Abhishek Banerjee | ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ 
ದೇಶ

ಸೇಡಿಗೆ ಮುಂದಾಯ್ತಾ ಸುವೇಂದು ಸರ್ಕಾರ..? ಅಭಿಷೇಕ್ ಬ್ಯಾನರ್ಜಿಗಿಲ್ಲ ಇನ್ನು Z+ ರಕ್ಷಣೆ! | Abhishek Banerjee

ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ನೀಡಿದ್ದ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ರಾಜ್ಯ ಗೃಹ ಸಚಿವಾಲಯ ಮತ್ತು ಭದ್ರತಾ ಸಂಸ್ಥೆಗಳು ನಡೆಸಿದ ಬೆದರಿಕೆ ಗ್ರಹಿಕೆ ಮೌಲ್ಯಮಾಪನದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದು ರಾಜ್ಯದಲ್ಲಿನ ರಾಜಕೀಯ ಸ್ಥಿತ್ಯಂತರದ ಪ್ರತಿಬಿಂಬದಂತೆ ಕಂಡುಬರುತ್ತಿದೆ.
ಅಭಿಷೇಕ್ ಬ್ಯಾನರ್ಜಿಗೆ ಈ ಹಿಂದೆ ನೀಡಲಾಗುತ್ತಿದ್ದ ಉನ್ನತ ಮಟ್ಟದ 'Z+' ವರ್ಗದ ಭದ್ರತೆಯನ್ನು ಈಗ ಹಿಂಪಡೆಯಲಾಗಿದ್ದು, ಇನ್ನು ಮುಂದೆ ಅವರು ಕೇವಲ ಸಂಸದರಿಗೆ ನಿಗದಿಪಡಿಸಲಾದ ಸಾಮಾನ್ಯ ಭದ್ರತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ರಕ್ಷಣೆ ಪಡೆಯಲಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಕೋಲ್ಕತ್ತಾದ ಹರೀಶ್ ಮುಖರ್ಜಿ ರಸ್ತೆ ಮತ್ತು ಕಾಳೀಘಾಟ್‌ನಲ್ಲಿರುವ ಅವರ ನಿವಾಸಗಳ ಸುತ್ತಲಿದ್ದ ಹೆಚ್ಚಿನ ಭದ್ರತಾ ವ್ಯವಸ್ಥೆ, ಪೊಲೀಸ್ ಕಿಯೋಸ್ಕ್ ಮತ್ತು ಬ್ಯಾರಿಕೇಡ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇತ್ತ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅವರ Z+ ವರ್ಗದ ಭದ್ರತೆಯು ಮುಂದುವರಿಯಲಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಬೆಳವಣಿಗೆ ನಡೆದಿದ್ದು, ಕಳೆದ ತಿಂಗಳು ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 294 ಕ್ಷೇತ್ರಗಳ ಪೈಕಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಸಾಧಿಸಿದೆ. ಈ ಮೂಲಕ ರಾಜ್ಯದಲ್ಲಿ ಸುದೀರ್ಘ 15 ವರ್ಷಗಳ ಟಿಎಂಸಿ ಆಳ್ವಿಕೆ ಅಂತ್ಯಗೊಂಡಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಸರ್ಕಾರವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ನಡೆದಿದೆ.
ಭದ್ರತಾ ಸಂಸ್ಥೆಗಳ ಪ್ರಕಾರ, ವಿಐಪಿಗಳ ಭದ್ರತೆಯು ನಿರಂತರವಾಗಿ ಬದಲಾಗುವ ಪ್ರಕ್ರಿಯೆಯಾಗಿದ್ದು, ಗುಪ್ತಚರ ಮಾಹಿತಿ ಮತ್ತು ಪ್ರಸ್ತುತ ಅಪಾಯಕಾರಿ ಅಂಶಗಳನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಈ ಬದಲಾವಣೆಯು ಆಡಳಿತಾತ್ಮಕ ಪ್ರೋಟೋಕಾಲ್‌ನ ಒಂದು ಭಾಗ ಎಂದು ಮೂಲಗಳು ತಿಳಿಸಿವೆಯಾದರೂ, ರಾಜಕೀಯ ವಲಯದಲ್ಲಿ ಇದು ತೀವ್ರ ಚರ್ಚೆಗೆ ಗ್ರಹಸಾಗಿದೆ

ಬಂಗಾಳದ ಕಲ್ಯಾಣವೇ ನಮಗೆ ಸರ್ವೋಚ್ಚ ಎಂದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಮೊದಲ ಸಂಪುಟ ನಿರ್ಧಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದು, ಇವುಗಳನ್ನು ಜನರ ಕಲ್ಯಾಣದ ನಿಟ್ಟಿನಲ್ಲಿ ಕೈಗೊಂಡ ಮಹತ್ವದ ಕ್ರಮಗಳು ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಅನುಮೋದನೆ ನೀಡಿರುವುದಕ್ಕೆ ಪ್ರಧಾನಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಎಂ ಸುವೇಂದು ಅಧಿಕಾರಿ ತೆಗೆದುಕೊಂಡ 6 ಪ್ರಮುಖ ನಿರ್ಧಾರಗಳು
ಮೇ 9 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಸೋಮವಾರ ತಮ್ಮ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಆರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ಸಭೆಯಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡಿ ಭದ್ರತಾ ಪಡೆಗೆ (BSF) ಭೂಮಿಯನ್ನು ವರ್ಗಾಯಿಸಲು ಮಹತ್ವದ ಒಪ್ಪಿಗೆ ನೀಡಲಾಗಿದೆ(ಏಜೆನ್ಸೀಸ್​​).