Lizard in meals (ಚಿತ್ರ X)
ಮಧ್ಯಪ್ರದೇಶ: ಹಾಸ್ಟೆಲ್ ಮೆಸ್ಗಳಲ್ಲಿ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗುವುದು ಹೊಸದೇನಲ್ಲ. ವಿದ್ಯಾರ್ಥಿಗಳು ಆಗ್ಗಾಗೆ ಸರಿಯಾಗಿ ಬೇಯಿಸದ ಊಟ ಮತ್ತು ಅಶುದ್ಧ ಪಾತ್ರೆಗಳು ಸೇರಿದಂತೆ ಒಂದಲ್ಲಾ ಒಂದು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಇಂತಹ ಘಟನೆಗಳು ಕಠಿಣ ಸುರಕ್ಷತಾ ಮಾನದಂಡಗಳು ಮತ್ತು ಹಾಸ್ಟೆಲ್ (Lizard in meals) ಆಡಳಿತದಿಂದ ಉತ್ತಮ ಹೊಣೆಗಾರಿಕೆಯ ಅಗತ್ಯತೆಯನ್ನು ಹುಟ್ಟುಹಾಕುತ್ತವೆ.
ಇತ್ತೀಚೆಗೆ, ಭೋಪಾಲ್‌ನ ಕಾಲೇಜು ಹಾಸ್ಟೆಲ್ವೊಂದರಲ್ಲಿ ಇಂತಹ ಪ್ರಕರಣವೊಂದು ಆನ್ಲೈನ್ನಲ್ಲಿ ವ್ಯಾಪಕ ಗಮನ ಸೆಳೆದಿದೆ. ವಿದ್ಯಾರ್ಥಿಯೊಬ್ಬ ಮೆಸ್ನಲ್ಲಿ ಊಟ ಮಾಡುವ ಸಂದರ್ಭದಲ್ಲಿ ಅಸಾಮಾನ್ಯ ವಸ್ತುವನ್ನು ಗಮನಿಸಿದ ನಂತರ ತನ್ನ ಆಹಾರದಲ್ಲಿ ಹಲ್ಲಿ ಬಿದ್ದಿದೆ ಎಂದು ಅಡುಗೆ ಸಿಬ್ಬಂದಿ ಬಳಿ ಮೊರೆ ಹೋಗಿದ್ದಾನೆ. ಈ ವೇಳೆ ಸಿಬ್ಬಂದಿ ಅವನ ಕಳವಳವನ್ನು ಬದಿಗಿಟ್ಟು, ಅದು ಹಲ್ಲಿ ಅಲ್ಲ ಕ್ಯಾಪ್ಸಿಕಂ ತುಂಡು ಎಂದು ಹೇಳಿಕೊಂಡರು.
ಘಟನೆ ಏನು?
ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ಪಲ್ಯ, ಬೇಳೆ ದಾಲ್ ಮತ್ತು ರೊಟ್ಟಿ ತುಂಬಿದ ತಟ್ಟೆಯನ್ನು ತೋರಿಸುವುದನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವಿದ್ಯಾರ್ಥಿ ಊಟದ ಕೋಣೆಯ ಸಿಬ್ಬಂದಿಯನ್ನು ಸಹೋದರ, ದಯವಿಟ್ಟು ಇದು ಏನೆಂದು ನೋಡಿ ಎಂದು ಕೇಳಿದ್ದಾನೆ.
ಆತನ ಗೆಳೆಯ ಇದು ಹಲ್ಲಿಯ ಚರ್ಮ ಎಂದು ಹೇಳಿದ್ದಾರೆ. ಇದರಿಂದ ಭಯಭೀತರಾದ ಯುವಕ ಸಿಬ್ಬಂದಿಯಲ್ಲಿ ಕೇಳಿದಾಗ ಅವರು ಇದು ಹಲ್ಲಿ ಅಲ್ಲ ತರಕಾರಿ ಎಂದು ಕಚ್ಚುವ ಮೂಲಕ ಕ್ಯಾಪ್ಸಿಕಂ ಎಂದು ಸಾಬೀತು ಪಡಿಸಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕ ಜನರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ದೂರು ಪರಿಹಾರವು ಎಷ್ಟು ಆಕ್ರಮಣಕಾರಿಯಾಗಿತ್ತೆಂದರೆ, ಅಲ್ಲಿ ಸತ್ಯವನ್ನು ಸಾಬೀತುಪಡಿಸಲು ಬೇಕಿದ್ದ ಸಾಕ್ಷ್ಯವನ್ನೇ ಸಿಬ್ಬಂದಿ ತಿಂದುಹಾಕಿದರು ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).