ಪ್ರಕೃತಿ ವಿಸ್ಮಯವೋ ಅಥವಾ ವಿಜ್ಞಾನದ ಕೌತುಕವೋ? ಹಂದಿ ಹೊಟ್ಟೆಯಲ್ಲಿ ಆನೆ ಮರಿ ಜನನ! Baby Elephant in Pig Stomach
- ಈ ಪ್ರಕೃತಿ ವಿಸ್ಮಯಗಳ ತಾಣ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ
- ಊಹೆ ನಿಲುಕದ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ
- ಕೆಲವು ವಿಚಿತ್ರ ಘಟನೆಗಳು ಜನರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ
- ಇದೀಗ ಹಂದಿಯೊಂದು ಏಳು ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಲ್ಲಿ ಒಂದು ಆನೆಯಂತಿದೆ
Baby Elephant in Pig Stomach : ಈ ಪ್ರಕೃತಿ ವಿಸ್ಮಯಗಳ ತಾಣ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಊಹೆ ನಿಲುಕದ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಪ್ರಕೃತಿಯಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ಜನರನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತವೆ. ಅಂಥದ್ದೇ ಘಟನೆ ಇದೀಗ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಅಷ್ಟಕ್ಕೂ ಆ ಅಚ್ಚರಿಯ ಘಟನೆ ಏನೆಂದರೆ, ಹಂದಿಯೊಂದು ಏಳು ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಲ್ಲಿ ಒಂದು ಆನೆಯಂತಿದೆ. ಈ ವಿಸ್ಮಯಕಾರಿ ಘಟನೆ ಇದೀಗ ಸ್ಥಳೀಯರಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ವಿಚಿತ್ರ ಜೀವಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.
ಜಿಲ್ಲೆಯ ಪೆದ್ದಕೋತಪಲ್ಲಿ ಮಂಡಲದ ಕರ್ಪಮುಳ ಗ್ರಾಮದ ನಿವಾಸಿಯಾಗಿರುವ ಕುರಕುಲ ವೆಂಕಟಯ್ಯ ಎಂಬುವರು ಹಂದಿಗಳನ್ನು ಸಾಕುವುದರ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ. ತಮ್ಮ ಮನೆಯ ಆವರಣದಲ್ಲಿ ಒಂದು ಸಣ್ಣ ಶೆಡ್‌ನಲ್ಲಿ ಹಂದಿಗಳನ್ನು ಸಾಕುತ್ತಾರೆ. ಹೀಗಿರುವಾಗ, ಶನಿವಾರ (ಏಪ್ರಿಲ್ 18) ಹಂದಿಯೊಂದು ತನ್ನ ಚೊಚ್ಚಲ ಹೆರಿಗೆಯಲ್ಲಿ ಏಳು ಹಂದಿಮರಿಗಳಿಗೆ ಜನ್ಮ ನೀಡಿತು. ಹಂದಿಮರಿಗಳು ಜನಿಸುವುದು ಸಾಮಾನ್ಯವಾದರೂ, ಅವುಗಳಲ್ಲಿ ಒಂದನ್ನು ನೋಡಿ ವೆಂಕಟಯ್ಯ ಒಂದು ಕ್ಷಣ ಆಘಾತಕ್ಕೆ ಒಳಗಾದರು.
ಏಕೆಂದರೆ, ಒಂದು ಹಂದಿಮರಿಯ ಆಕಾರ ಆನೆ ಮರಿಯಂತೆ ಇತ್ತು. ಆನೆಯಂತೆಯೇ ಉದ್ದವಾದ ಸೊಂಡಿಲು ಮತ್ತು ದೊಡ್ಡ ಕಿವಿಗಳಿದ್ದವು. ಇದನ್ನು ನೋಡಿ ವೆಂಕಟಯ್ಯ ಇದೇನಿದು ವಿಚಿತ್ರ ಅಂತ ತಮ್ಮ ಹುಬ್ಬೇರಿಸಿದರು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಸ್ಥರು ವೆಂಕಟಯ್ಯನ ಮನೆಯ ಮುಂದೆ ಜಮಾಯಿಸಿದರು.
ದುರದೃಷ್ಟವಶಾತ್, ವಿಚಿತ್ರ ಹಂದಿಮರಿಯು ಇನ್ನೊಂದು ಮರಿ ಜನಿಸಿದ ಸ್ವಲ್ಪ ಸಮಯದ ಬೆನ್ನಲ್ಲೇ ಮೃತಪಟ್ಟಿತು. ಉಳಿದ ಐದು ಮರಿಗಳು ಪ್ರಸ್ತುತ ಆರೋಗ್ಯವಾಗಿವೆ ಎಂದು ಮಾಲೀಕ ವೆಂಕಟಯ್ಯ ಹೇಳಿದ್ದಾರೆ. ಸದ್ಯ ಈ ವಿಚಿತ್ರ ಹಂದಿಮರಿಯು ನಾಗರ್ಕರ್ನೂಲ್ ಜಿಲ್ಲೆಯಾದ್ಯಂತ ಭಾರಿ ಸುದ್ದಿಯಾಗುತ್ತಿದೆ.
ಇನ್ನು ಆನೆ ಆಕಾರದಲ್ಲಿ ಜನಿಸಿದ ಹಂದಿಮರಿಯ ಬಗ್ಗೆ ಪಶುವೈದ್ಯರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಇದು ಆನುವಂಶಿಕ ಅಸ್ವಸ್ಥತೆಗಳ ಪರಿಣಾಮ ಎಂದಿದ್ದಾರೆ. ತಾಯಿಯ ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಅಥವಾ ಹಾರ್ಮೋನುಗಳ ಅಸಮತೋಲನದ ಸಮಯದಲ್ಲಿ ಸಂಭವಿಸುವ ಬದಲಾವಣೆಗಳಿಂದಾಗಿ ಇಂತಹ ವಿಚಿತ್ರ ಆಕಾರಗಳು ಸಂಭವಿಸುತ್ತವೆ ಎಂದು ಪಶುವೈದ್ಯರು ಹೇಳಿದ್ದಾರೆ. ಪ್ರಸ್ತುತ, ಈ ವಿಚಿತ್ರ ಹಂದಿಮರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ, (ಏಜೆನ್ಸೀಸ್).