ವಂದೇ ಭಾರತ್​ ಸ್ಲೀಪರ್​ ರೈಲು 
ದೇಶ

ಬೆಂಗಳೂರು ಟು ಮುಂಬೈ ಪ್ರಯಾಣಿಕರಿಗೆ ಗುಡ್​ನ್ಯೂಸ್; ನ.3ರಿಂದ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಸೇವೆ ಆರಂಭ..Vande Bharat

  • ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭ.

  • ನವೆಂಬರ್ 3 ರಿಂದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ವಾಣಿಜ್ಯ ಸೇವೆ.

  • ನವೆಂಬರ್ 1 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ರಿಂದ ರೈಲು ಸೇವೆಗೆ ಚಾಲನೆ.

Bengaluru-Mumbai Vande Bharat: ಮುಂಬೈಗೆ ಟ್ರೈನ್​ನಲ್ಲಿ ಪ್ರಯಾಣಿಸುವುದು ತುಂಬಾನೆ ಸಮಯ ಹಿಡಿಯುತ್ತದೆ. ಇದೊಂದು ವ್ಯರ್ಥದ ಪ್ರಯತ್ನ ಎಂದು ದುಬಾರಿ ಹಣ ಕೊಟ್ಟು ಫ್ಲೈಟ್​ನಲ್ಲಿ ಕೆಲವರು ಪ್ರಯಾಣಿಸುತ್ತಾರೆ. ಇನ್ನೂ ಕೆಲಸವರು ಸಾಮಾನ್ಯ ರೈಲಿನಲ್ಲಿಯೇ 22 ಗಂಟೆಗಳ ಕಾಲ ಪ್ರಯಾಣಿಸುತ್ತಾರೆ. ಆದರೆ, ಇನ್ಮುಂದೆ ಆ ಚಿಂತೆ ಬೇಡ. ಏಕೆಂದರೆ, ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುವರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್​ನ್ಯೂಸ್​ ಕೊಟ್ಟಿದೆ.

ಹೌದು, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನವೆಂಬರ್ 3 ರಿಂದ ತನ್ನ ವಾಣಿಜ್ಯ ಸೇವೆಯನ್ನು ನೀಡಲಿದೆ. ನವೆಂಬರ್ 1 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಳಿಗ್ಗೆ 10.30 ಕ್ಕೆ ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಪ್ರೀಮಿಯಂ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಸಮಯವೇನು?

ನವೆಂಬರ್ 1 ರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ನಡುವೆ ರೈಲು ಸಂಚರಿಸಲಿದೆ. ಸುಮಾರು 1,000 ಕಿ.ಮೀ ದೂರವನ್ನು 15 ಗಂಟೆ 45 ನಿಮಿಷ ಕ್ರಮಿಸಲಿದೆ. ಸಾಮಾನ್ಯ ರೈಲಿಗಿಂತ 5 ರಿಂದ 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸಲಿದೆ ಎನ್ನಲಾಗಿದೆ.

ಪ್ರತಿ ಸೋಮವಾರ ಹೊರತುಪಡಿಸಿ ರೈಲು ಸಂಖ್ಯೆ 27652 SMVT ಬೆಂಗಳೂರಿನಿಂದ ರಾತ್ರಿ 10ಕ್ಕೆ ಹೊರಟು, ಮದುದಿನ ಮಧ್ಯಾಹ್ನ 1:50 ಕ್ಕೆ ಮುಂಬೈಗೆ ತಲುಪಲಿದೆ. 27651 ಸಂಖ್ಯೆಯ ಈ ರೈಲು ಮಂಗಳವಾರ ಬಿಟ್ಟು ಬೇರೆಲ್ಲ ದಿನವೂ ಮುಂಬೈನಿಂದ 1;30ಕ್ಕೆ ಹೊರಟು ಮರುದಿನ ಮಧ್ಯಾಹ್ನ 2:50 ಕ್ಕೆ ಬೆಂಗಳೂರು ರೀಚ್​ ಆಗಲಿದೆ.

ಎಲ್ಲೆಲ್ಲಿ ಸ್ಟಾಪ್ ಇರಲಿದೆ?

ಕಲಬುರಗಿ, ರಾಯಚೂರು, ಗುಂತಕಲ್, ಕಲ್ಯಾಣ್, ಪುಣೆ, ಸೋಲಾಪುರದಂತಹ ಪ್ರಮುಖ ನಿಲ್ದಾಣದಲ್ಲಿ ಸ್ಟಾಫ್ ಇರಲಿದೆ. 3AC ಬರ್ತ್‌ಗೆ ಆನ್‌ಬೋರ್ಡ್ ಊಟ ಸೇರಿದಂತೆ ಸುಮಾರು 3,000 ರೂ.ರೈಲು ಪ್ರಯಾಣದ ಟಿಕೆಟ್​ ದರ ಇರಬಹುದು ಎಂದು ಅಂದಾಜಿಸಲಾಗಿದೆ.

ವಂದೇ ಭಾರತ್​ ರೈಲು ಎರಡು ನಗರಗಳ ಪ್ರಯಾಣವನ್ನು ವೇಗಗೊಳಿಸುತ್ತದೆ. ಏಕೆಂದರೆ ಈ ನಗರಕ್ಕೆ ಸೂಪರ್​ ಫಾಸ್ಟ್​ ರೈಲು ಸೇವೆ ಇಲ್ಲ. ಸದ್ಯ ಅಸ್ತಿತ್ವದಲ್ಲಿರುವ ರೈಲುಗಳು ಪ್ರತಿ ಮಾರ್ಗಕ್ಕೆ 22-24 ಗಂಟೆಗಳ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ.

ವಂದೇ ಭಾರತ್​ ಸ್ಲೀಪರ್ ರೈಲಿನ ಸೌಲಭ್ಯ?

ವಂದೇ ಭಾರತ್​ ಸ್ಲೀಪರ್​ ರೈಲಿನಲ್ಲಿ ಆರ್​ಎಸಿ ಸೌಲಭ್ಯ ಇರುವುದಿಲ್ಲ. ಕನ್ಫರ್ಮ್​ ಆದ ಸೀಟನ್ನು ಮಾತ್ರ ನೀಡಲಾಗುತ್ತದೆ. 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಕವಚ್​ ತಂತ್ರಜ್ಞಾನ ಅಳವಡಿಸಲಾಗಿದೆ. ವೈಫೈ ಸೌಲಭ್ಯ, ಮಾಡ್ಯುಲರ್​ ಬರ್ತ್​​, ಪ್ರತಿ ಸೀಟಿಗೂ ಚಾರ್ಜಿಂಗ್​ ಪಾಯಿಂಟ್​​ ಮತ್ತು ಬಯೋ ವಾಕ್ಯುಮ್ ಶೌಚಾಲಯವಿದೆ. ಹಿರಿಯ ನಾಗರಿಕರಿಗೆ ಮತ್ತು ಗರ್ಭಿಣಿಯರಿಗೆ ಕೆಳಗಿನ ಬರ್ತ್​ ಕಾಯ್ದಿರಿಸಲು ವಿಶೇಷ ಕೋಟಾ ಇರಲಿದೆ, (ಏಜೆನ್ಸೀಸ್).