ಸಿಡ್ನಿ: ಕಳೆದ ವರ್ಷ ಹಬ್ಬದ ಬೋಂಡಿ ಬೀಚ್‌ನಲ್ಲಿ ಉಗ್ರಗಾಮಿಗಳಾದ ತಂದೆ-ಮಗನಿಂದಾದ ದಾಳಿ ಮಾಸುವ ಮುನ್ನವೇ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಗುಂಡಿನ ದಾಳಿ ಘಟನೆ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಶುಕ್ರವಾರ(ಜ. 23) ವರದಿಯಾಗಿದೆ.
ಗುರುವಾರ ನ್ಯೂ ಸೌತ್ ವೇಲ್ಸ್ ರಾಜ್ಯದ ಲೇಕ್ ಕಾರ್ಗಿಲ್ ಪಟ್ಟಣದಲ್ಲಿ ಓರ್ವ ಶಂಕಿತ ಬಂದೂಕುದಾರಿಯಿಂದ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದ್ದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಂಕಿತ ಉಗ್ರ ತಪ್ಪಿಸಿಕೊಂಡಿದ್ದು, ಪೊಲೀಸರು ಅವನನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಮತ್ತು ಸ್ದಳೀಯರಿಗೆ ತಮ್ಮ ಮನೆಗಳಿಂದ ಆಚೆ ಬರದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕಳೆದ ವರ್ಷ ಡಿಸೆಂಬರ್ 14ರಂದು ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ತಂದೆ-ಮಗನ ಭಯೋತ್ಪಾದಕ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು (ಏಜೆನ್ಸೀಸ್).