Assam Election Results 2026
- ಬಿಜೆಪಿ ನೇತೃತ್ವದ ಮೈತ್ರಿಕೂಟವು 100 ಸ್ಥಾನಗಳಲ್ಲಿ ಮುನ್ನಡೆ
- ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೇವಲ 24 ಸ್ಥಾನಗಳಲ್ಲಿ ಮುನ್ನಡೆ
- ಕಾಂಗ್ರೆಸ್ ಹ್ಯಾಟ್ರಿಕ್ ದಾಖಲೆ ಸರಿಗಟ್ಟುವತ್ತ ಹೆಜ್ಜೆಯಿಟ್ಟಿರುವ ಬಿಜೆಪಿ ಮೈತ್ರಿಕೂಟ
Assam Election Results 2026: 2026ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಯಾರಿಗೆ ಎನ್ನುವ ಕತೂಹಲಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ಕ್ಷಣಗಳಿವೆ..ಇದೇ ಹೊತ್ತಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಹ್ಯಾಟ್ರಿಕ್ ಜಯದ ಇರಾದೆಯಲ್ಲಿದ್ದಾರೆ. ಇನ್ನು ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ವಿಪಕ್ಷ ಕಾಂಗ್ರೆಸ್ಗೆ ಮತ್ತೆ ಮುಖಭಂಗವಾಗಿದೆ. ಕೇವಲ 24 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಎಕ್ಸಿಟ್ ಪೋಲ್ ಹೇಳಿದ್ದೇನು?
ಎಕ್ಸಿಟ್ ಪೋಲ್ಗಳ ಪ್ರಕಾರ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 88 ಸ್ಥಾನ ಗೆಲ್ಲಲಿದೆ ಎನ್ನಲಾಗಿತ್ತು. ಇನ್ನು ಕಾಂಗ್ರೆಸ್24ರಿಂದ 36 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು ಎನ್ನಲಾಗಿತ್ತು. ಆದರೆ, ಬಿಜೆಪಿ ಮತ್ತಷ್ಟು ಸೀಟ್ಗಳನ್ನು ಗೆದ್ದು ಅತಿದೊಡ್ಡ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಹೂಡಿದ್ದ ತಂತರವನ್ನೇ ಪ್ರಯೋಗಿಸಿ'ಹ್ಯಾಟ್ರಿಕ್' ಗೆಲುವನ್ನು ಸಾಧಿಸುವತ್ತ ಮುನ್ನುಗಿದ್ದಾರೆ. ಆ ಮೂಲಕ ಮೂರನೇ ಬಾರಿಗೆ ಸಿಎಂ ಇರಾದೆಯಲ್ಲಿ ಇದ್ದಾರೆ. ಇಷ್ಟೇ ಅಲ್ಲದೆ ಜೋರ್ಹತ್‌ನಲ್ಲಿ ಗೌರವ್ ಗೊಗೊಯ್ ಹಿನ್ನಡೆ ಸಾಧಿಸಿದ್ದಾರೆ.
ಅಸ್ಸಾಂ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. 722 ಅಭ್ಯರ್ಥಿಗಳು ಸ್ಪರ್ಧಿಸಿದ್ದು 2.50 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಿದ್ದು, ಶೇ.85.96 ರಷ್ಟು ದಾಖಲೆಯ ಮತದಾನವಾಗಿತ್ತು.
ಯಾರಿಗೆ ಮುನ್ನಡೆ
126 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಾದ ಎಜಿಪಿ ಮತ್ತು ಯುಪಿಪಿಎಲ್ ಪ್ರಬಲ ಮುನ್ನಡೆ ಕಾಯ್ದುಕೊಂಡಿವೆ. ಅಭಿವೃದ್ಧಿ ಮಂತ್ರ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರ ಆಡಳಿತ ವೈಖರಿಗೆ ಅಸ್ಸಾಂ ಜನತೆ ಮತ್ತೊಮ್ಮೆ ಮಣೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ ಕಾಗ್ರೆಸ್ ನಾಯಕರು ಹಳೆಯ ವೈಭವ ಮರುಕಳಿಸುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ಈ ಭಾರೀ ಆರಂಭಿಕ ಆಘಾತ ಎದುರಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದ ಕಾಂಗ್ರೆಸ್, ಬಿಜೆಪಿಯ ತಂತ್ರಗಾರಿಕೆಯ ಮುಂದೆ ಮಖಾಡೆ ಮಲಗಿದಂತಾಗಿದೆ. ಧುಬ್ರಿ ಮತ್ತು ದಕ್ಷಿಣ ಅಸ್ಸಾಂನ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆಯಾದರೂ, ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಲಿಲ್ಲ
ಬಿಜೆಪಿ ಕಚೇರಿ ಮುಂದೆ ಸಂಭ್ರಮ
ಈಗಾಗಲೇ ಬಿಜೆಪಿ ಕಾರ್ಯಕರ್ತರು ಅಸ್ಸಾಂನ ಕಚೇರಿಗಳ ಮುಂದೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಇದು ಅಸ್ಸಾಂನ ಜನರ ಮತ್ತು ಅಭಿವೃದ್ಧಿಯ ಜಯ ಎಂದು ಹಿಮಂತ ಬಿಸ್ವಾ ಶರ್ಮಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.