ಆತ್ಮಹತ್ಯೆಗೆ ಶರಣಾದ ಯುವಕ ಪ್ರದೀಪ್ 
ದೇಶ

ಸಾಯೋದಕ್ಕೆ ಭಯ ಆಗ್ತಿದೆ... ಇಷ್ಟಕ್ಕೆಲ್ಲ ಆ ಮೂವರೇ ಕಾರಣ! ವಿಡಿಯೋ ಹರಿಬಿಟ್ಟು ಯುವಕ ಸಾವಿಗೆ ಶರಣು | Suicide Case

ಪ್ರಮುಖ ಮುಖ್ಯಾಂಶಗಳು

  • ವಿಡಿಯೋ ಹರಿಬಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಸಾಯಲು ಭಯವಿದೆ... ಆದ್ರೆ, ಬೇರೆ ದಾರಿಯಿಲ್ಲ ಎಂದು ಹೇಳಿ ಸಾವಿಗೆ ಶರಣು
  • ವಿಡಿಯೋದಲ್ಲಿ ಬಯಲಾಗಿದೆ ಹಲವು ಶಾಕಿಂಗ್ ಸಂಗತಿಗಳು
ತಿರುವನಂತಪುರಂ: ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ಹೋಟೆಲ್ ಮಾಲೀಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ತಾನು ಸಾಯುವ ಮೊದಲು ಮಾಡಿದ ವಿಡಿಯೋವನ್ನು ಪೋಸ್ಟ್ ಮಾಡಿ, ಆತ್ಮಹತ್ಯೆಗೆ ಶರಣಾದ (Suicide Case) ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೃತನನ್ನು ವಿಲಾವೂರ್ಕಲ್‌ನ ಎಝಕೋಡ್‌ನಲ್ಲಿ ಗ್ರೀನ್ ವಿಲ್ಲಾ ಗಾರ್ಡನ್ಸ್ ನಡೆಸುತ್ತಿದ್ದ ಪ್ರದೀಪ್ ಎಂದು ಗುರುತಿಸಲಾಗಿದೆ.
ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಮನೆಯ ವರಾಂಡಾದಲ್ಲಿ ಪ್ರದೀಪ್​ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ. ಕಳೆದ 8 ವರ್ಷಗಳಿಂದ ತಚೊಟ್ಟುಕಾವು ಜಂಕ್ಷನ್ ಬಳಿ ಹೋಟೆಲ್ ನಡೆಸುತ್ತಿದ್ದ. ವಿಡಿಯೋದಲ್ಲಿ, ಎರಡನೇ ಪತ್ನಿ, ಆಕೆಯ ತಾಯಿ ಮತ್ತು ತನ್ನ ಹೋಟೆಲ್ ಎದುರು ಪೇಂಟ್ ವರ್ಕ್‌ಶಾಪ್ ನಡೆಸುತ್ತಿರುವ ವ್ಯಕ್ತಿಯೇ ಈ ಸಾವಿಗೆ ಕಾರಣ ಎಂದು ಪ್ರದೀಪ್​ ಹೇಳಿದ್ದಾಗಿ ವರದಿಯಾಗಿದೆ.

ನೋಡುವವರು ಯಾರೂ ಇಲ್ಲ

ಪ್ರದೀಪ್ ಕೆಲವು ತಿಂಗಳ ಹಿಂದೆಯಷ್ಟೇ ತನ್ನ ಮೊದಲ ಪತ್ನಿಯಿಂದ ದೂರವಾಗಿ, ಎರಡನೇ ಮದುವೆ ಕೂಡ ಆಗಿದ್ದ. ಮೊದಲ ಹೆಂಡತಿಯ ಮಗಳು ಮತ್ತು ಎರಡನೇ ಹೆಂಡತಿಯೊಂದಿಗೆ ವಾಸಿಸುತ್ತಿದ್ದ ಪ್ರದೀಪ್​ ತೀವ್ರ ಮನನೊಂದು ಸಾಯುವಂತ ಪರಿಸ್ಥಿತಿ ಏನಾಗಿತ್ತು? ಅಲ್ಲಿ ಆಗಿದ್ದಾದರೂ ಏನು? ಎಂದು ತಿಳಿಯಲು ಮುಂದಾದ ಖಾಕಿ, ಆತ ಆತ್ಮಹತ್ಯೆಗೂ ಮುನ್ನ ಹರಿಬಿಟ್ಟಿದ್ದ ವಿಡಿಯೊ ಪರಿಶೀಲಿಸಿದರು. ಇದರಲ್ಲಿ, ಪ್ರದೀಪ್ ನನಗೆ ಸಾಯುವುದಕ್ಕೆ ಭಯವಿದೆ. ಆದ್ರೆ, ಸಾಯದೆ ಬೇರೆ ದಾರಿ ಇಲ್ಲ. ನನ್ನ ಎರಡನೇ ಪತ್ನಿ ಹಾಗೂ ತಾಯಿ ಸೇರಿ ಕುಟುಂಬದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಆ್ಯಕ್ಸಿಡೆಂಟ್​ನಲ್ಲಿ ಕಾಲು ಮುರಿತಕ್ಕೊಳಗಾದ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಸಮಯದಲ್ಲಿ, ನನ್ನ ಹೆಂಡತಿ ನನಗೆ ಸಪೋರ್ಟ್​ ಮಾಡುತ್ತಿಲ್ಲ ಮತ್ತು ನಾನು ಏಕಾಂಗಿ ಆಗಿರುವೆ. ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ನನ್ನ ತಂದೆ ಮತ್ತು ಸ್ನೇಹಿತರಲ್ಲಿ ಕ್ಷಮೆ ಕೋರುವೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿರುವ ಪ್ರದೀಪ್​, ತನ್ನ ಫೋನ್ ಪಾಸ್​ವರ್ಡ್​ ಡಿಟೇಲ್ಸ್​ ಮತ್ತು ಯಾರಿಗೆಲ್ಲ ಹಣ ಕೊಡಬೇಕೋ, ಅವರ ಹೆಸರುಗಳನ್ನು ಪಟ್ಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮಲಯಿನ್‌ಕೀಳು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).