ಆರೋಪಿ ವರ ಸಜನ್ ಬರಯ್ಯ 
ದೇಶ

ಹಣ ಮತ್ತು ಆಹಾರದ ಬಗ್ಗೆ ಗಲಾಟೆ; ಮದುವೆ ದಿನವೇ ವಧುವನ್ನು ರಾಡ್​ನಿಂದ ಹೊಡೆದು ಕೊಂದ ವರ | Murder

ಅಹ್ಮದಾಬಾದ್: ಗುಜರಾತ್​ನ ಭಾವನಗರದಲ್ಲಿ ಇಂದು(ನ. 15) ಬೆಳಗ್ಗೆ ಮದುವೆಗೆ ಸಿದ್ದವಾಗಿದ್ದ ವಧುವನ್ನು ಆಹಾರ ಮತ್ತು ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆಕೆಯನ್ನು ಮದುವೆಯಾಗಬೇಕಿದ್ದ ವರನೇ ಕಬ್ಬಿಣದ ರಾಡ್​ನಿಂದ ಹೊಡೆದು ಕೊಂದಿದ್ದಾನೆ(Murder) ಎಂದು ವರದಿಯಾಗಿದೆ.
ಪ್ರಭುದಾಸ್ ಸರೋವರ ಪ್ರದೇಶದ ಟೆಕ್ರಿ ಚೌಕ್ ಬಳಿ ಈ ಘಟನೆ ನಡೆದಿದೆ. 22 ವರ್ಷದ ಸೋನಿ ರಾಥೋಡ್‌ಳನ್ನು ಆಕೆಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವರ ಸಜನ್ ಬರಯ್ಯ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆಕೆ ತಿಂಗಳುಗಳಿಂದ ಅವನ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು.
ಈ ಕುರಿತು ಮಾಹಿತಿ ನೀಡಿರುವ ಡಿವೈಎಸ್​ಪಿ, ಇಂದು ಇಬ್ಬರ ಮದುವೆ ನಡೆಯಬೇಕಿತ್ತು. ಅದಕ್ಕೂ ಮುಂಚೆ ಬೆಳಗಿನ ಜಾವ ಇಬ್ಬರ ನಡುವೆ ಹಣ ಮತ್ತು ಆಹಾರದ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಸಾಜನ್ ಕಬ್ಭಿಣದ ರಾಡ್​ನಿಂದ ಸೋನಿಯಾ ತಲೆಗೆ ಹೊಡೆದಿದ್ದಾನೆ. ದರಿಂದ ತಲೆಗೆ ಮಾರಕ ಗಾಯವಾಯಿತು. ಹಲ್ಲೆಯ ನಂತರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಸ್ಥಳೀಯರು ಗಂಗಾಜಲಿಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಕ್ಷಣವೇ ಪೊಲೀಸ್ ಪಡೆಯು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಔಪಚಾರಿಕ ದೂರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).