Bengal teen stays in pond ಸಾಂದರ್ಭಿಕ ಚಿತ್ರ 
ದೇಶ

ನೀರಿನಿಂದ ಹೊರಬಂದರೆ ತಡೆಯಲಾಗದ ಉರಿ! ಚಿಕಿತ್ಸೆಗೂ ಹಣವಿಲ್ಲದೆ ಕೆರೆಯನ್ನೇ ಮನೆಯಾಗಿಸಿಕೊಂಡ 16ರ ಯುವಕನ ಕಣ್ಣೀರಿನ ಕಥೆ.. Bengal teen stays in pond

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾ ಪ್ರದೇಶದಲ್ಲಿ 16 ವರ್ಷದ ಇಕ್ಬಾಲ್ ಶೇಖ್ ಎಂಬ ಬಾಲಕನೊಬ್ಬ ಸತತವಾಗಿ ಕೆರೆಯ ನೀರಿನಲ್ಲೇ ದಿನಗಳನ್ನು ಕಳೆಯುತ್ತಿರುವುದು (Bengal teen stays in pond) ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರ ಪ್ರಕಾರ, ಈ ಬಾಲಕ ಕೆಲವೊಮ್ಮೆ ಸತತ ಒಂದು ವಾರದವರೆಗೆ ಕೆರೆಯ ನೀರಿನಲ್ಲೇ ಇರುತ್ತಿದ್ದು, ತೀರಾ ಅಪರೂಪಕ್ಕಷ್ಟೇ ದಂಡೆಗೆ ಮರಳುತ್ತಿದ್ದಾನೆ ಎಂದು ಹೇಳಿದ್ದಾರೆ.

ನೀರಿನಿಂದ ಹೊರಬಂದರೆ ತೀವ್ರ ಉರಿ

ಇಕ್ಬಾಲ್ ತನ್ನ ಮನೆಯನ್ನು ತೊರೆದು ಬೆಲ್ದಂಗಾ ಸುತ್ತಮುತ್ತಲಿನ ವಿವಿಧ ಕೆರೆಗಳಲ್ಲಿ ಹಗಲು- ರಾತ್ರಿ ಎನ್ನದೇ ನೀರಿನಲ್ಲೇ ಉಳಿಯುತ್ತಾನೆ. ನೀರಿನಿಂದ ಹೊರಬಂದ ತಕ್ಷಣ ಅವರ ದೇಹದಲ್ಲಿ ಒಂದು ರೀತಿಯಲ್ಲಿ ಸಹಿಸಲಾಗದ ತೀವ್ರ ಉರಿ ಅನುಭವವಾಗುತ್ತದೆ ಮತ್ತು ಕೆರೆಗೆ ಇಳಿದ ನಂತರ ಅವರಿಗೆ ಸಮಾಧಾನವಾಗುತ್ತದೆ ಎಂದು ಬಾಲಕ ಹಂಚಿಕೊಂಡಿದ್ದಾರೆ. ಆದಾಗ್ಯೂ, ತನ್ನ ದೇಹದಲ್ಲಿ ಆಗುತ್ತಿರುವ ಈ ಬದಲಾವಣೆಗೆ ಯಾವುದೋ ಅದೃಶ್ಯ ಅಥವಾ ಅಜ್ಞಾತ ಶಕ್ತಿಯೇ ಕಾರಣ ಎಂದು ಆತ ಭಾವಿಸಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ

ದಿನಗಟ್ಟಲೆ ನೀರಿನಲ್ಲೇ ಮುಳುಗಿರುವುದರಿಂದ ಬಾಲಕನ ದೈಹಿಕ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದ್ದು, ಆತನ ಕೈ, ಕಾಲು ಹಾಗೂ ದೇಹದ ಚರ್ಮದ ಬಣ್ಣ ಸಂಪೂರ್ಣವಾಗಿ ಬಿಳಿಚಿಕೊಂಡಿದೆ. ನಿರಂತರವಾಗಿ ನೀರಿನಲ್ಲೇ ಇರುವುದರಿಂದ ಆತನಿಗೆ ವಿಪರೀತ ಶೀತ ಮತ್ತು ಕೆಮ್ಮಿನ ಲಕ್ಷಣಗಳು ತೀವ್ರವಾಗಿ ಕಾಣೊಸೊಕೊಂಡಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ವೈದ್ಯಕೀಯ ನೆರವಿನ ಅಭಾವ ಹಾಗೂ ಬಡತನ

ತನ್ನ ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಇಕ್ಬಾಲ್ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರೂ, ಅಲ್ಲಿ ಸೂಕ್ತ ವೈದ್ಯಕೀಯ ತಪಾಸಣೆ ದೊರೆತಿಲ್ಲ. ಇನ್ನೊಂದೆಡೆ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಕಷ್ಟವಾಗಿರುವುದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಹೆತ್ತವರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕೆರೆಯ ದಂಡೆಯಲ್ಲಿ ನೆರೆಯುತ್ತಿರುವ ಜನ

ಈ ವಿಚಿತ್ರ ಸಂಗತಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಪ್ರತಿದಿನ ಶಾಲಾ ಮಕ್ಕಳು ಸೇರಿದಂತೆ ನೂರಾರು ಗ್ರಾಮಸ್ಥರು ಆತನನ್ನು ನೋಡಲು ಕೆರೆಯ ದಂಡೆಯ ಬಳಿ ಜಮಾಯಿಸುತ್ತಿದ್ದಾರೆ. ಕೆಲವರು ಆತನಿಗೆ ಅವಲಕ್ಕಿ, ಬಿಸ್ಕತ್ತು ಹಾಗೂ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ. ಆದಾಗ್ಯೂ, ಅವರನ್ನು ನೀರಿನಿಂದ ಹೊರತರಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಆತ ಅಲ್ಲಿಂದ ಹೊರ ಬರಲು ಒಪ್ಪುತ್ತಿಲ್ಲ.

ಸೂಕ್ತ ಚಿಕಿತ್ಸೆಯ ಅಗತ್ಯ

ಬಾಲಕ ಅನುಭವಿಸುತ್ತಿರುವ ಈ ತೀವ್ರ ಉರಿಗೆ ಸೂಕ್ತ ವೈದ್ಯಕೀಯ ಹಾಗೂ ಚರ್ಮರೋಗ ತಜ್ಞರ ತಪಾಸಣೆಯ ಅಗತ್ಯವಿದೆ. ಸ್ಥಳೀಯರಲ್ಲಿ ದೈವಿಕ ಅಥವಾ ಅದೃಶ್ಯ ಶಕ್ತಿಯ ಚರ್ಚೆಗಳು ನಡೆಯುತ್ತಿದ್ದರೂ, ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಬಾಲಕನ ಜೀವಕ್ಕೆ ಅಪಾಯವಾಗುವ ಮುನ್ನ ಆತನಿಗೆ ತಕ್ಷಣದ ಮಾನಸಿಕ ಹಾಗೂ ದೈಹಿಕ ಆರೋಗ್ಯ ನೆರವು ಸಿಗಬೇಕಿದೆ (ಏಜೆನ್ಸೀಸ್​).