Anupam Kher 
ದೇಶ

ಕೀಪ್ಯಾಡ್ ಫೋನ್‌ನೊಂದಿಗೆ ಸೆಲ್ಫಿ ಕೇಳಿದ ಭದ್ರತಾ ಸಿಬ್ಬಂದಿಗೆ ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಿದ ಅನುಪಮ್ ಖೇರ್! Anupam Kher

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಯ ಮಗನ ಓದಿಗೆ ಆಸರೆಯಾದ ನಟ
  • ಕೀಪ್ಯಾಡ್ ಫೋನ್ ಹಿಡಿದು ಬಂದವನಿಗೆ ಸ್ಮಾರ್ಟ್‌ಫೋನ್ ಗಿಫ್ಟ್ ನೀಡಿದ ಖೇರ್
  • ಸೆಕ್ಯೂರಿಟಿ ಗಾರ್ಡ್ ಮುಖದಲ್ಲಿ ಮಂದಹಾಸ
ಮುಂಬೈ: ( Anupam Kher ) ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ಗುರುಗ್ರಾಮದ ಸೋಹ್ನಾದಲ್ಲಿ ತಮ್ಮ ಮುಂಬರುವ ಚಿತ್ರ 'ಖೋಸ್ಲಾ ಕಾ ಘೋಷ್ಲಾ 2' ಚಿತ್ರೀಕರಣದಲ್ಲಿದ್ದಾಗ ನಡೆದ ಒಂದು ಘಟನೆ ಎಲ್ಲರ ಮನ ಗೆದ್ದಿದೆ.
ಚಿತ್ರೀಕರಣದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಧರ್ಮೇಂದ್ರ ಎಂಬ ಸೆಕ್ಯೂರಿಟಿ ಗಾರ್ಡ್, ಅನುಪಮ್ ಖೇರ್ ಅವರ ದೊಡ್ಡ ಅಭಿಮಾನಿ. ಅವರು ನಟನ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಅವರ ಬಳಿ ಇದ್ದದ್ದು ಹಳೆಯ ಮಾದರಿಯ 'ಕೀಪ್ಯಾಡ್' ಫೋನ್ ಮಾತ್ರ. ಅದರಲ್ಲಿ ಕ್ಯಾಮೆರಾ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗದೆ ನಿರಾಸೆಗೊಂಡ ಧರ್ಮೇಂದ್ರ ಅವರನ್ನು ಕಂಡ ಅನುಪಮ್ ಖೇರ್, ನೋಡಿ ನನಗೇ ಬೇಸರವಾಯಿತು (Mujhe Bura Laga Dekh Ke) ಎಂದು ಹೇಳುತ್ತಾ ಅವರಿಗೆ ಹೊಸ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹೊಸ ಫೋನ್ ಸಿಕ್ಕ ತಕ್ಷಣ ಧರ್ಮೇಂದ್ರ ಅವರು ಅನುಪಮ್ ಖೇರ್ ಜೊತೆ ಮೊದಲ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.ಈ ಫೋನ್ ಬಗ್ಗೆ ಮಾತನಾಡಿದ ಧರ್ಮೇಂದ್ರ, "ಇದನ್ನು ನಾನು 12ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗನ ಆನ್‌ಲೈನ್ ಶಿಕ್ಷಣಕ್ಕೆ ನೀಡುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
ಈ ವಿಡಿಯೋವನ್ನು ಸ್ವತಃ ಅನುಪಮ್ ಖೇರ್ ಅವರೇ ಹಂಚಿಕೊಂಡಿದ್ದು, ಅಭಿಮಾನಿಗಳು ಅವರ ಉದಾರತೆಯನ್ನು ಕೊಂಡಾಡುತ್ತಿದ್ದಾರೆ.