ಬಂಗಾಳ ಕುಟುಂಬದ ಪವಾಡ ಪುನರ್ಮಿಲನ
ಪಶ್ಚಿಮ ಬಂಗಾಳ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ವಿಶೇಷ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಸಂಭವಿಸಿದೆ.
ಹೌದು, ಸುಮಾರು ನಾಲ್ಕು ದಶಕಗಳಿಂದ ಬೇರ್ಪಟ್ಟಿದ್ದ ಕುಟುಂಬವನ್ನು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಮತ್ತೆ ಒಂದುಗೂಡಿಸಿದೆ. ಇದು ನಿಮಗೆ ಆಶ್ಚರ್ಯವೆನಿಸಿದರು ಇದು ಸತ್ಯ.
ಚಕ್ರವರ್ತಿ ಎಂಬ ಕುಟುಂಬ 1988 ರಲ್ಲಿ ತಮ್ಮ ಹಿರಿಯ ಮಗ ವಿವೇಕ್ ಚಕ್ರವರ್ತಿ ಎಂಬುವವರನ್ನ ಕಳೆದುಕೊಂಡಿತ್ತು. ವಿವೇಕ್ ಮನೆ ಬಿಟ್ಟು ಹೋದ ನಂತರ ಕಾಣೆಯಾಗಿದ್ದ. ವರ್ಷಗಳ ಹುಡುಕಾಟ ಕೂಡ ನಡೆಯಿತು. ಎಷ್ಟೇ ದಿನ ಹುಡುಕಾಟ ನಡೆದರೂ ಯಾವುದೇ ಕುರುಹು ಸಿಗಲಿಲ್ಲ. ಮತ್ತೆ ಒಂದಾಗುವ ಭರವಸೆಯನ್ನು ಕೊನೆಗೂ ಕೈಚಲ್ಲಿದ್ದರು. ಆದರೆ, ಅದೃಷ್ಟವಶಾತ್ 37 ವರ್ಷಗಳ ಬಳಿಕ ಇದೀಗ SIR ಅಭಿಯಾನವು ಈ ಕುಟುಂಬವನ್ನು ಮತ್ತೆ ಒಂದು ಮಾಡಿದೆ.
ಇಡೀ ರಹಸ್ಯ ಹೇಗೆ ಬಹಿರಂಗವಾಗಿದ್ದೇಗೆ..?
ವಿವೇಕ್ ಅವರ ಕಿರಿಯ ಸಹೋದರನ ಹೆಸರು ಪ್ರದೀಪ್ ಚಕ್ರವರ್ತಿ. ಅವರು ಅದೇ ಪ್ರದೇಶದಲ್ಲಿ ಬೂತ್ ಲೆವೆಲ್ ಆಫೀಸರ್ (ಬಿಎಲ್‌ಒ). ಎಸ್‌ಐಆರ್ ಸಮಯದಲ್ಲಿ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಪ್ರತಿಯೊಂದು ಫಾರ್ಮ್‌ನಲ್ಲಿ ಮುದ್ರಿಸಲಾಗಿತ್ತು. ವಿವೇಕ್ ಅವರ ಮಗ ಕೋಲ್ಕತ್ತಾದಲ್ಲಿ ವಾಸಿಸುತ್ತಾನೆ ಮತ್ತು ಅವನ ಚಿಕ್ಕಪ್ಪನ ಬಗ್ಗೆ ಅವನಿಗೆ ಏನೂ ತಿಳಿದಿರಲಿಲ್ಲ. ದಾಖಲೆಗಳಿಗೆ ಸಹಾಯ ಕೇಳಲು ಅವನು ಪ್ರದೀಪ್‌ಗೆ ಕರೆ ಮಾಡಿದನು. ಆರಂಭದಲ್ಲಿ, ಚರ್ಚೆ ಕಾಗದಪತ್ರಗಳ ಬಗ್ಗೆಯಾಗಿತ್ತು, ಆದರೆ ಕ್ರಮೇಣ, ಕುಟುಂಬವು ಸಂಪರ್ಕ ಸಾಧಿಸಲು ಪ್ರಾರಂಭಿಸಿತು.
ಪ್ರದೀಪ್ ಹೇಳಿದರು, "ನನ್ನ ಅಣ್ಣ ಕೊನೆಯದಾಗಿ 1988 ರಲ್ಲಿ ಮನೆಗೆ ಬಂದನು. ಅಂದಿನಿಂದ ಅವನು ಕಾಣೆಯಾಗಿದ್ದಾನೆ. ನಾವು ಎಲ್ಲೆಡೆ ಹುಡುಕಿದೆವು, ಆದರೆ ಅವನು ಎಲ್ಲಾ ಸಂಬಂಧಗಳನ್ನು ಮುರಿದುಬಿಟ್ಟನು. ಈ ಹುಡುಗನ ಉತ್ತರಗಳು ನಮ್ಮ ಕುಟುಂಬದ ಬಗ್ಗೆ ನಮಗೆ ಮಾತ್ರ ತಿಳಿದಿರುವ ವಿಷಯಗಳಿಗೆ ಹೊಂದಿಕೆಯಾಗಲು ಪ್ರಾರಂಭಿಸಿದಾಗ, ನಾನು ನನ್ನ ಸೋದರಳಿಯನೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಅರಿವಾಗಿದೆ." ಹೀಗೆ 37 ವರ್ಷಗಳು ಕುಟುಂಬ ಮತ್ತೆ ಒಂದಾಗಿದೆ.
ಸುದೀರ್ಘ 37 ವರ್ಷಗಳು ಬಳಿಕ ಮತ್ತೆ ನನ್ನ ಕುಟುಂಬಕ್ಕೆ ಮರಳಿದ್ದು ನನಗೆ ತುಂಬಾ ಅಂದ್ರೆ ತುಂಬಾನೇ ಸಂತೋಷವಾಗಿದೆ. ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಏಕೆಂದ್ರೆ SIR ಪ್ರಕ್ರಿಯಿಂದಲೇ ಇದು ಸಾಧ್ಯವಾಗಿದೆ ಎಂದು ಕುಟಂಬಕ್ಕೆ ಮರಳಿದ ವಿವೇಕ್ ಚಕ್ರವರ್ತಿ ಹೇಳಿದ್ದಾರೆ(ಏಜೆನ್ಸೀಸ್).