ಬೆಂಗಳೂರು: ಬೆಂಗಳೂರಿನ ಜನನಿ ಬಿಡ ರಸ್ತೆಯಲ್ಲಿ ಅಪಘಾತಗಳಾಗೋದು ಸಾಮಾನ್ಯ. ಈ ಸಮಯದಲ್ಲಿ ವಾಹನ ಮಾಲೀಕರ ಜೊತೆಗೆ ವಾದ-ವಿವಾದಗಳು ಆಗುವುದಂತೂ ನಾವು ನೋಡಿರುತ್ತೇವೆ. ಆದರೆ, ಸ್ಕೂಟರ್ನಲ್ಲಿ (Road Accident) ಬರುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಾರಿಗೆ ಡಿಕ್ಕಿ ಹೊಡೆದ ನಂತರವು ಮಾಲೀಕ ಶಾಂತ ರೀತಿಯಿಂದ ವರ್ತಿಸಿರುವ ಕ್ಲಿಪ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಸ್ಟ್ನಲ್ಲೇನಿದೆ?
ಕರ್ನಾಟಕ ಪೋರ್ಟ್‌ಫೋಲಿಯೊ X ನಲ್ಲಿ ಹಂಚಿಕೊಂಡ ಈ ವೀಡಿಯೊದಲ್ಲಿ, ಸ್ಕೂಟರ್ ಸವಾರನೊಬ್ಬ ಪಾದಚಾರಿ ರಸ್ತೆಯಲ್ಲಿ ಸವಾರಿ ಮಾಡಿ ನಂತರ ಕಾರಿಗೆ ಡಿಕ್ಕಿ ಹೊಡೆಯುತ್ತಿರುವುದನ್ನು ತೋರಿಸುತ್ತದೆ. ಆ ವೇಳೆ ಕಾರಿನ ಮಾಲೀಕ ಕೋಪಗೊಳ್ಳುವುದರ ಬದಲಿಗೆ ಆತನಿಗೆ ಸಹಾಯ ಮಾಡುತ್ತಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನವನ್ನು ಸೆಳೆದಿದೆ. ಆದಾಗ್ಯೂ, ನಗರದ ಜನದಟ್ಟಣೆಯ ಬೀದಿಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಜನರು ರಸ್ತೆಯಲ್ಲೇ ಜಗಳವಾಡುವುದು ಅಥವಾ ತಾಳ್ಮೆ ಕಳೆದುಕೊಳ್ಳುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇಂತಹ ಗಂಭೀರ ಸಮಸ್ಯೆ ಸಂಭವಿಸಿದರೂ ಕೂಡಾ, ಕಾರು ಮಾಲೀಕನ ಸಹಾಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಪಾದಚಾರಿ ರಸ್ತೆಯಲ್ಲಿ ಚಾಲಕ ಸವಾರಿ ಮಾಡಿರುವುದು ತಪ್ಪಾಗಿ ಕಾಣಿಸುತ್ತಿದ್ದರೂ ಕಾರು ಮಾಲೀಕನ ಶಾಂತತೆ ನೋಡಿ ಅನೇಕರು ಫಿದಾ ಆಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆದಷ್ಟು ಜನ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಈ ಚಾಲಕ ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸುತ್ತಾನೆ ಎಂದು ವಿಡಿಯೋ ಮತ್ತಷ್ಟು ವಿವರಿಸಿದೆ.
ಒಬ್ಬ ಬಳಕೆದಾರರು ಈ ವಿಡಯೋಕ್ಕೆ ನಮ್ಮ ರಸ್ತೆಗಳಲ್ಲಿ ಎರಡು ಮನಸ್ಥಿತಿಗಳು ಎರಡು ವಿಭಿನ್ನ ಫಲಿತಾಂಶಗಳನ್ನು ಹೇಗೆ ಸೃಷ್ಟಿಸಬಹುದು ಎಂಬುದಕ್ಕೆ ಇದು ಸೂಕ್ತ ಉದಾಹರಣೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್).