Jharkhand High Court stays cancellation of 11th–13th JPSC exam 
ದೇಶ

ಜಾರ್ಖಂಡ್ ಸರ್ಕಾರಕ್ಕೆ ಹಿನ್ನಡೆ: JPSC ಮತ್ತು JSSC ಪರೀಕ್ಷೆಗಳ ರದ್ದತಿ ನಿರ್ಧಾರಕ್ಕೆ ಹೈಕೋರ್ಟ್ ತಡೆ.. Jharkhand

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಮಣಿದು ಜೆಪಿಎಸ್​ಸಿ ಮತ್ತು ಜೆಎಸ್​ಎಸ್​​ಸಿ ಪರೀಕ್ಷೆ ರದ್ದುಗೊಳಿಸಿದ್ ಸರ್ಕಾರ
  • ಜಾರ್ಖಂಡ್​ ಸರ್ಕಾರದ ಆದೇಶಕ್ಕೆ ಗುರುವಾರ ತಡೆಯಾಜ್ಞೆ ಹೊರಡಿಸಿದ ಹೈಕೋರ್ಟ್​
  • ಪರೀಕ್ಷೆ ಮೂಲಕ ಸರ್ಕಾರಿ ಹುದ್ದೆಗೆ ನೇಮಕಗೊಂಡಿದ್ದ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್
ರಾಂಚಿ: 

ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಮಣಿದು ಜೆಪಿಎಸ್​ಸಿ ಮತ್ತು ಜೆಎಸ್​ಎಸ್​​ಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ್ದ ಜಾರ್ಖಂಡ್​ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ಗುರುವಾರ ತಡೆಯಾಜ್ಞೆ ನೀಡಿದ್ದು, ಇದರಿಂದಾಗಿ ಪರೀಕ್ಷೆಯಲ್ಲಿ ಪಾಸಾಗಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಕಾನೂನು ಹೋರಾಟಕ್ಕೆ ಕಡೆಗೂ ಜಯ ಸಿಕ್ಕಂತಾಗಿದೆ.

 11  ಮತ್ತು 13ನೇ ಜಾರ್ಖಂಡ್ ಪಬ್ಲಿಕ್ ಸರ್ವೀಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC)  ಪರೀಕ್ಷೆಯಲ್ಲಿ ಉಂಟಾದ ಲೋಪದೋಷ ಉಲ್ಲೇಖಿಸಿ ಅಭ್ಯರ್ಥಿಗಳು ರಾಂಚಿಯಲ್ಲಿ 26 ದಿನಗಳ ಕಾಲ ಕಠಿಣ ಪ್ರತಿಭಟನೆ ನಡೆಸಿದ್ದರು. 

ಪರೀಕ್ಷೆ ರದ್ದು, ಹೋರಾಟ ಕೈಬಿಟ್ಟ ಅಭ್ಯರ್ಥಿಗಳು

ವಿದ್ಯಾರ್ಥಿಗಳ ಹೋರಾಟವು  ಇಡೀ ದೇಶದ ಗಮನ ಸೆಳೆದಿತ್ತು. 26 ದಿನ ನಡೆದ ಈ ಕಠಿಣ ಪ್ರತಿಭಟನೆಗೆ ಮಣಿದ ಜಾರ್ಖಂಡ್​ ಸರ್ಕಾರ ಆಗಸ್ಟ್​ 9ರಂದು ಹೋರಾಟಗಾರರೊಂದಿಗೆ ಮಾತನಾಡಿ, ಪರೀಕ್ಷೆ ರದ್ದುಗೊಳಿಸಿತ್ತು.  ಸಿಐಡಿ ತನಿಖೆಗೂ ಆದೇಶಿಸಿತ್ತು.

 ಇದರಿಂದ ನಿರಾಳರಾಗಿದ್ದ  ಅಭ್ಯರ್ಥಿಗಳು ಹೋರಾಟ ಕೈ ಬಿಟ್ಟರು. ಆದರೆ, ಸಮಸ್ಯೆ ಮತ್ತೆ ಶುರುವಾಗಿದ್ದು ಅಲ್ಲಿಂದಲೇ...

ಹುದ್ದೆಗೆ ನೇಮಕಗೊಂಡವರು ಕಿಡಿ

ಜಾರ್ಖಂಡ್ ಪಬ್ಲಿಕ್ ಸರ್ವೀಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC) ಪರೀಕ್ಷೆ ಬರೆದು ಪಾಸಾಗಿದ್ದ  2 ಸಾವಿರ ಅಭ್ಯರ್ಥಿಗಳು ಹುದ್ದೆಗೆ ನೇಮಕಗೊಂಡು, ಕಚೇರಿಗೆ ಹಾಜರಾಗುವ ಹೊತ್ತಿನಲ್ಲಿ ಸಂಭವಿಸಿದ ಈ ಬದಲಾವಣೆಯಿಂದ ಬೇಸರಗೊಂಡರು. ಸರ್ಕಾರದ ನಿರ್ಧಾರದ ವಿರುದ್ಧ ರೊಚ್ಚಿಗೆದ್ದು,  ಪ್ರತಿಭಟನೆ ನಡೆಸಿದರು.

'ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ ತನಿಖೆಯಾಗಲಿ ಅದಕ್ಕೆ ವಿರೋಧವಿಲ್ಲ ಆದರೆ ಪರೀಕ್ಷೆ ರದ್ದು ಗೊಳಿಸೋದು ಎಷ್ಟು ಸರಿ' ಎಂದು  ಬೇಸರ ವ್ಯಕ್ತಪಡಿಸಿದ್ದರು. 

ಹಣಕಾಸು, ಗೃಹ, ಸಾರಿಗೆ ಹಾಗೂ ಕಾರ್ಮಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2 ಸಾವಿರ ಅಭ್ಯರ್ಥಿಗಳು ಆಯ್ಕೆಗೊಂಡು, ಆಯಾ ಇಲಾಖೆಯ ಕಚೇರಿಗೆ ಹಾಜರಾಗುವ ಹೊತ್ತಿನಲ್ಲಿ ಬಂದ ಸರ್ಕಾರದ ಈ ಆದೇಶದ ವಿರುದ್ಧ ಹೋರಾಟ ಆರಂಭಿಸಿದರು.

ಸಿಐಡಿ ತನಿಖೆ ಚುರುಕು

ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಸಿಐಡಿ ತನಿಖೆ ಚುರುಕುಗೊಂಡಿದ್ದು, ಇಲ್ಲಿಯವರೆಗೂ  ಪ್ರಮುಖ ಆರೋಪಿ ಅಭಯ್​ ತಿವಾರಿ, ಆತನ ಪತ್ನಿ ಸುಷ್ಮಾ ಕುಮಾರಿ ಹಾಗೂ ಸಹೋದರ  ಅಕ್ಷಯ್​ ತಿವಾರಿ ಎಂಬುವವರನ್ನು ಬಂಧಿಸಲಾಗಿದೆ, (ಏಜೆನ್ಸೀಸ್).