ದೇಶ

ಸಿಯಾ ಮೇಲಿನ ಪ್ರೀತಿಗೆ ಸಾಕ್ಷಿಯಾಗಿತ್ತು ಬೆನ್ನ ಮೇಲಿನ ಟ್ಯಾಟೂ; Ketan ಬಗ್ಗೆ ತಂದೆ ವಿಶಾಲ್ ಬಿಚ್ಚಿಟ್ಟ ಸತ್ಯ..Pune

  • ಹುಟ್ಟುಹಬ್ಬಕ್ಕೆ ಸರ್ಪೈಸ್​ ಕೊಡ್ಬೇಕೆಂದು ಟ್ಯಾಟು ಹಾಕಿಸಿಕೊಂಡಿದ್ದ ಕೇತನ್​

  • ಬೆನ್ನಿನ ಹಿಂದೆ ಸಿಯಾ ಎಂದು ಟ್ಯಾಟು ಹಾಕಿಸಿಕೊಂಡಿದ್ದನ್ನು ಹೇಳಿದ ಕೇತನ್​ ತಂದೆ ವಿಶಾಲ್​ ಅಗರ್ವಾಲ್

  • ಸಿಯಾ ಮೇಲೆ ಕೇತನ್​ಗೆ ಹೆಚ್ಚು ಪ್ರೀತಿ ಇತ್ತು ಆದರೆ ಆಕೆ ಕೊಲೆ ಮಾಡ್ತಾಳೆ ಎಂದುಕೊಂಡಿರಲಿಲ್ಲ

ಪುಣೆ: ಕೇವಲ ಪಾರ್ಟಿ, ಕಾರಿನಲ್ಲಿ ಸರ್ಪ್ರೈಸ್​ ಮಾತ್ರವಲ್ಲ ಕೇತನ್​ ತನ್ನ ಭಾವಿ ಪತ್ನಿ ಸಿಯಾ ಗೋಯಲ್​ಗಾಗಿ ಬೆನ್ನಿನ ಹಿಂದೆ ಸಿಯಾ ಎಂದು ಟ್ಯಾಟೂ ಹಾಕಿಸಿಕೊಂಡಿದ್ದ ಎನ್ನುವುದು ತಿಳಿದುಬಂದಿದೆ. ಜೂನ್ 19 ರಂದು ಸಿಯಾ ಹುಟ್ಟಿದ ಹಬ್ಬವಿದ್ದ ಕಾರಣ ಆಕೆಗೆ ಸರ್ಪ್ರೈಸ್​ ನೀಡಬೇಕೆಂದು ಆತ ನಿರ್ಧರಿಸಿದ್ದ ಎಂದು ವಿಶಾಲ್ ಅಗರ್ವಾಲ್ ಹೇಳಿದ್ದಾರೆ.

ಜೂ.18ರಂದು ಪುಣೆಯ ಪ್ರಸಿದ್ಧ ಲೋಹಗಡ್​ ಕೋಟೆಯಿಂದ ತಳ್ಳಿ ಕೇತನ್​​ನನ್ನು ಸಿಯಾ ಗೋಯಲ್​ ಮತ್ತು ಆಕೆಯ ಪ್ರಿಯತಮ ಚೇತನ್​ ಚೌಧರಿ ತಳ್ಳಿ ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದ ವಿರುದ್ಧ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಕೇತನ್​ ತಂದೆ ಹೇಳಿದ್ದೇನು?

ಕೇತನ್​ ತಂದೆ ವಿಶಾಲ್ ಅಗರ್ವಾಲ್ ಅವರ ಹೇಳಿಕೆಯ ಪ್ರಕಾರ, ಕೇತನ್ ಅಗರ್ವಾಲ್ ಜೂನ್​19ರಂದು ತಮ್ಮ ಭಾವಿ ಪತ್ನಿ ಸಿಯಾ ಗೋಯಲ್​​ ಬರ್ತಡೇ ಇದ್ದಕಾರಣ ಆಕೆಗೆ ಸರ್ಪೈಸ್​ ನೀಡುವ ಸಲುವಾಗಿ ಬೆನ್ನಿನಲ್ಲಿ ಸಿಯಾ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದ. ಅಲ್ಲದೇ ಸಿಯಾರ ಹುಟ್ಟುಹಬ್ಬಕ್ಕಾಗಿ ಪಾರ್ಟಿ ಅರೇಂಜ್​ ಮಾಡಿದ್ದ. ಆದರೆ ಆಕೆ ಮಗನ ಕೊಲೆಗಾಗಿ ಸಂಚು ರೂಪಿಸಿದ್ದಾಳೆ ಎನ್ನುವ ಸುಳಿವು ಇರಲಿಲ್ಲ ನಮಗೆ ಎಂದು ಕೇತನ್​ ತಂದೆ ವಿಶಾಲ್ ಅಗರ್ವಾಲ್​ ಅವರು ಹೇಳಿಕೊಂಡಿದ್ದಾರೆ.

ಜೂನ್ 18 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಯನ್ನು ತಲುಪಿದ್ದರು. ಅಲ್ಲಿಗೆ ಮುಂಚಿತವಾಗಿಯೇ ಹೂಡಿ ಧರಿಸಿ ಚೇತನ್​ ಬಂದಿದ್ದನು. ಕೋಟೆಗೆ ತಲುಪಿದ ಬಳಿಕ ಸಿಯಾ ಟಿಕೆಟ್ ಕೌಂಟರ್ ಬಳಿ ಚೇತನ್‌ಗೆ ಸನ್ನೆ ಮಾಡಿದ್ದಾಳೆ. ಚೇತನ್ ಚೌಧರಿಯು ಕೇತನ್ ಅವರನ್ನು ಹಿಂದಿನಿಂದ ಬಲವಾಗಿ ತಳ್ಳಿದರೆ, ಅದೇ ಸಮಯದಲ್ಲಿ ಸಿಯಾ ಗೋಯಲ್ ತನ್ನ ಕಾಲಿನಿಂದ ಜೋರಾಗಿ ಒದ್ದಿದ್ದಾಳೆ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿ ಸಾಕ್ಷಿ ದಾಖಲು

ಪ್ರತ್ಯಕ್ಷದರ್ಶಿಯು ಈ ಘಟನೆಯನ್ನು ಕಣ್ಣಾರೆ ಕಂಡಿದ್ದು, ಮತ್ತು ಈ ಬಗ್ಗೆ ವಿಚಾರಿಸಿದ್ದಕ್ಕೆ ಅವರನ್ನು ಕೊಲ್ಲುವುದಾಗಿ ಚೇತನ್​ ಬೆದರಿಕೆ ಹಾಕಿದ್ದ. ಇದರಿಂದ ಅವರು ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಇಡಿದಿದ್ದರು ಎನ್ನಲಾಗಿದೆ ಘಟನೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಪೊಲೀಸರಿಗೆ ಸಾಕ್ಷಿ ಹೇಳಿದ್ದಾರೆ ಎನ್ನಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್, ಚೇತನ್ ಚೌಧರಿ ಹಾಗೂ ಅವರ ಸ್ನೇಹಿತ ರಿತೇಶ್ ಹಿಂಗೆ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ಮುಂದುವರೆದಿದೆ, (ಏಜೆನ್ಸೀಸ್).