ವಿಮಾನದ ಶೌಚಗೃಹದಲ್ಲಿ ಬೀಡಿ ಸೇದುತ್ತಿದ್ದ ವ್ಯಕ್ತಿ ಬಂಧನ (ಸಾಂದರ್ಭಿಕ ಚಿತ್ರ)
- ವಿಮಾನದ ಶೌಚಗೃಹದಲ್ಲಿ ಬೀಡಿ ಸೇದುತ್ತಿದ್ದ ವ್ಯಕ್ತಿ ಬಂಧನ
- ದೆಹಲಿಯಿಂದ ಗೋವಾಗೆ ಹೊರಟಿದ್ದ ಆಕಾಶಾ ಏರ್ ವಿಮಾನ
- ದೆಹಲಿ ಮೂಲದ ಆಶಿಶ್ ಬಂಧಿತ ಆರೋಪಿ
ಪಣಜಿ: ದೆಹಲಿ ಮೂಲಕ ಗೋವಾಗೆ ಹೊರಟಿದ್ದ ಆಕಾಶಾ ಏರ್ (Akasa Air) ವಿಮಾನದ ಶಾಚಗೃಹದಲ್ಲಿ ಪ್ರಯಾಣಿಕನೊಬ್ಬ ಬೀಡಿ ಸೇದಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಈ ಘಟನೆಯು ಶನಿವಾರ (ಮಾ.7) ನಡೆದಿದ್ದು, ಬಂಧಿತನನ್ನು ದೆಹಲಿ ನಿವಾಸಿ ಆಶಿಶ್ ಎಂದು ಗುರುತಿಸಲಾಗಿದ್ದು, ಇತನು ವಿಮಾನ ಸಂಖ್ಯೆ QP1625 ರಲ್ಲಿ ದೆಹಲಿ ಮೂಲಕ ಗೋವಾಗೆ ತೆರೆಳುತ್ತಿದ್ದಾಗ ಈ ಕೆಲಸ ಮಾಡಿದ್ದು ತಿಳಿದು ಬಂದಿದೆ.
ವಿಮಾನಯಾನ ಸಿಬ್ಬಂದಿಗಳ ಪ್ರಕಾರ, ವಿಮಾನ ಆಕಾಶದಲ್ಲಿದ್ದಾಗ ಈ ವ್ಯಕ್ತಿಯು ಶೌಚಗೃಹಕ್ಕೆ ತೆರಳಿ ಬೀಡಿ ಸೇದಿದ್ದು, ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದ್ದು, ಇದರಿಂದ ಇತರೆ ಪ್ರಯಾಣಿಕರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ದೂರಿನಲ್ಲಿ ನಮೂದಿಸಲಾಗಿದೆ.
ವಿಮಾನ ಗೋವಾದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆಶಿಶ್ನನ್ನು ಬಂಧಿಸಲಾಗಿದ್ದು, ಈ ಪ್ರಯಾಣಿಕ ತಮ್ಮ ವಿಮಾನದಲ್ಲಿ ಪ್ರಯಾಣಿಸಿದ್ದ ಮತ್ತು ಇವನು ಶೌಚಗೃಹದಲ್ಲಿ ಬೀಡಿ ಎಳೆಯುತ್ತಿದ್ದಾಗ ನಮ್ಮ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿರುವುದಾಗಿ ಆಕಾಶಾ ಏರ್ ತಿಳಿಸಿದೆ.
ಪ್ರಯಾಣಿಕನ ವಿರುದ್ಧ ಗೋವಾದ ಮೋಪಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ನಾಗರಿಕ ವಿಮಾನಯಾನ ಸುರಕ್ಷತಾ ಕಾಯ್ದೆಯ ವಿರುದ್ಧ ಕಾನೂನುಬಾಹಿರ ಕಾಯ್ದೆಗಳ ನಿಗ್ರಹದ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).