ಪ್ರಿಸಿಷನ್ & ಗೈಡೆಡ್ ಆರ್ಟಿಲರಿ
ವಾಷಿಂಗ್ಟನ್: ಭಾರತಕ್ಕೆ ಜಾವೆಲಿನ್ (ಎಫ್ಜಿಎಂ & 148) ಆ್ಯಂಟಿ & ಟ್ಯಾಂಕ್ ಗೈಡೆಡ್ ಮಿಸೈಲ್ ಮಾರಾಟ ಮಾಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಈ ಒಪ್ಪಂದದ ಮೌಲ್ಯ 45.7 ಮಿಲಿಯನ್ ಡಾಲರ್ (ಸುಮಾರು 385 ಕೋಟಿ ರೂ.) ಆಗಲಿದೆ. ಇದರ ಜತೆ ಎಕ್ಸ್ ಕ್ಯಾಲಿಬರ್ (ಎಂ 982ಎ1) ಪ್ರಿಸಿಷನ್& ಗೈಡೆಡ್ ಆರ್ಟಿಲರಿ ಮಾರಾಟಕ್ಕೂ ಅನುಮೋದನೆ ಸಿಕ್ಕಿದೆ. ಎರಡೂ ವಹಿವಾಟಿನ ಒಟ್ಟು ಮೊತ್ತ 93 ಮಿಲಿಯನ್ ಡಾಲರ್ (824 ಕೋಟಿ ರೂ.) ಆಗಲಿದೆ.
ಈ ಒಪ್ಪಂದ ಭಾರತದ ರಣಾ ಶಕ್ತಿ ಬಲಗೊಳಿಸುತ್ತದೆ. ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಇದು ಸಹಾಯ ಮಾಡಲಿದೆ. ಇದು ಅಮೆರಿಕ&ಭಾರತ ರಕ್ಷಣಾ ಸಹಕಾರಕ್ಕೆ ಮಹತ್ವದ ಹೆಜ್ಜೆ ಆಗಲಿದೆ.
ಅಮೆರಿಕ ವಿದೇಶಾಂಗ ಇಲಾಖೆ
100 ಜಾವೆಲಿನ್ ಪಣಿ, 25 ಲಾಂಚರ್ ಯೂನಿಟ್ಗಳು, ತರಬೇತಿ ಸಾಧನಗಳು, ಉಪಕರಣದ ಬಿಡಿ ಭಾಗಗಳು, ತಾಂತ್ರಿಕ ಸಹಾಯ
ಭಾರತಕ್ಕೆ ಲಾಭ ಏನು?
- ಚೀನಾ&ಪಾಕಿಸ್ತಾನದ ಗಡಿಯಲ್ಲಿ ಟ್ಯಾಂಕ್ಗಳ ವಿರುದ್ಧ ಭಾರತೀಯ ಸೈನಿಕರು ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು
- ಈಗಾಗಲೇ ಭಾರತದಲ್ಲಿ ಜಾವೆಲಿನ್ ಪಣಿ ಇದೆ. ಆದರೆ ಇದು ಅತ್ಯಾಧುನಿಕ ಮತ್ತು ಶಕ್ತಿಯುತ
- ಸೇನೆಯ ಬತ್ತಳಿಕೆಗೆ ಹೊಸ ಅಸ್ತ್ರ
ಜಾವೆಲಿನ್ ಪಣಿ ಹೇಗಿದೆ?
- ಇದು ಒಬ್ಬ ಸೈನಿಕ ಭುಜದ ಮೇಲೆ ಇಟ್ಟುಕೊಂಡು ಹಾರಿಸಬಹುದಾದ ಪಣಿ.
- ಟ್ಯಾಂಕ್, ಬಂಕರ್, ಕಟ್ಟಡಗಳ ಮೇಲೆ ದಾಳಿ ಮಾಡಬಲ್ಲದು.
- ಫೈರ್ ಆ್ಯಂಡ್ ರ್ಗೆಟ್ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ.
- ಒಮ್ಮೆ ಟಾರ್ಗೆಟ್ ಲಾಕ್ ಮಾಡಿ ಉಡಾವಣೆ ಮಾಡಿದರೆ ನಿಖರವಾಗಿ ಗುರಿಯನ್ನು ತಲುಪುತ್ತದೆ.
- ಟ್ಯಾಂಕ್ನ ಮೇಲ್ಭಾಗದ ದುರ್ಬಲ ಜಾಗದ ಮೇಲೆ ನಿಖರ ವಾಗಿ ದಾಳಿ ಮಾಡುವ ಶಕ್ತಿ