Assistance for parents of disabled children 
ದೇಶ

ಅಂಗವಿಕಲ ಮಕ್ಕಳ ಪಾಲಕರಿಗೆ ನೆರವು

ಚಿಕ್ಕನಾಯಕನಹಳ್ಳಿ: -ಬುದ್ಧಿಮಾಂದ್ಯ ಸೇರಿದಂತೆ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವ ಪಾಲಕರ ಕುಟುಂಬಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇವರ ಕುಟುಂಬಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮೊಬಿಲಿಟಿ ಇಂಡಿಯಾ ಸಂಸ್ಥೆಯಿಂದ ಆಯೋಜಿಸಿದ್ದ ಆರೈಕೆದಾರರಿಗೆ ಮಕ್ಕಳ ದೈನಂದಿನ ಚಟುವಟಿಕೆಗಳ ನಿರ್ವಹಣೆ ಕುರಿತು ಕಾರ್ಯಾಗಾರ ಹಾಗೂ ನಿರಾಮಯ ಆರೋಗ್ಯ ವಿಮೆ ಕಾರ್ಡ್​ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವ ಪಾಲಕರ ಕಾರ್ಯ ಭಗವಂತನೇ ಮೆಚ್ಚುವಂತದ್ದು, ಸದಾ ಕಾಲ ಅವರ ಜತೆಯಲ್ಲೆ ಇದ್ದು ಅವರನ್ನು ನೋಡಿಕೊಳ್ಳುವುದು ಸಲಭವಲ್ಲ. ಇಂತಹ ಕುಟುಂಬಗಳಿಗೆ ಅಗತ್ಯ ನೆರವು ಮೊದಲ ಅದ್ಯತೆ ನೀಡಿ ಸಹಕಾರ ನೀಡುತ್ತೇನೆ ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಆನಂದ್​ ಮಾತನಾಡಿದರು. ಅಂಗವಿಕಲ ಮಕ್ಕಳ ತಾಲೂಕು ನೊಡೆಲ್​ ಅಧಿಕಾರಿ ರೇಖಾ, ವಿವಿದೋದ್ದೇಶ ಪುರ್ನವಸತಿ ಕಾರ್ಯಕರ್ತ ರಮೇಶ್​, ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸುಧಾ ಹಾಗೂ ಆಯುಷ್​ ಇಲಾಖೆಯ ವೈದ್ಯರು ಇದ್ದರು.