ಮುಂಬೈ ಗೆಲುವಿಗೆ ಅಸ್ತು ಎಂದ ಅಶ್ವಿನಿ ದೇವತೆಗಳು...ಎಂಐಗೆ ದಿಗ್ವಿಜಯದ ತಿಲಕ
ಅಹಮದಾಬಾದ್: ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ (MIvsGT) ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ (GT) ಪಡೆಯನ್ನು ಧೂಳಿಪಟ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ ತನ್ನ ಸೋಲಿನ ಸರಪಳಿಯನ್ನು ಕಡಿದುಕೊಂಡಿದ್ದು, ಅಂಕಪಟ್ಟಿಯಲ್ಲಿ ಚೇತರಿಕೆ ಕಂಡಿದೆ.
ಮುಂಬೈ ಇಂಡಿಯನ್ಸ್ ತಂಡದ ಈ ಐತಿಹಾಸಿಕ ಗೆಲುವಿನ ಶಿಲ್ಪಿ ಯುವ ಬ್ಯಾಟರ್ ತಿಲಕ್ ವರ್ಮಾ. ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದ ಅವರು, ಅಹಮದಾಬಾದ್ ಮೈದಾನದಲ್ಲಿ ದಾಖಲೆಯ ಶತಕ ಸಿಡಿಸಿ ಮಿಂಚಿದರು.
ತಿಲಕ್ ವರ್ಮಾ ದಾಖಲೆಯ ಶತಕ: ಇತಿಹಾಸ ಪುಟ ಸೇರಿದ ಇನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಬೇಕಾಗಿ ಬಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಮೈದಾನದ ತುಂಬೆಲ್ಲಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 45 ಎಸೆತಗಳಲ್ಲಿ 101 ರನ್ ಗಳಿಸಿದ ತಿಲಕ್, 8 ಬೃಹತ್ ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ತಂಡದ ಮೊತ್ತವನ್ನು 199ಕ್ಕೆ ತಲುಪಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಮುಂಬೈ ಪರ ದಾಖಲಾದ ಅತ್ಯಂತ ವೇಗದ ಶತಕಗಳಲ್ಲಿ ಒಂದಾಗಿ ದಾಖಲೆ ನಿರ್ಮಿಸಿತು.
ಬೌಲಿಂಗ್‌ನಲ್ಲಿ ಮುಂಬೈ ಕಲಿಗಳ ಆರ್ಭಟ
200 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್‌ಗೆ ಜಸ್ಪ್ರೀತ್ ಬುಮ್ರಾ ಮತ್ತು ಅಶ್ವಿನಿ ಕುಮಾರ್ ಆಘಾತ ನೀಡಿದರು. ಗಿಲ್ ಬ್ಯಾಟರ್ಗಳನ್ನು ಕಾಡಿದ ಯುವ ವೇಗಿ ಅಶ್ವಿನಿ ಕುಮಾರ್ 4 ವಿಕೆಟ್ ಪಡೆದು ಗುಜರಾತ್ ತಂಡದ ಬೆನ್ನೆಲುಬನ್ನೇ ಮುರಿದರು.ಅಲ್ಲದೆ, ಬ್ರಮ್ರಾ 1 ವಿಕೆಟ್ ಪಡೆದರು. ಮುಂಬೈನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ ಹೋದರು.
ಪಂದ್ಯದ ಪ್ರಮುಖ ತಿರುವುಗಳು:
ಜೊತೆಯಾಟ: ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ 80 ರನ್‌ಗಳ ಜೊತೆಯಾಟ ಪಂದ್ಯದ ಗತಿಯನ್ನು ಬದಲಿಸಿತು.
ಫೀಲ್ಡಿಂಗ್ ಮ್ಯಾಜಿಕ್: ಮುಂಬೈ ಇಂಡಿಯನ್ಸ್ ಆಟಗಾರರು ಇಂದು ಮೈದಾನದಲ್ಲಿ ಚಿರತೆಯಂತೆ ಓಡಿ ಅತ್ಯುತ್ತಮ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ರನ್ ಕದಿಯದಂತೆ ತಡೆದರು.
ಸೋಲಿನ ಸರಣಿಗೆ ಅಂತ್ಯ: ಕಳೆದ 4 ಪಂದ್ಯಗಳಲ್ಲಿ ಸತತವಾಗಿ ಸೋತಿದ್ದ ಮುಂಬೈಗೆ ಈ ಗೆಲುವು ಸಂಜೀವಿನಿಯಂತೆ ಕೆಲಸ ಮಾಡಿದೆ,(ಏಜೆನ್ಸೀಸ್)