ಅರುಣಾಚಲ ಪ್ರದೇಶದ ಬಾಲಕಿ ಕಾರ್ಗಾ ಟಿಂಕಲ್ ಗೊಂಗೋ 
ದೇಶ

'ನೀವು ಚೈನೀಸ್ ಅಲ್ವಾ'​ ಎಂಬ ಮಾತಿಗೆ ಈ ಪುಟ್ಟ ಪೋರಿ ಕೊಟ್ಟ ಉತ್ತರ ಕೇಳಿ ನೆಟ್ಟಿಗರೇ ಗಪ್​ಚುಪ್ | ​Arunachal Girl

ಪ್ರಮುಖ ಮುಖ್ಯಾಂಶಗಳು

  • ನೀವು ಚೈನೀಸ್ ಅಲ್ವಾ ಎಂದಿದ್ದಕ್ಕೆ ಪುಟ್ಟ ಬಾಲಕಿ ಖಡಕ್ ಉತ್ತರ
  • ನಮ್ಮನ್ನು ಹಾಗೆಲ್ಲ ಕರೆಯಬೇಡಿ ಎನ್ನುತ್ತಲೇ ನೆಟ್ಟಿಗರ ಹೃದಯ ಗೆದ್ದ ಕ್ಯೂಟ್​ ಪೋರಿ
ಇಟಾನಗರ: ಅರುಣಾಚಲ ಪ್ರದೇಶದ ಈ ಪುಟ್ಟ ಬಾಲಕಿ (Arunachal Girl ) ನೋಡಲು ಎಷ್ಟು ಮುದ್ದಾಗಿ, ಚೆಂದವಾಗಿ ಕಾಣಿಸುತ್ತಾಳೋ, ಮಾತಿನಲ್ಲೂ ಅಷ್ಟೇ ಚೆನ್ನಾಗಿ ಎಲ್ಲರ ಗಮನವನ್ನು ಸೆಳೆದಿದ್ದಾಳೆ. ಇದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಆಕೆ ನೀಡಿದ ವಾರ್ನಿಂಗ್​ ದೃಶ್ಯವೇ ಸಾಕ್ಷಿ.
ಇಟಾನಗರದ ಕಾರ್ಗಾ ಟಿಂಕಲ್ ಗೊಂಗೋ ಎಂಬ ಹೆಸರಿನ ಈ ಪುಟ್ಟ ಪೋರಿ, 'ನಮ್ಮನ್ನು ಕೇವಲ ನೋಟದಿಂದ ಚೈನೀಸ್ ಎಂದು ಕರೆಯಬೇಡಿ. ಅದು ಮನಸ್ಸಿಗೆ ತುಂಬ ನೋವಾಗುತ್ತೆ ಮತ್ತು ಕೆಟ್ಟ ಕೋಪ ತರಿಸುತ್ತೆ. ನಾವು ಭಾರತೀಯರು' ಎಂದು ಹೇಳುವ ಮೂಲಕ ತಾನು ಹಾಗೂ ತನ್ನ ಕುಟುಂಬಸ್ಥರು ಭಾರತೀಯ ಮೂಲದವರು ಎಂಬುದನ್ನು ಹೆಮ್ಮೆಯಿಂದ ವ್ಯಕ್ತಪಡಿಸಿದ್ದಾಳೆ.

ಮುಲಾಜಿಲ್ಲದ ಕೌಂಟರ್

ಬಾಲಕಿಯ ತಾಯಿ ಐಸ್‌ಕ್ರೀಂ ಖರೀದಿಸುವ ಸಂದರ್ಭವನ್ನು ಹಾಗೇ ಸುಮ್ಮನೆ ಸೋಷಿಯಲ್ ಮೀಡಿಯಾಗೆ ಅಪ್​ಲೋಡ್​ ಮಾಡಿದಾಗ, ವಿಡಿಯೋ ನೋಡಿದ ವ್ಯಕ್ತಿಯೊಬ್ಬರು, ಆಕೆಯನ್ನು ಚೈನೀಸ್ ಮಗು ಅಲ್ವಾ ಎಂದು ಕರೆದಿದ್ದರು. ಈ ಕಮೆಂಟ್​ ನೋಡಿ ಬೇಸರಗೊಂಡ ಬಾಲಕಿ, 'ನಾವು ಚೈನೀಸ್ ಅಲ್ಲ! ಇಂಡಿಯನ್ಸ್. ನಮ್ಮನ್ನು ಭಾರತೀಯರು ಎಂದು ಕರೆಯಿರಿ' ಎಂದು ಪ್ರತಿಕ್ರಿಯಿಸುವ ಮೂಲಕ ಒಂದು ನಿಮಿಷ ನೆಟ್ಟಿಗರನ್ನೇ ಗಪ್​ಚುಪ್​ ಮಾಡಿದ್ದಾಳೆ.

'ಜನ ಗಣ ಮನ' ಹಾಡಿದ ಪೋರಿ

ಅಷ್ಟೇ ಅಲ್ಲದೆ, ವಿಡಿಯೋದಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವ ಮೂಲಕ ದೇಶದ ಮೇಲಿನ ತನ್ನ ಪ್ರೀತಿಯನ್ನೂ ವ್ಯಕ್ತಪಡಿಸಿದ್ದಾಳೆ. ತನ್ನ ಆತ್ಮವಿಶ್ವಾಸದ ಮಾತುಗಳಿಗೆ ಫಿದಾ ಆಗಿರುವ ನೆಟ್ಟಿಗರಿಗೆ ಬಾಲಕಿ ತುಂಬ ಹೃದಯದ ಧನ್ಯವಾದ ಕೂಡ ತಿಳಿಸಿದ್ದಾಳೆ. ಖಂಡಿತವಾಗಿ ಈಕೆಯನ್ನು ಮಾಧ್ಯಮಗಳು ನೇರ ಸಂದರ್ಶನ ಮಾಡಿ, ಅವಳಲ್ಲಿರುವ ಹಲವು ಕುತೂಹಲಕಾರಿ ಹಾಗೂ ಉತ್ತಮ ವಿಷಯಗಳನ್ನು ಜನರಿಗೆ ಪರಿಚಯಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ. ಆಕೆಯ ಚೆಂದದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ,(ಏಜೆನ್ಸೀಸ್).