ತಮಿಳುನಾಡು ರಾಜಕೀಯಕ್ಕೆ ಧನುಷ್​ ಪಕ್ಕಾ? ಹೀರೋ ಎಂಟ್ರಿಗೂ ಮುನ್ನವೇ ಟಿವಿಕೆ-ಡಿಎಂಕೆ ಕೌಂಟರ್ ಅಟ್ಯಾಕ್​ | Actor Dhanush ​  
ದೇಶ

ತಮಿಳುನಾಡು ರಾಜಕೀಯಕ್ಕೆ ಧನುಷ್​ ಪಕ್ಕಾ? ಹೀರೋ ಎಂಟ್ರಿಗೂ ಮುನ್ನವೇ ಟಿವಿಕೆ-ಡಿಎಂಕೆ ಕೌಂಟರ್ ಅಟ್ಯಾಕ್​ | Actor Dhanush ​

ದಿನ ಕಳೆದಂತೆ ತಮಿಳುನಾಡು ರಾಜಕೀಯ ಮತ್ತು ಚಿತ್ರೋದ್ಯಮದ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ'ನ (ಟಿವಿಕೆ) ನಾಯಕ ಆಧವ್ ಅರ್ಜುನ್​ ಅವರು ಇತ್ತೀಚೆಗೆ ಧನುಷ್ ಬಗ್ಗೆ ನೀಡಿದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಯಿತು.

Actor Dhanush: ತಮ್ಮ ವಿಭಿನ್ನ ಹಾಗೂ ವಿಶೇಷ ಪಾತ್ರಗಳಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ತಮಿಳು ನಟ ಧನುಷ್​, ತಮ್ಮ ಮುಂಬರುವ ಸಿನಿಮಾಗಳಿಗಿಂತಲೂ ಇದೀಗ ತಮಿಳು ರಾಜಕೀಯಕ್ಕೆ ಯಾವಾಗ ಎಂಟ್ರಿಕೊಡಲಿದ್ದಾರೆ? ಸಿಎಂ ವಿಜಯ್​ ಅವರ ಟಿವಿಕೆ ಪಕ್ಷದಂತೆಯೇ ತಮ್ಮದೇ ಪಕ್ಷವನ್ನು ಕಟ್ಟುತ್ತಾರಾ ಅಥವಾ ಈಗಿರುವ ಪಾರ್ಟಿಗಳನ್ನೇ ಸೇರಿಕೊಳ್ಳುತ್ತಾರಾ ಎಂಬ ಕುತೂಹಲಗಳು ಜೋರಾಗಿವೆ. ಸದ್ಯದ ಮಟ್ಟಿಗೆ ಸ್ಟಾರ್​ ನಟನ ಎಂಟ್ರಿಗೂ ಮುನ್ನವೇ ಟಿವಿಕೆ ಮತ್ತು ಡಿಎಂಕೆ ಕಿತ್ತಾಡಿಕೊಳ್ಳುತ್ತಿರುವುದು ಜನರ ಅನುಮಾನಗಳು ನಿಜವೇ ಎಂಬಂತೆ ಬಿಂಬಿಸಿವೆ.

ದಿನ ಕಳೆದಂತೆ ತಮಿಳುನಾಡು ರಾಜಕೀಯ ಮತ್ತು ಚಿತ್ರೋದ್ಯಮದ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ'ನ (ಟಿವಿಕೆ) ನಾಯಕ ಆಧವ್ ಅರ್ಜುನ್​ ಅವರು ಇತ್ತೀಚೆಗೆ ಧನುಷ್ ಬಗ್ಗೆ ನೀಡಿದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಯಿತು. ಮತ್ತು ಅದಕ್ಕೆ ಪ್ರತಿಯಾಗಿ ಡಿಎಂಕೆ (DMK) ನಾಯಕ ಹಾಗೂ ಸಚಿವ ಪಿ.ಕೆ. ಶೇಖರ್ ಬಾಬು ಅವರು ಕೊಟ್ಟ ಕೌಂಟರ್​ಗಳು ಇದೀಗ ರಾಜ್ಯದಲ್ಲಿ ಹೊಸ ರಾಜಕೀಯ ಕದನಕ್ಕೆ ನಾಂದಿ ಹಾಡಿವೆ.

ಧನುಷ್​ಗೆ ಟಿವಿಕೆ ಟಕ್ಕರ್​?

"ಭಾರತದ ಯಶಸ್ಸು ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ. ಮತ್ತು 2029ರ ಚುನಾವಣೆಯು ಪ್ರಧಾನ ಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದೆ. ಈ ಇಮೇಜ್ ಅನ್ನು ಮುರಿಯಲು, ಹೊಸ ನಟರು ದೆಹಲಿಯಲ್ಲಿ ಕುಳಿತಿದ್ದಾರೆ" ಎಂದು ಆಧವ್ ಅರ್ಜುನ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದರು. ಈ ಮಾತಿನಿಂದ ಕೆರಳಿದ ನಟನ ಅಭಿಮಾನಿಗಳು ಮತ್ತು ವಿರೋಧ ಪಕ್ಷಗಳು, ಧನುಷ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೆರಳಿ ಹೀಗೆ ಹೇಳಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧನುಷ್ ಅವರ ಅಭಿಮಾನಿ ಸಂಘಟನೆಯ ಹೆಸರನ್ನು ಬದಲಾಯಿಸಿರುವುದು ಮತ್ತು ಅದರಲ್ಲಿ ಹೊಸ ಕಾರ್ಯಗಳನ್ನು ಪರಿಚಯಿಸಿರುವುದು ಈ ವಿವಾದಕ್ಕೆ ಮೂಲ ಕಾರಣ ಎನ್ನಲಾಗಿದೆ. ಧನುಷ್​ ವೆಲ್​ಫೇರ್​ ಮೂಮೆಂಟ್​ ಅನ್ನು 'ಧನುಷ್ ನರ್ಪನಿ ಇಯಕ್ಕಂ' (Dhanush Narpani Iyakam) ಎಂದು ಮರುನಾಮಕರಣಗೊಂಡಿರುವ ಈ ಸಂಘಟನೆಯು, ಇನ್ನು ಮುಂದೆ ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಮತ್ತು ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿತು. ಇದಾದ ಬೆನ್ನಲ್ಲೇ ಹಲವರು ರಾಜಕೀಯಕ್ಕೆ ಧನುಷ್​ ಎಂಟ್ರಿ ಬಹುತೇಕ ಫಿಕ್ಸ್​ ಎಂದೇ ಊಹಿಸಿದ್ದಾರೆ.

ಧನುಷ್ ಅವರು ತಮಿಳುನಾಡು ರಾಜಕೀಯ ಪ್ರವೇಶಿಸಬಹುದು ಎಂಬ ಊಹಾಪೋಹಗಳು ಬಲವಾಗಿದ್ದು, ಟಿವಿಕೆ ರೀತಿಯಲ್ಲೇ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ನಿರೀಕ್ಷೆಗಳಿವೆ. ಆದರೆ, ಈ ಕುರಿತಂತೆ ಇಲ್ಲಿಯವರೆಗೆ ಧನುಷ್ ಯಾವುದೇ ಅಧಿಕೃತ ಹೇಳಿಕೆ ನೀಡದಿರುವುದು ಗಮನಾರ್ಹ. ತಮಿಳುನಾಡು ರಾಜಕೀಯದಲ್ಲಿ ಸಿನಿ ಸ್ಟಾರ್​ ಒಬ್ಬರು ತಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿರುವುದನ್ನು ಕಂಡು ಡಿಎಂಕೆ ಸೇರಿದಂತೆ ಆಡಳಿತಾರೂಢ ಪಕ್ಷಗಳು ಆತಂಕಗೊಂಡಿವೆ ಎಂದು ವಿರೋಧ ಪಕ್ಷದ ಪಾಳಯಗಳು ಬೆಟ್ಟು ಮಾಡಿ ಹೇಳುತ್ತಿವೆ,(ಏಜೆನ್ಸೀಸ್).