ದೇಶ

ನದಿಗೆ ಉರುಳಿ ಬಿದ್ದ ಸೇನಾ ವಾಹನ; ಸೇನಾ ಕ್ಯಾಪ್ಟನ್ ಸಾ*, ಮೂವರು ಸಿಬ್ಬಂದಿಗೆ ಗಾಯ | Army vehicle

ಮಣಿಪುರದಲ್ಲಿ ಸೇನಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದು ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸೇನಾ ಕ್ಯಾಪ್ಟನ್ ಮೃತಪಟ್ಟಿದ್ದಾರೆ. ಮತ್ತು ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಬುಧವಾರ(ನ. 18) ವರದಿಯಾಗಿದೆ.

ಇಂಫಾಲ್: ಮಣಿಪುರದಲ್ಲಿ ಸೇನಾ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದು ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಸೇನಾ ಕ್ಯಾಪ್ಟನ್ ಮೃತಪಟ್ಟಿದ್ದಾರೆ. ಮತ್ತು ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಬುಧವಾರ(ನ. 18) ವರದಿಯಾಗಿದೆ.

ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ವೇಳೆ 8ನೇ ಬಿಹಾರ ರೆಜಿಮೆಂಟ್‌ನ ಸೇನಾ ಸಿಬ್ಬಂದಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಲಾಮ್ಲೈ ಚಲ್ಲೌದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡ ವಾಹನ ಇಟಮ್ ನದಿಗೆ ಉರುಳಿದೆ ಎನ್ನಲಾಗಿದೆ. ಮಾಹಿತಿ ತಿಳಿದ ತಕ್ಷಣಾ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ನದಿಗೆ ಬಿದ್ದ ವಾಹನದಲ್ಲಿದ್ದ ಸೇನಾ ಸಿಬ್ಬಂದಿಯನ್ನು ರಕ್ಷಿಸಿ ಹೊರ ತಂದಿದ್ದಾರೆ. ಆದಾಗ್ಯೂ, 29 ವರ್ಷದ ಸೇನಾ ಕ್ಯಾಪ್ಟನ್ ಹನುಮಾನ್ ರಾಮ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದು, ಇತರ ಮೂವರು ಸಿಬ್ಬಂದಿಗಳಾದ 24 ವರ್ಷದ ಸಿಪಾಯಿ ಮಾಲಿ ಜಯೇಶ್ ಹಿಮ್ಮತ್, 37 ವರ್ಷದ ಸಿಪಾಯಿ ರಾಕೇಶ್ ಸರ್ಪತೆ ಮತ್ತು 19 ವರ್ಷದ ಅಗ್ನಿವೀರ್ ಅಖಿಲೇಶ್ ಕುಮಾರ್ ಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಅಪಘಾತದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).