Suvendu Adhikari 4 aides killed
- 2013ರಿಂದ 2026ರವರೆಗೂ ಸುವೇಂದು ಅಧಿಕಾರಿ ಆಪ್ತರನ್ನು ಗುರಿಯಾಗಿಸಿ ಹತ್ಯೆ
- ಪುಲಕ್ ಲಹಿರಿ , ಶುಭಬ್ರತ ಚಕ್ರವರ್ತಿ ಸೇರಿ ಇನ್ನಿಬ್ಬರು ನಿಧನ
- ನನ್ನನ್ನು ನೇರವಾಗಿ ಎದುರಿಸಲು ಧೈರ್ಯವಿಲ್ಲದೇ ಆಪ್ತರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದ ಸುವೇಂದು
ಕೋಲ್ಕತ್ತಾ: ಮೇ.4ರ ಫಲಿತಾಂಶದ ನಂತರ ಬಂಗಾಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಂಗಾಳವನ್ನು ಬಿಜೆಪಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಲೇ 15 ವರ್ಷದಿಂದ ಬೇರೂರಿದ್ದ ಟಿಎಂಸಿಯ ಕೇಂದ್ರ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎನ್ನುವ ವಿಡಿಯೋಗಳು ವೈರಲ್ ಆಗಿದ್ದವು. ಈಗ ಬಂಗಾಳ ರಕ್ತಸಿಕ್ತವಾಗಿದೆ. ಹೌದು ಮೇ.6 ರಾತ್ರಿ ಸುವೇಂದು ಅಧಿಕಾರಿಯ ಆಪ್ತನನ್ನು ( Suvendu Adhikari) ಕಾರಿನಲ್ಲಿ ಗುಂಡಿಟ್ಟು ಕೊಂದಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಏನಿದು ಘಟನೆ?
ಆಪ್ತ ಸಹಾಯಕ ನಿಧನದ ಬಗ್ಗೆ ಮಾತನಾಡಿದ ಸುವೇಂದು ಅಧಿಕಾರಿ, ಚಂದ್ರನಾಥ್ ರಥ್ ಪ್ರಾಯೋಜಿತ ಕೊಲೆ, ಮಮತಾ ಬ್ಯಾನರ್ಜಿಯವರನ್ನು ಭವಾನಿ ಪುರದಲ್ಲಿ ಸೋಲಿಸಿದ್ದೇ ಇದಕ್ಕೆಲ್ಲ ಕಾರಣ. ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ ಎಂದು ನನ್ನ ಆಪ್ತರು, ನಂಬಿಕಸ್ತ ಸಹಾಯಕನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಆತನ ಕುಟುಂಬಸ್ಥರ ಪರ ನಿಲ್ಲುತ್ತೇನೆ ಎಂದು ಮಾತನಾಡಿದ್ದರು. ಈ ಘಟನೆ ನಂತರ ಸುವೇಂದು ಅವರ ಬಗ್ಗೆ ಮಾಹಿತಿ ಕಲೆ ಹಾಕುವಾಗ ಸಿಕ್ಕಿದ್ದು ಅಚ್ಚರಿ ಎನಿಸುವ ಇನ್ನಷ್ಟು ಮಾಹಿತಿ.
ಸುವೇಂದು ಅಧಿಕಾರಿಯವರ ಆಪ್ತ ಸಹಾಯಕರ ಮೇಲಾಗುತ್ತಿರುವ ದಾಳಿ ( Suvendu Adhikari 4 aides killed )ಇದೇ ಮೊದಲೇನಲ್ಲ. ಈ ಮುಂಚೆ ಅಂದರೆ, 2013ರಿಂದ 26ವರೆಗೂ ಸುವೇಂದು ಅವರ ಪಿಎಗಳಾಗಿದ್ದ ಮೂವರು ಹತ್ಯೆಗೊಳಗಾಗಿದ್ದಾರೆ. ಚಂದ್ರನಾಥ್ ನಾಲ್ಕನೇ ವ್ಯಕ್ತಿ ಎನ್ನುವ ಮಾಹಿತಿ ಹೊರಬಿದ್ದಿದೆ. ಆ ಮೂವರು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
2013ರಲ್ಲಿ ಒಬ್ಬ ಪಿಎ ಸಾವು
ಸುವೇಂದು ಅಧಿಕಾರಿ 2013ರಲ್ಲಿ ಟಿಎಂಸಿಯಲ್ಲಿದ್ದರು. ಈವೇಳೆ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು ಪ್ರದೀಪ್ ಝಾ ಎಂಬುವವರರು . ಇವರು ಟಿಎಂಸಿ ರಾಜಕೀಯ ಕಾರ್ಯದರ್ಶಿಯಾಗಿದ್ದರು.
2013 ಆಗಸ್ಟ್ನಲ್ಲಿ ಕೋಲ್ಕತ್ತಾದ ಸ್ಟ್ರಾಂಡ್ ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ಅವರು ಒತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟಿದ್ದರು. ಆದರೆ, ಪ್ರದೀಪ್ ಅವರು ಮೃತಪಡುವ ಕೆಲವು ತಿಂಗಳ ಹಿಂದೆ ಸುವೇಂದು ತಂಡದಿಂದ ದೂರ ಉಳಿದಿದ್ದರು ರನ್ನಲಾಗಿದೆ.
ಭದ್ರತಾ ಅಧಿಕಾರಿಯ ಮೃತದೇಹ ಪತ್ತೆ
2018ರಲ್ಲು ಸುವೇಂದು ಅವರು ಭದ್ರತಾ ಅಧಿಕಾರಿ ಅಂದರೆ ಪಿಎಸ್ಒ ಆಗಿ ನೇಮಕಗೊಂಡಿದ್ದ ಶುಭಬ್ರತ ಚಕ್ರವರ್ತಿ. ಪೂರ್ವ ಮೇದಿನಿಪುರದ ಕಾಂಥಿ ಬಳಿಯ ಪೊಲೀಸ್ ಬ್ಯಾರಕ್ನಲ್ಲಿ ಗುಂಡು ಹಾಡಿಸಿಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೊದಲಿಗೆ ಪೊಲೀಸರು ಈ ಕೇಸ್ ಅನ್ನು ಆತ್ಮಹತ್ಯೆ ಎಂದು ಭಾವಿಸಿದ್ದರು. ಅವರ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿತ್ತು,
ಆದರೆ, ಅವರ ಸಾವಿನ ಸುತ್ತವಿದ್ದ ಅನುಮಾನ ಮಾತ್ರ ಕಡಿಮೆಯಾಗಿರಲಿಲ್ಲ,. ಹೀಗಾಗಿ ಅವರ ಪತ್ನಿ ತನಿಖೆಗೆ ಮನವಿ ಮಾಡಿದ್ದರು. ಪಶ್ಚಿಮ ಬಂಗಾಳದ ಸಿಐಡಿ ನಂತರ ತನಿಖೆಯನ್ನು ಪುನಃ ತೆರೆದು, ದೃಶ್ಯವನ್ನು ಪುನರ್ನಿರ್ಮಿಸಿತು ಮತ್ತು ಮೂಲ ವಿಚಾರಣೆಗೆ ಸಂಬಂಧಿಸಿದ ಹಲವಾರು ಪೊಲೀಸ್ ಸಿಬ್ಬಂದಿಯನ್ನು ಪ್ರಶ್ನಿಸಿತು.
2021ರಲ್ಲಿಯೂ ಪಿಎ ಸಾವು
ಪುಲಕ್ ಲಹಿರಿ ಎಂಬುವವರು ಸುವೇಂದು ಅಧಿಕಾರಿಯ ಆಪ್ತ. ಇವರು 2021ರಲ್ಲಿ ಮೃತಪಟ್ಟಿದ್ದರು.ಆದರೆ, ಯಾವುದೇ ಕ್ರೈಂ ಪ್ರಕರಣ ದಾಖಲಾಗಿಲ್ಲ
ಚಂದ್ರನಾಥ ರಥ್
ಮೇ6 ರಾತ್ರಿ ಚಂದ್ರನಾಥ ರಥ್ ತಮ್ಮ ಪ್ಲ್ಯಾಟ್ಗೆ ತೆರಳುವ ಸಂದರ್ಭದಲ್ಲಿ ಕಾರಿನಲ್ಲಿದ್ದ ಅವರಿಗೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಗಂಭೀರ ಗಾಯ, ರಕ್ತ ಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಇದು ತೀವ್ರ ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ಬಿಜೆಪಿ ಟಿಎಂಸಿ ವಿರುದ್ಧ ಆರೋಪಿಸುತ್ತಿದೆ. ಆದರೆ, ಇದು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟಿಎಂಸಿ ಕಿಡಿಕಾರಿದೆ, (ಏಜೆನ್ಸೀಸ್).