೆ.
ಜೂನ್​.2 ರ ವರೆಗೆ ಸಿಬಿಐ ಕಸ್ಟಡಿಯಲ್ಲಿರುವಂತೆ ನ್ಯಾಯಾಲಯ ಸೂಚಿಸಿದ್ದು, ಇದಕ್ಕೆ ಗಿರಿಬಾಲಾ ಪರ ವಕೀಲರಾಗಲಿ ಅಥವಾ ಸಮರ್ಥ ಸಿಂಗ್​ ಪರ ವಕೀಲರಾಗಲಿ ಯಾವುದೇ ವಿರೋಧವನ್ನು ವ್ಯಕ್ತಪಡಿಸಿಲ್ಲ ಎಂದು ತ್ವಿಶಾ ಶರ್ಮಾರ ವಕೀಲ ಅನುರಾಗ್​ ಶ್ರೀವಾತ್ಸವ್​​ ತಿಳಿಸಿದ್ದಾರೆ.

ನಿವೃತ್ತ ನ್ಯಾಯಾಧೀಶೆ ಅರೆಸ್ಟ್​​!

ಮೇ. 12 ರಂದು ತ್ವಿಶಾ ಶರ್ಮಾ ಸಾವನ್ನಪ್ಪಿದ ದಿನದಿಂದ ಅತ್ತೆ ನಿವೃತ್ತ ನ್ಯಾಯಾಧೀಶೆ, ಗಿರಿಬಾಲಾ ಸಿಂಗ್​ ಮೇಲೆ ಕೊಲೆ ಆರೋಪವನ್ನು ತ್ವಿಶಾ ಕುಟುಂಬದವರು ಮಾಡುತ್ತಿದ್ದರು. ಆದರೆ ಗಿರಿಬಾಲಾ ಸಿಂಗ್​ ಮೇಲೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
ನಂತರ ಇಕೆಯ ಮಗ, ತ್ವಿಶಾಳ ಪತಿ ಸಮರ್ಥ ಸಿಂಗ್​ ನಾಪತ್ತೆಯಾದ ಕಾರಣ ಗಿರಿಬಾಲಾ ಮೇಲೆ ಆರೋಪ ಕೇಳಿಬಂದಿತ್ತು. ಆಗ ಗಿರಿಬಾಲಾ ಮಧ್ಯತಂರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಾಮೀನು ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ನಿನ್ನೆ (ಗುರುವಾರ, ಮೇ.28) ಸಿಬಿಐ ಪೊಲೀಸರು ಗಿರಿಬಾಲಾಳನ್ನು ತಮ್ಮ ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.
ನಾಪತ್ತೆಯಾಗಿದ್ದ ಪತಿ ಪ್ರತ್ಯಕ್ಷ!
ತ್ವಿಶಾ ಶರ್ಮಾ ಸಾವನ್ನಪ್ಪಿದ್ದ ದಿನದಿಂದ ನಾಪತ್ತೆಯಾಗಿದ್ದ ಪರಿ ಸಮರ್ಥ ಸಿಂಗ್​ ಮೇ.23 ಭೋಪಾಲ್​ ನ್ಯಾಯಾಲಯಕ್ಕೆ ಶರಣಾಗಿದ್ದು, ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಈಗ ಈ ಪ್ರಕರಣವನ್ನು ಸಿಬಿಐ ಸಿರ್ವಹಿಸುತ್ತಿರುವ ಕಾರಣ ಜೂನ್​. 2 ರ ವರೆಗೆ ತಾಯಿ-ಮಗ ಸಿಬಿಐ ಕಸ್ಟಡಿಯಲ್ಲಿ ​ಕಾಲ ಕಳೆಯಲಿದ್ದಾರೆ.

ಏನಿದು ತ್ವಿಶಾ ಶರ್ಮಾ ಪ್ರಕರಣ?

ಕಳೆದ ಮೇ 12 ರಂದು ಭೋಪಾಲ್‌ನ ಕತಾರಾ‌ ಹಿಲ್ಸ್‌ನಲ್ಲಿರುವ ತನ್ನ ಪತಿಯ ಮನೆಯಲ್ಲಿ ತ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ಮರುದಿನವೇ ಅಂದರೆ ಮೇ 13 ರಂದು ಮೊದಲ ಮರಣೋತ್ತರ ಪರೀಕ್ಷೆ ನಡೆದಿತ್ತು. ಆದರೆ, ಈ ಮೊದಲ ವರದಿಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಹೊರಬಂದಿವೆ.
ವರದಿಯ ಪ್ರಕಾರ, ತ್ವಿಶಾ ಕುತ್ತಿಗೆಯ ಮೇಲೆ ಎರಡು ಗಂಭೀರವಾದ ಗುರುತುಗಳಿದ್ದವು. ಅಷ್ಟೇ ಅಲ್ಲದೆ ಅವರ ಕೈಗಳು, ಮುಂಗೈ ಮತ್ತು ಬೆರಳುಗಳ ಮೇಲೆಯೂ ಗಾಯದ ಕಲೆಗಳು ಪತ್ತೆಯಾಗಿದ್ದವು. ಯಾರೋ ಅವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಕುಟುಂಬಸ್ಥರು ನಂಬಿದ್ದಾರೆ.
ಅಷ್ಟೇ ಅಲ್ಲದೆ ತ್ವಿಶಾಳ ಪತಿ ಹಾಗೂ ಅತ್ತೆ (ಗಂಡನ ತಾಯಿ) ತನ್ನ ಮಗಳಿಗೆ ವರದಕ್ಷಿಣೆ ಸಂಬಂಧ ನಿರಂತರ ಕಿರುಕುಳ ನೀಡುತ್ತಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿಯವಳಲ್ಲ. ನಮ್ಮ ಮಗಳ ಕೊಲೆ ನಡೆದ ಬಗ್ಗೆ ಅನುಮಾನವಿದೆ ಎನ್ನುವುದು ತ್ವಿಶಾಳ ಪಾಲಕರ ವಾದವಾಗಿದೆ,(ಏಜನ್ಸೀಸ್​).