ಕಷ್ಟ ಅಂತ ಅಥವಾ ಸುಮ್ಮನೇ ಸಾಲ ತೆಗೆದುಕೊಳ್ಳುವ ಮುನ್ನ ಚಾಣಕ್ಯ ಹೇಳಿದ ಈ ಮಾತನ್ನು ಒಮ್ಮೆ ತಪ್ಪದೇ ಓದಿ... Chanakyaniti 
ದೇಶ

ಕಷ್ಟ ಅಂತ ಅಥವಾ ಸುಮ್ಮನೇ ಸಾಲ ತೆಗೆದುಕೊಳ್ಳುವ ಮುನ್ನ ಚಾಣಕ್ಯ ಹೇಳಿದ ಈ ಮಾತನ್ನು ಒಮ್ಮೆ ತಪ್ಪದೇ ಓದಿ... Chanakyaniti

ಪ್ರಮುಖ ಮುಖ್ಯಾಂಶಗಳು

  • ಅರ್ಥಶಾಸ್ತ್ರ ರಾಜಕೀಯ ಸೇರಿದಂತೆ ಹಲವು ವಿಷಯಗಳಲ್ಲಿ ಅಗಾಧ ಜ್ಞಾನ ಹೊಂದಿರುವ ಚಾಣಕ್ಯ
  • ಮನುಷ್ಯನ ಯಶಸ್ಸು ಮತ್ತು ಸಂತೋಷದ ಜೀವನದ ರಹಸ್ಯಗಳನ್ನು ತಿಳಿಸುವ ಚಾಣಕ್ಯ ನೀತಿ
  • ಸಾಲ ನೀಡುವ ಮೊದಲು ಎದುರಿನ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಅಂದಾಜು ಮಾಡಬೇಕು
  • ಸಾಲವನ್ನು ಆದಷ್ಟು ಬೇಗ ತೀರಿಸುವುದರಿಂದ ಸಮಾಜದಲ್ಲಿ ಗೌರವ ಕಾಪಾಡಿಕೊಳ್ಳಬಹುದು
  • ಹಣಕಾಸಿನ ತತ್ವಗಳನ್ನು ಪಾಲಿಸುವುದರಿಂದ ದೊಡ್ಡ ಮಟ್ಟದ ನಷ್ಟದಿಂದ ಪಾರಾಗಬಹುದು
Chanakyaniti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಯಶಸ್ಸಿನ ಮಂತ್ರಗಳು ಸಹ ಚಾಣಕ್ಯನ ನೀತಿಯಲ್ಲಿ ಅಡಗಿವೆ.
ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಹಣವನ್ನು ಸಾಲವಾಗಿ ನೀಡುವುದು ಅಥವಾ ಪಡೆದುಕೊಳ್ಳುವುದು ಬಹಳ ಸಾಮಾನ್ಯವಾದ ಸಂಗತಿಯಾಗಿದೆ. ಆದಾಗ್ಯೂ, ಹಣಕಾಸಿನ ವಿಷಯಗಳಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ದೊಡ್ಡ ಮಟ್ಟದ ಹಣಕಾಸಿನ ನಷ್ಟ ಮತ್ತು ಸಂಘರ್ಷಗಳು ಉಂಟಾಗುವುದು ಖಚಿತ. ಸಾಲ ನೀಡುವಾಗ ಅಥವಾ ಪಡೆಯುವಾಗ ನಷ್ಟವನ್ನು ತಪ್ಪಿಸಲು ಚಾಣಕ್ಯರು ಪ್ರತಿಪಾದಿಸಿರುವ ಪ್ರಮುಖ ತತ್ವಗಳನ್ನು ನಾವೀಗ ತಿಳಿದುಕೊಳ್ಳೋಣ.

ಅರ್ಹತೆ ಇಲ್ಲದವರಿಗೆ ಸಾಲ ನೀಡಬೇಡಿ

ಯಾರು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿಲ್ಲವೋ ಅಥವಾ ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೋ ಅಂತಹವರಿಗೆ ಸಾಲ ನೀಡಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಯೋಚನೆ ಮಾಡದೆ ನೀಡುವ ಸಾಲವು ಮರಳಿ ಬರುವುದು ಇಲ್ಲ, ಜತೆಗೆ ಇರುವ ಸಂಬಂಧಗಳೂ ಹದಗೆಡುತ್ತವೆ. ಆದ್ದರಿಂದ ಸಾಲ ನೀಡುವ ಮೊದಲು ಎದುರಿನ ವ್ಯಕ್ತಿಯ ನಂಬಿಕಾರ್ಹತೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಅಂದಾಜು ಮಾಡುವುದು ಬಹಳ ಮುಖ್ಯ.

ಸಾಲವೇ ಶತ್ರು

ಸಾಲವನ್ನು ಎಷ್ಟು ಬೇಗ ತೀರಿಸುತ್ತೀರೋ ಅಷ್ಟು ಒಳ್ಳೆಯದು. ಸಣ್ಣ ಪ್ರಮಾಣದ ಸಾಲವನ್ನೇ ಬಾಕಿ ಉಳಿಸಿದರೂ ಅದು ಮತ್ತೆ ಬೆಳೆದು ದೊಡ್ಡದಾಗುತ್ತದೆ. ಆದ್ದರಿಂದ, ಯಾವುದೇ ತಡವಿಲ್ಲದೆ ಬೇಗನೆ ಹಣವನ್ನು ಮರುಪಾವತಿಸುವುದರಿಂದ ಮಾತ್ರ ಮನಸ್ಸಿನ ಶಾಂತಿ ಮತ್ತು ಸಮಾಜದಲ್ಲಿ ಗೌರವವನ್ನು ಕಾಪಾಡಿಕೊಳ್ಳಬಹುದು. ಇಲ್ಲವಾದಲ್ಲಿ ಅದೇ ಸಾಲದಿಂದ ನಿಮ್ಮ ವ್ಯಕ್ತಿತ್ವವನ್ನು ಅಳೆದುಬಿಡುತ್ತಾರೆ ಮತ್ತು ನಿನ್ನ ನೋಡೋ ದೃಷ್ಟಿಕೋನವೂ ಬದಲಾಗಿಬಿಡುತ್ತದೆ.
ಚಾಣಕ್ಯರ ಹಣಕಾಸಿನ ತತ್ವಗಳನ್ನು ಅನುಸರಿಸುವುದರಿಂದ ನಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವು ವ್ಯರ್ಥವಾಗುವುದಿಲ್ಲ. ಸಾಲವನ್ನು ಪಡೆಯುವಾಗ ಅಥವಾ ನೀಡುವಾಗ ಸ್ವಲ್ಪ ಯೋಚಿಸಿದರೆ, ಯಾವುದೇ ಆರ್ಥಿಕ ಸಮಸ್ಯೆಗಳು ಅಥವಾ ವಿವಾದಗಳಿಂದ ನಾವು ನಮ್ಮನ್ನು ಕಾಪಾಡಿಕೊಳ್ಳಬಹುದು.
ಗಮನಿಸಿ: ಈ ಮಾಹಿತಿಯು ಚಾಣಕ್ಯ ನೀತಿ ಮತ್ತು ಸಾಂಪ್ರದಾಯಿಕ ಗ್ರಂಥಗಳ ಒಳನೋಟಗಳನ್ನು ಆಧರಿಸಿದೆ. ಯಾವುದೇ ವೈಯಕ್ತಿಕ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ, (ಏಜೆನ್ಸೀಸ್​).