ತಿರುವನಂತಪುರಂ: ನಟಿಯ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಇತ್ತೀಚೆಗೆ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ನಟ ದಿಲೀಪ್ರನ್ನು ಮತ್ತೆ ಸಂಸ್ಥೆಗೆ ಸೇರಿಸಿಕೊಳ್ಳುವ ಅವಸರದ ನಿರ್ಧಾರವನ್ನು ಪ್ರಶ್ನಿಸಿ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ, ಮಲಯಾಳಂ ಚಲನಚಿತ್ರೋದ್ಯಮದ ತಾಂತ್ರಿಕ ತಜ್ಞರ ಸಂಘವಾದ ಎಫ್ಇಎಫ್ಕೆಎ (FEFKA) ಗೆ ರಾಜೀನಾಮೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಪಿನ ಕುರಿತು ಮಾತನಾಡಿದ ಭಾಗ್ಯಲಕ್ಷ್ಮೀ, ಪ್ರಧಾನ ಸೆಷನ್ಸ್ ನ್ಯಾಯಾಲಯದ ತೀರ್ಪು ಮಾತ್ರ ಹೊರಬಂದಿದೆ. ಇನ್ನು ಸುಪ್ರೀಂ ಕೋರ್ಟ್ ತೀರ್ಪು ಬಾಕಿ ಇದೆ. ಸಾಬೀತುಪಡಿಸಲು ಅನೇಕ ವಿಷಯಗಳಿವೆ. ಇದು 21 ಸಾಕ್ಷಿಗಳು ಪ್ರತಿಕ್ರಿಯೆ ನೀಡಿದ ಪ್ರಕರಣ. ಹಣ ಮತ್ತು ಪ್ರಭಾವದಿಂದ ಅಪರಾಧಿಗಳು ಈ ಪ್ರಕರಣದಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿರುವುದನ್ನು ನಾನು ಕೇಳಿದ್ದೇನೆ ಎಂದರು.
ನಟಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಒಂದರಿಂದ ಆರನೇ ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದೆ. ನಟ ದಿಲೀಪ್ 8 ನೇ ಆರೋಪಿಯಾಗಿದ್ದು, ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿತು.
ನ್ಯಾಯಾಲಯವು ಡಿಸೆಂಬರ್ 12 ರಂದು ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು. ಹಾಗೆಯೇ, ನ್ಯಾಯಾಲಯವು ಆರೋಪಿಗಳ ಜಾಮೀನನ್ನು ರದ್ದುಪಡಿಸಿದೆ. ಇನ್ನು ಆರೋಪಿ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್, ವಿಜೀಶ್, ಸಲೀಂ, ಪ್ರದೀಪ್ ಅವರನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಆದಾಗ್ಯೂ, ಚಾರ್ಲಿ ಥಾಮಸ್, ಸನಿಲ್ ಕುಮಾರ್, ಶರತ್ ಜಿ ಅವರನ್ನು ಪ್ರಕರಣದಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.
ದಿಲೀಪ್ ಅವರ ಪ್ರತಿಕ್ರಿಯೆ
ನ್ಯಾಯಾಲಯ ದಿಲೀಪ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ನಂತರ ಅವರು ಪ್ರತಿಕ್ರಿಯೆ ನೀಡಿದ್ದು, ಕಳೆದ ವರ್ಷ ನನ್ನ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡರ ಮೇಲೂ ಭಾರಿ ಪರಿಣಾಮ ಬೀರಿದೆ. ನನ್ನ ಕುಟುಂಬ ಯಾರೂ ಅನುಭವಿಸಬಾರದ ನೋವನ್ನು ಅನುಭವಿಸಿದೆ. ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೆ, ಆದರೆ, ಅದು ಇಂದು ಮೇಲುಗೈ ಸಾಧಿಸಿದೆ ಎಂದು ಹೇಳಿದರು (ಏಜೆನ್ಸೀಸ್).