ಪೊಲೀಸ್ ವ್ಯಾನ್ ತಡೆದು ವೈರಲ್ ಆಗಿದ್ದ ರಿಯಾ ಅಹಿರ್
- ಪೊಲೀಸ್ ವ್ಯಾನ್ ತಡೆದು ವೈರಲ್ ಆಗಿದ್ದ ರಿಯಾ ಅಹಿರ್
- ತೀವ್ರ ಟ್ರೋಲಿಂಗ್‌ಗೆ ಬೇಸತ್ತು ಸೈಬರ್ ಪೊಲೀಸರ ಮೊರೆ ಹೋದ ರಿಯಾ ಅಹಿರ್
- ನನಗೆ ಈ ಮಾನಸಿಕ ಕಿರುಕುಳವನ್ನು ತಡೆಯಲಾಗುತ್ತಿಲ್ಲ ಎಂದು ದೂರಿನಲ್ಲಿ ದಾಖಲು
ಮುಂಬೈ: ಕಳೆದ ಕೆಲ ದಿನಗಳಿಂದ ದೇಶಾದ್ಯಂತ ನೀಟ್ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಅದೇ ರೀತಿ ಮುಂಬೈನಲ್ಲಿ ಈ ಹೋರಾಟ ನಡೆದ ಸಂದರ್ಭದಲ್ಲಿ ರಿಯಾ ಅಹಿರ್ (Riya Ahir) ಎಂಬ ಯುವತಿ ಪೊಲೀಸ್ ವ್ಯಾನ್ನನ್ನು ತಡೆದು ನೀಡಿದ್ದ ಪೋಸ್ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗಿತ್ತು .
ಆದರೆ, ಈ ಹೋರಾಟದ ನಂತರ, ನನಗೆ ಜೀವ ಬೆದರಿಕೆ, ಅಶ್ಲೀಲ ಸಂದೇಶಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲಿಂಗ್‌ಗೆ ಗುರಿ ಮಾಡಲಾಗುತ್ತಿದೆ ಎಂದು ರಿಯಾ, ಸೈಬರ್ ಠಾಣೆಗೆ ದೂರನ್ನು ನೀಡಿರುವುದು ತಿಳಿದು ಬಂದಿದೆ.
ನನಗೆ ಕಿರುಕುಳವನ್ನು ತಡೆಯಲಾಗುತ್ತಿಲ್ಲ!
ಜುಲೈ 22 ರಂದು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ಸಮಯದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಪೊಲೀಸ್ ವ್ಯಾನ್ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ವಾಹನಕ್ಕೆ ಅಡ್ಡ ನಿಂತ ರಿಯಾ, ವ್ಯಾನ್ನಲ್ಲಿದ್ದ ವಿದ್ಯಾರ್ಥಿಗಳು ಪಾರಾಗುವಂತೆ ಮಾಡಿದ್ದಳು.
ಈ ಮೂಲಕ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಎಂಬಂತೆ ರಿಯಾ ಪೊಲೀಸ್ ವ್ಯಾನ್ನನ್ನು ತಡೆದು ನಿಲ್ಲಿಸಿದ್ದ ಫೋಟೊ ವೈರಲ್ ಆಗಿತ್ತು. ಆದರೆ ಇತ್ತೀಚೆಗೆ ರಿಯಾಳನ್ನು ಟ್ರೋಲ್ ಹಾಗೂ ಆನ್ಲೈನ್ ಬುಲ್ಲಿಂಗ್ಗೆ ಒಳಗಾಗಿದ್ದೆನೆಂದು ರಿಯಾ ದೂರಿನಲ್ಲಿ ತಿಳಿಸಿದ್ದಾಳೆ.
ಕಳೆದ ಕೆಲ ದಿನಗಳಿಂದ ನನ್ನ ಫೋಟೊವನ್ನು ಬಳಿಸಿಕೊಂಡು ನಿರಂತರ ಟ್ರೋಲ್ ಹಾಗೂ ಆನ್ಲೈನ್ ಬುಲ್ಲಿಂಗ್ ಮಾಡುತ್ತಿದ್ದಾರೆ. ಇದು ನನಗೆ ಮಾನಸಿಕ ಹಿಂಸೆ, ಕಿರುಕುಳ ನೀಡಿದಂತಾಗುತ್ತಿದೆ. ಹಾಗೆಯೇ ಇದರಿಂದ ನನ್ನ ತಂದೆ-ತಾಯಿ ಕೂಡ ಕಷ್ಟ ಎದುರಿಸುವಂತಾಗಿದೆ ಎಂದು ರಿಯಾ ಅಹಿರ್ ಹೇಳಿದ್ದಾರೆ.
ಪೊಲೀಸರ ಉತ್ತರವೇನು?
ರಿಯಾ ಅಹಿರ್ ನೀಡಿರುವ ದೂರನ್ನು ಮುಂಬೈ ಸೈಬರ್ ಸೆಲ್ ಪೊಲೀಸರು ಸ್ವೀಕರಿಸಿದ್ದು, ಕಾನೂನಾತ್ಮಕವಾಗಿ ಏನು ಮಾಡಬಹುದೋ ಅದನ್ನು ನಾವು ಮಾಡುತ್ತೇವೆ ಎಂದಿದ್ದಾರೆ.
ಮುಂಬೈನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಿಯಾ, ಪೊಲೀಸ್ ವ್ಯಾನ್ವೊಂದನ್ನು ತಡೆದು ನ್ಯೂಸ್ನಲ್ಲಿ, ಪೇಪರ್ನಲ್ಲಿ ಮುಖ್ಯಪುಟದಲ್ಲಿ ಸ್ಥಾನ ಪಡೆದಳು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಕ್ಕತ್ ವೈರಲ್ ಆದಳು. ಕೆಲವರು ಈಕೆ ಮಾಡಿದ ಕೆಲಸವನ್ನು ಬೆಂಬಲಿಸಿದರೆ, ಇನ್ನು ಕೆಲವರು ಇಕೆಯನ್ನು ಟ್ರೋಲ್ ಮಾಡಿದ್ದಾರೆ ಎಂದಿದ್ದಾರೆ, (ಏಜನ್ಸೀಸ್).