Assam CM has ties to Kasaragod
ಮುಳ್ಳೇರಿಯ (ಕಾಸರಗೋಡು): ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕಾಸರಗೋಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ ಮುನ್ನಾದಿನವಾದ ಸೋಮವಾರ, ಜಿಲ್ಲೆಯ ಪೆರಿಯ ಗೋಕುಲಂ ಗೋಶಾಲೆಗೆ ಭೇಟಿ ನೀಡಿದ್ದಾರೆ.
ಅವರು 16 ವರ್ಷಗಳಿಂದ ಬೇಕಲ ಗೋಕುಲಂ ಗೋಶಾಲೆಯ ಅಧಿಪತಿ ಹಾಗೂ ಖ್ಯಾತ ಜ್ಯೋತಿಷಿ ವಿದ್ವಾಂಸ ವಿಷ್ಣು ಪ್ರಸಾದ್ ಹೆಬ್ಬಾರ್ ಅವರನ್ನು ತಮ್ಮ ಆಧ್ಯಾತ್ಮಿಕ ಗುರುಗಳೆಂದು ಸ್ವೀಕರಿಸಿದ್ದಾರೆ. 2010ರಲ್ಲಿ ತಮ್ಮ ಜೀವನದ ಅತ್ಯಂತ ಸಂಕೀರ್ಣ ಕಾಲಘಟ್ಟದಲ್ಲಿದ್ದಾಗ ಮಾರ್ಗದರ್ಶನಕ್ಕಾಗಿ ಶರ್ಮಾ ಮೊದಲ ಸಲ ವಿಷ್ಣು ಅವರನ್ನು ಭೇಟಿ ಮಾಡಿದ್ದರು. ಅಂದಿನಿಂದ ಹಿಮಂತ-ಹೆಬ್ಬಾರ್ ಕುಟುಂಬಗಳ ಬಾಂಧವ್ಯ ಬೆಸೆದಿದೆ. ಅಸ್ಸಾಂನ ಹಲವು ಪುರಾತನ ದೇವಾಲಯಗಳ ಪುನರುದ್ಧಾರ, ಪುನಃ ಪ್ರತಿಷ್ಠಾಪನೆ ಹಾಗೂ ಅತಿರುದ್ರ ಮಹಾಯಾಗದಂಥ ಧಾರ್ವಿುಕ ವಿಧಿವಿಧಾನಗಳು ವಿಷ್ಣು ಹೆಬ್ಬಾರ್ ಪೌರೋಹಿತ್ಯದಲ್ಲಿ ನೆರವೇರುತ್ತಿವೆ. ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ, ವಿಷ್ಣು ಹೆಬ್ಬಾರ್ ಮೇ 15ರಂದು ಮುಂಜಾನೆ ಗುವಾಹಟಿಗೆ ಪ್ರಯಾಣಿಸಲಿದ್ದಾರೆ.