- ಸೆನ್ಸೆಕ್ಸ್ 278, ನಿಫ್ಟಿ 103 ಅಂಕ ಕುಸಿತ
- 1393 ಷೇರುಗಳು ಮುನ್ನಡೆ ಸಾಧಿಸಿದ್ದು, 2632 ಷೇರುಗಳು ಕುಸಿತ ಕಂಡಿವೆ
ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ(ನ.18) ಭಾರೀ ಕುಸಿದಿದೆ.
ಸೆನ್ಸೆಕ್ಸ್ 278 ಪಾಯಿಂಟ್ ಅಥವಾ ಶೇಕಡಾ 0.33 ರಷ್ಟು ಕುಸಿತ ಕಂಡು 84,673ಕ್ಕೆ ತಲುಪಿದರೆ, ನಿಫ್ಟಿ 103 ಪಾಯಿಂಟ್ ಅಥವಾ ಶೇಕಡಾ 0.40 ರಷ್ಟು ಕುಸಿತ ಕಂಡು 25,910ಕ್ಕೆ ತಲುಪಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು 0.70% ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ 0.85% ರಷ್ಟು ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಯೂ ಒತ್ತಡಕ್ಕೆ ಒಳಗಾಯಿತು.
ಇಂದು ನಡೆದ ವಹಿವಾಟಿನಲ್ಲಿ ಸುಮಾರು 1393 ಷೇರುಗಳು ಮುನ್ನಡೆ ಸಾಧಿಸಿವೆ. 2632 ಷೇರುಗಳು ಕುಸಿದಿವೆ. 131 ಷೇರುಗಳು ಬದಲಾಗದೆ ಉಳಿದಿವೆ.
ಟಾಟಾ ಕನ್ಸ್ಯೂಮರ್ ಕೆಟ್ಟ ಪ್ರದರ್ಶನ ಕಂಡಿದೆ
ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪೊರೇಷನ್, ಬಜಾಜ್ ಆಟೋ, ಏಷ್ಯನ್ ಪೇಂಟ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದವುಗಳಾಗಿದ್ದರೆ, ಟೆಕ್ ಮಹೀಂದ್ರಾ, ಟಾಟಾ ಕನ್ಸ್ಯೂಮರ್, ಜಿಯೋ ಫೈನಾನ್ಷಿಯಲ್, ಇಂಟರ್‌ಗ್ಲೋಬ್ ಏವಿಯೇಷನ್, ಬಜಾಜ್ ಫಿನ್‌ಸರ್ವ್ ನಷ್ಟ ಅನುಭವಿಸಿವ (ಏಜೆನ್ಸೀಸ್).