NASA (ಚಿತ್ರ X) 
ದೇಶ

ಬಾಹ್ಯಾಕಾಶ ನಿಲ್ದಾಣದಲ್ಲಿ 'ನೇಚರ್ ಥೆರಪಿ': ಗಿಡಗಳ ಆರೈಕೆಯಲ್ಲಿ ನಾಸಾ ಗಗನಯಾತ್ರಿಗಳು! NASA

NASA: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ನಾಸಾ ಗಗನಯಾತ್ರಿ ಜೆಸ್ಸಿಕಾ ಮೇಯರ್ ಹಾಗೂ ಅವರ ತಂಡದ ಸದಸ್ಯರು ವಿಶೇಷ ಪ್ರಯೋಗವೊಂದರಲ್ಲಿ ನಿರತರಾಗಿದ್ದಾರೆ. 'ಎಕ್ಸ್‌ಪೆಡಿಷನ್ 75' ಯೋಜನೆಯ ಭಾಗವಾಗಿ ರೆಡ್ ರಷ್ಯನ್ ಕೇಲ್ ಮತ್ತು ವಾಸಾಬಿ ಸಾಸಿವೆ ಸಸ್ಯಗಳನ್ನು ಬೆಳೆಸಲಾಗುತ್ತಿದ್ದು, ಗಗನಯಾತ್ರಿ ಮೇಯರ್ ಇವುಗಳನ್ನು ತಮಾಷೆಯಾಗಿ "ನಮ್ಮ ತಂಡದ ಹೊಸ ಸದಸ್ಯರು" ಎಂದು ಬಣ್ಣಿಸಿದ್ದಾರೆ.

ಪ್ರಯೋಗದ ಮುಖ್ಯ ಉದ್ದೇಶ

ಸಾಮಾನ್ಯವಾಗಿ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸಲು ಪ್ರತ್ಯೇಕವಾದ ಸಸ್ಯ ಹವಾಮಾನ ಕೊಠಡಿಗಳನ್ನು ಬಳಸಲಾಗುತ್ತದೆ. ಆದರೆ ಈ ಬಾರಿ ಯಾವುದೇ ವಿಶೇಷ ವ್ಯವಸ್ಥೆಯಿಲ್ಲದೆ, ಬಾಹ್ಯಾಕಾಶ ನಿಲ್ದಾಣದ ತೆರೆದ ಕ್ಯಾಬಿನ್ ವಾತಾವರಣದಲ್ಲೇ ಗಿಡಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರೊಂದಿಗೆ ಬಾಹ್ಯಾಕಾಶದಲ್ಲಿ ಸಂಗ್ರಹಿಸಿಡುವ ಬೀಜಗಳ ಮೊಳಕೆ ಒಡೆಯುವ ಸಾಮರ್ಥ್ಯದ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ಸಹ ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.

ಪೋಸ್ಟ್​ನಲ್ಲಿ ಹಂಚಿಕೊಂಡಿದ್ದೇನು?

ತಮ್ಮ ಸಾಮಾಜಿಕ ಜಾಲತಾಣವಾದ X ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಜೆಸ್ಸಿಕಾ ಮೇಯರ್, ಸಂಪೂರ್ಣ ಯಾಂತ್ರಿಕ ಹಾಗೂ ಜೀವಕಳೆಯಿಲ್ಲದ ಬಾಹ್ಯಾಕಾಶ ವಾತಾವರಣದಲ್ಲಿ ಹಸಿರಾದ, ಜೀವಂತ ಗಿಡಗಳನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿದ್ದು, ಇದು ತಮಗೆ ಒಂದು ರೀತಿಯ 'ನೇಚರ್ ಥೆರಪಿ' (ನಿಸರ್ಗ ಚಿಕಿತ್ಸೆ) ನೀಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ಗಿಡಗಳು ಬೆಳೆಯುತ್ತಿರುವ ಈ ವಿಶಿಷ್ಟ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಅತ್ಯಂತ ರೋಚಕ ಮತ್ತು ಸೌಂದರ್ಯಯುತ ಪ್ರಯೋಗವೆಂದು ಹರ್ಷ ವ್ಯಕ್ತಪಡಿಸಿದ್ದಾರೆ (

​).