Irfan Pathan | ರೋ-ಕೊಗಾಗಿ ತ್ರಿಕೋನ ಸರಣಿ ಆಯೋಜಿಸುವಂತೆ ಇರ್ಫಾನ್ ಪಠಾಣ್ ಸಲಹೆ 
ದೇಶ

ಅವರಿಬ್ಬರಿಂದ ಏಕದಿನ ಕ್ರಿಕೆಟ್​ಗೆ ಮತ್ತೇ ಕಳೆ ಬಂದಿದೆ..ರೋ-ಕೊಗಾಗಿ ತ್ರಿಕೋನ ಸರಣಿ ಬೇಕಂದ್ರು ಪಠಾಣ್ | Irfan Pathan

Irfan Pathan: 2027 ರ ಏಕದಿನ ವಿಶ್ವಕಪ್​​ವರೆಗೆ ಹಿರಿಯ ಕ್ರಿಕೆಟಿಗರಾದ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಿಟ್ ಆಗಿರಬೇಕಾದರೆ ಹೆಚ್ಚೆಚ್ಚು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಏರ್ಪಡಿಸಬೇಕು ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ್ದಾರೆ .
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮುಂಬರುವ ಏಕದಿನ ವಿಶ್ವಕಪ್​ ಆಡಲೇಬೆಕೆಂದು ಹಠಕ್ಕೆ ಬಿದ್ದವರಂತೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಹೀಗಾಗಿಯೇ ಕ್ರಿಕೆಟ್​ ಅಭಿಮಾನಿಗಳು ನ್ಯೂಜಿಲೆಂಡ್​ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಈ ವೇಳೆ ಕೇವಲ ಮೂರು ಪಂದ್ಯಗಳು ಮಾತ್ರ ನಿಗದಿಪಡಿಸಿರುವ ಹಿನ್ನಲೆಯಲ್ಲಿ, ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ವಿರಾಟ್ ಮತ್ತು ರೋಹಿತ್ ಅವರನ್ನು ಸಕ್ರಿಯರಾಗಿಡಲು ಹೆಚ್ಚು ಏಕದಿನ ಪಂದ್ಯಗಳನ್ನು ಆಯೋಜಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದು, ಬಿಸಿಸಿಐಗೆ ಸಲಹೆಯನ್ನು ಕೂಡ ನೀಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್‌ನ 'ಫಾಲೋ ದಿ ಬ್ಲೂಸ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಇರ್ಫಾನ್ ಪಠಾಣ್, ಮೂರರ ಬದಲು ಐದು ಏಕದಿನ ಪಂದ್ಯಗಳನ್ನು ನಡೆಸಲು ಏಕೆ ಸಾಧ್ಯವಿಲ್ಲ? ತ್ರಿಕೋನ ಅಥವಾ ಚತುರ್ಭುಜ ಸರಣಿಯನ್ನು ನಡೆಸಲು ಏಕೆ ಸಾಧ್ಯವಿಲ್ಲ? ಈ ಇಬ್ಬರು ದಿಗ್ಗಜರು ಒಂದೇ ಸ್ವರೂಪದಲ್ಲಿ ಆಡುವುದರಿಂದ ನಾವು ಈ ವ್ಯವಸ್ಥೆಯನ್ನು ಮಾಡಲು ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದು, ಏಕದಿನ ಕ್ರಿಕೆಟ್‌ಗೆ ಮತ್ತೇ ಹೆಚ್ಚಿನ ಆಸಕ್ತಿ ಮರಳಿದ್ದರೆ ಅದು ಈ ಇಬ್ಬರು ಶ್ರೇಷ್ಠ ಕ್ರಿಕೆಟಿಗರಿಂದ ಎಂದು ಹೇಳಿದರೆ ತಪ್ಪಾಗಲಾರದು ಎಂದಿದ್ದಾರೆ.

ವಿಶ್ವಕಪ್ ಬಗ್ಗೆ ಪಠಾಣ್ ಹೇಳಿದ್ದೇನು..?

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಕೊಹ್ಲಿ ಮತ್ತು ರೋಹಿತ್ ಹೆಚ್ಚಿನ ಪಂದ್ಯಗಳನ್ನು ಪಡೆಯುವುದು ಹೇಗೆ ಅತ್ಯಂತ ನಿರ್ಣಾಯಕವಾಗಿದೆ ಎಂಬುದರ ಕುರಿತು ಪಠಾಣ್ ಮಾತನಾಡಿದ್ದು, ಈ ಇಬ್ಬರು ತಾರೆಯರು ಹೆಚ್ಚು ದೇಶೀಯ ಕ್ರಿಕೆಟ್ ಆಡಬೇಕೆಂದು ಸಲಹೆ ನೀಡಿದರು.
ಇದರಲ್ಲಿ ಅತ್ಯಂತ ದೊಡ್ಡ ವಿಷಯವೆಂದರೆ ಇಬ್ಬರೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್ ಇನ್ನೂ ದೂರದಲ್ಲಿದೆ. ನೀವು ಖಂಡಿತವಾಗಿಯೂ ಅದರ ಬಗ್ಗೆ ಯೋಚಿಸಲು ಬಯಸುತ್ತೀರಿ, ಆದರೆ ನಾವು ಅವರನ್ನು ಹೆಚ್ಚು ನೋಡಿದಾಗ, ಈ ಇಬ್ಬರು ಆಟಗಾರರು ಆಟವಾಡುತ್ತಲೇ ಇರಬೇಕು, ಭಾರತವನ್ನು ಪ್ರತಿನಿಧಿಸುತ್ತಲೇ ಇರಬೇಕು ಮತ್ತು ಅವರು ಭಾರತಕ್ಕಾಗಿ ಆಡದಿದ್ದಾಗ, ಅವರು ದೇಶೀಯ ಕ್ರಿಕೆಟ್ ಆಡುತ್ತಲೇ ಇರಬೇಕು, ಏಕೆಂದರೆ ಅವರು ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಉತ್ತಮ ಎಂದು ಪಠಾಣ್ ತಿಳಿಸಿದ್ದಾರೆ(ಏಜೆನ್ಸೀಸ್).