ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಆಯುರ್ವೇದ ಕೇವಲಔಷಧಿ ಕೊಡುವ ಪದ್ಧತಿಯಲ್ಲ.ಮನುಷ್ಯ ತನ್ನದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನುಹೊಂದಲು ಆಯುರ್ವೇದ ಅವಶ್ಯಕವಾಗಿದ್ದು,ಆಯುರ್ವೇದ ನಮ್ಮಭಾರತೀಯ ಪರಂಪರೆಯ ಭಾಗವಾಗಿದೆಎಂದು ಹರಿಹರಪುರ ಮಠದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಅರಮನೆಮೈದಾನದಲ್ಲಿ ಕತೆ ಆಯುರ್ವೇದಿಕ್ೌಂಡೇಶನ್ ಮತ್ತಿತರ ಸಂಸ್ಥೆಗಳಸಹಯೋಗದಲ್ಲಿ ಹಮ್ಮಿಕೊಂಡಿರುವ2ನೇವಿಶ್ವ ಅಯುರ್ವೇದ ಸಮ್ಮೇಳನದ 2ನೇದಿನದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಆಯುರ್ವೇದಕೇವಲ ಲೌಕಿಕ ಜಗತ್ತಿನ ವಿಚಾರವಲ್ಲ.ಇದು ಅಧ್ಯಾತ್ಮಿಕತೆಯಭಾಗವೂ ಹೌದು.ಇಂದು ಆಸ್ಪತ್ರೆಹಾಗೂ ನ್ಯಾಯಾಲಯಗಳಲ್ಲಿ ಜನರುಸಂತೆಯಂತೆ ತುಂಬಿಕೊಳ್ಳುತ್ತಿದ್ದಾರೆ.ಇದಕ್ಕೆಆಯುರ್ವೇದದಲ್ಲಿ ಪರಿಹಾರವಿದೆ.ಆ ನಿಟ್ಟಿನಲ್ಲಿಆಯುರ್ವೇದ ಕ್ಷೇತ್ರಕ್ಕೆ ಡಾ.ಗಿರಿಧರ ಕಜೆಯವರ ಕೊಡುಗೆ ಅಪಾರ ಎಂದು ಸ್ವಾಮೀಜಿತಿಳಿಸಿದರು.
ಕಾರ್ಯಕ್ರಮದಲ್ಲಿಉಪಸ್ಥಿತರಿದ್ದ ಅವದೂತ ಶ್ರೀವಿನಯ್ ಗುರೂಜಿ ಮಾತನಾಡಿ,ಆಯುರ್ವೇದವುನಮ್ಮ ವೇದಗಳ ಭಾಗವೇ ಆಗಿದ್ದು,ಆಯುರ್ವೇದದಲ್ಲಿಎಲ್ಲಾ ಆರೋಗ್ಯ ಸಮಸ್ಯೆಗಳಿಗೂಪರಿಹಾರವಿದೆ.ಆಯುರ್ವೇದದಕುರಿತು ಜನಜಾಗೃತಿ ಮೂಡಿಸಲುಡಾ.ಕಜೆಯವರುಹಮ್ಮಿಕೊಂಡಿರುವ ಈ ಸಮ್ಮೇಳನಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಮಾಜಿ ಕೇಂದ್ರಸಚಿವ ಸದಾನಂದಗೌಡ ಮಾತನಾಡಿ,ಆಧುನಿಕ ವೈದ್ಯಕೀಯಪದ್ಧತಿ ತತ್ಕಾಲದ ಪರಿಹಾರವನ್ನುಸೂಚಿಸದರೆ ಆಯುರ್ವೇದ ದೀರ್ಘಕಾಲಿಕಪರಿಹಾರವನ್ನು ನೀಡುತ್ತದೆ.ಆಯುರ್ವೇದ ನಮ್ಮನೆಲದ ಪದ್ಧತಿಯಾಗಿದ್ದು,ಈ ಹಿಂದೆ ಬಹುತೇಕಎಲ್ಲಾ ಆರೋಗ್ಯ ಸಮಸ್ಯೆಗಳಿಗೂಆಯುರ್ವೇದ ಆಧಾರಿತ ಮನೆ ಮದ್ದುಚಾಲ್ತಿಯಲ್ಲಿತ್ತು ಎಂದರು.
ಸಮ್ಮೇಳನದಲ್ಲಿತೆರೆಯಲಾಗಿರುವ ಪಾಕೋತ್ಸವ ಆಹಾರಮೇಳ, ಸ್ವದೇಶಿಮಳಿಗೆ, ಗೋಶಾಲೆ,ಸಮಾನಂತರವೇದಿಕೆಯಲ್ಲಿ ನಡೆಯುತ್ತಿದ್ದತಜ್ಞರ ವಿಚಾರಗೋಷ್ಠಿಗಳಲ್ಲಿಸಾವಿರಾರು ಜನ ಪಾಲ್ಗೊಂಡಿದ್ದರು.
ಆಯುರ್ವೇದದಬಗ್ಗೆ ಶ್ರದ್ಧೆಯ ಅಗತ್ಯವಿದೆ
ಆಯುರ್ವೇದವುಸಾವಿರಾರು ವರ್ಷಗಳ ಹಿಂದೆಋಷಿ-ಮುನಿಗಳುಕಂಡು ಹಿಡಿದ ಔಷಧಿ. ಮನುಷ್ಯನನ್ನುನಿಸರ್ಗದೊಂದಿಗೆ ಬೆಸೆಯುವುದೇಆಯುರ್ವೇದ.ಆಧುನಿಕವೈದ್ಯಪದ್ದತಿಯಲ್ಲಿ ನೂರಾರುಔಷಧಿಗಳಿದ್ದರೆ;ಆಯುರ್ವೇದದಲ್ಲಿಸಾವಿರಾರು ಔಷಧಿಗಳಿವೆ.ವೈಜ್ಞಾನಿಕವಾದಆಯುರ್ವೇದದ ಬಗ್ಗೆ ಪ್ರಚಾರದಕೊರತೆ ಇದೆ.ಆಯುರ್ವೇದದಬಗ್ಗೆ ವೈದ್ಯರು ಮತ್ತು ರೋಗಿಗಳಿಗೆಶ್ರದ್ಧೆ ಅಗತ್ಯವಿದೆ ಎಂದುವಿಆರ್‌ಎಲ್ ಸಮೂಹ ಸಂಸ್ಥೆಗಳಚೇರ್ಮನ್ ಡಾ.ವಿಜಯಸಂಕೇಶ್ವರ ಹೇಳಿದ್ದಾರೆ.
ಆಯುರ್ವೇದವೈದ್ಯರು ಚಿಕಿತ್ಸೆ ಆರಂಭಿಸುವಮುನ್ನ ಧನ್ವಂತರಿಯ ಪ್ರಾರ್ಥನೆಮಾಡಿ ಭಕ್ತಿಯಿಂದ ನೀಡುತ್ತಾರೆ. ಡಾ.ಗಿರಿಧರಕಜೆಯವರು ಜನರಿಗೆ ಆಯುರ್ವೇದದಅರಿವು ಮೂಡಿಸುವ ಉದ್ದೇಶದಿಂದಇಂತಹ ಮಹತ್ವದ ಸಮ್ಮೇಳನ ಆಯೋಜಿಸಿರುವುದುಸ್ತುತ್ಯಾರ್ಹ.ಇಂತಹ ಕಾರ್ಯಕ್ಕೆಎಲ್ಲರ ಸಹಕಾರ ಅಗತ್ಯ ಎಂದರು.
ಕೊರೋನಾ ಸಂದರ್ಭದಲ್ಲಿ ವ್ಯಾಕ್ಸಿನ್ ಬರುವ ಮೊದಲೇ ಡಾ.ಗಿರಿಧರ ಕಜೆಯವರು ಔಷಧವನ್ನು ಸಂಶೋಧಿಸಿದ್ದು, ಲಕ್ಷಾಂತರ ಜನರಿಗೆ ಉಚಿತವಾಗಿ ಹಂಚಿದ್ದರು. ನಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿಯನ್ನು ಸರಿಪಡಿಸಿಕೊಂಡು, ಭಾರತ ವಿಶ್ವಗುರುವಾಗಲು ಆಯುರ್ವೇದ ಅತ್ಯಗತ್ಯ.
ಜನರ ದೈಹಿಕ ಸಾಮರ್ಥ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗುತ್ತಿದೆ. ಆಯುರ್ವೇದದ ಜೀವನ ಕ್ರಮ ಅನುಸರಣೆಯಿಂದ ಸತ್ವಶಾಲಿಯಾದ ಬದುಕು ಸಾಧ್ಯ. ಅಂತಹ ಆಯುರ್ವೇದ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಡಾ.ವಿಜಯ ಸಂಕೇಶ್ವರರು ತಮ್ಮ ವಿಜಯವಾಣಿ ದಿನಪತ್ರಿಕೆಯಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಆಯುರ್ವೇದ ಕುರಿತ ಲೇಖನಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.