ನಟ ಶಾರುಖ್ ಖಾನ್ ಮತ್ತು ಜಗದ್ಗುರು ರಾಮಭದ್ರಾಚಾರ್ಯ
ನವದೆಹಲಿ: ಬಾಂಗ್ಲಾದಲ್ಲಿನ ಸ್ದಳೀಯ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅಲ್ಲಿನ ಬಹುಸಂಖ್ಯಾತರ ನಡೆಸುತ್ತಿರುವ ದೌರ್ಜನ್ಯದ ಹೊರತಾಗಿಯೂ ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಐಪಿಎಲ್ನ ಕೆಕೆಆರ್ನ ತಂಡಕ್ಕೆ ಬಾಂಗ್ಲಾ ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಹಿಂದೂ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾಗ್ಪುರದಲ್ಲಿ ಪಿಟಿಐ ಜೊತೆ ಮಾತನಾಡಿರುವ ಅವರು, ಬಾಂಗ್ಲಾದಲ್ಲಿನ ಹಿಂದೂಗಳ ಮೇಲಿನ ಹತ್ಯೆ, ದಾಳಿಯನ್ನು ಖಂಡಿಸಿದ್ದಾರೆ. ಭಾರತ ಸರ್ಕಾರವು ಇಂತಹ ಘಟನೆಗಳನ್ನು ಸಹಿಸಬಾರದು. ಬಾಂಗ್ಲಾದಲ್ಲಿನ ಹಿಂದೂಗಳ ಹಿತಾಸಕ್ತಿಗಳನ್ನು ಕಾಪಾಡಲು ಕೇಂದ್ರ ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದ ಜನರು ಮತ್ತು ಸರ್ಕಾರ ತಮ್ಮ ದೇಶದ ರಚನೆಯಲ್ಲಿ ಹಿಂದೂಗಳು ಪಾತ್ರ ಇದೆ ಎನ್ನುವುದನ್ನು ಮರೆಯಬಾರದು. ಅವರ ಹಿಂದೂಗಳ ಗಮನಾರ್ಹ ಬೆಂಬಲದೊಂದಿಗೆ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಇನ್ನೂ ಐಪಿಎಲ್-2026 ಸೀಸನ್ಗಾಗಿ ಕೆಕೆಆರ್ ತಂಡಕ್ಕೆ ಬಾಂಗ್ಲಾದೇಶಿ ಕ್ರಿಕೆಟಿಗ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಕ್ರಮದ ಕುರಿತು ಶಾರುಖ್ ಖಾನ್ ವಿರುದ್ಧ ಟೀಕಿಸಿರುವ ಅವರು, ತುಂಬಾ ದುರದೃಷ್ಟಕರ, ಶಾರುಖ್ ಖಾನ್ ಅವರ ದೃಷ್ಟಿಕೋನ ಯಾವಾಗಲೂ ದೇಶದ್ರೋಹಿಯಂತೆ ಇದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).