ದೆಹಲಿ ಹೈಕೋರ್ಟ್ನಲ್ಲಿ 2 ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಅಂಜನಾ ಓಂ ಕಶ್ಯಪ್ ಮತ್ತು ಟಿವಿ ಟುಡೇ
- ಖ್ಯಾತ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಅವರ ತೇಜೋವಧೆ
- ಖಾನ್ ಸರ್ ಸೇರಿದಂತೆ 8 ಆನ್‌ಲೈನ್ ಶಿಕ್ಷಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
- ದೆಹಲಿ ಹೈಕೋರ್ಟ್ನಲ್ಲಿ 2 ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಅಂಜನಾ ಓಂ ಕಶ್ಯಪ್ ಮತ್ತು ಟಿವಿ ಟುಡೇ
ನವದೆಹಲಿ: ಹಿರಿಯ ಪತ್ರಕರ್ತೆಯೊಬ್ಬರ ಮೇಲೆ ನಾಲಿಗೆ ಹರಿಬಿಟ್ಟ ಆರೋಪದಲ್ಲಿ ಫೈಸಲ್ ಖಾನ್ ಅಲಿಯಾಸ್ ಖಾನ್ ಸರ್ ಸೇರಿದಂತೆ ಇತರೆ 8 ಜನರ ಮೇಲೆ ಟಿವಿ ಟುಡೇ ಗ್ರೂಪ್ 2 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ನಲ್ಲಿ ಹೂಡಿದೆ.
ಆನ್‌ಲೈನ್ ವಿಡಿಯೋಗಳ ಮೂಲಕ ಟಿವಿ ಟುಡೇ ಗ್ರೂಪ್ನ ಹಿರಿಯ ಪರ್ತಕರ್ತೆಯಾದ ಅಂಜನಾ ಓಂ ಕಶ್ಯಪ್ (Anjana Om Kashyap and Khan Sir) ಅವರ ಮಾನಹಾನಿ, ಚಾರಿತ್ರ್ಯಹರಣಕ್ಕೆ ಮುಂದಾದ ಹಿನ್ನಲೆ ಈ ಮೊಕದ್ದಮೆಯನ್ನು ಹೂಡಲಾಗಿದೆ. ಆನ್ಲೈನ್ನಲ್ಲಿ ತರಗತಿ ನಡೆಸುವ ಶಿಕ್ಷಕರ ಮೇಲೆ ಪತ್ರಕರ್ತೆ ಟಿಪ್ಪಣಿ ಮಾಡಿದ ಹಿನ್ನಲೆ, ಪತ್ರಕರ್ತೆ ಮೇಲೆ ಖಾನ್ ಸರ್, ಅಭಯ್ ಮ್ಯಾಥ್ಸ್ ಸೇರಿದಂತೆ ಇತರೆ ಆನ್‌ಲೈನ್ ಶಿಕ್ಷಕರು ಪತ್ರಕರ್ತೆಯ ತೆಜೋವಧೆಗೆ ಮುಂದಾದರು.
ಅರ್ಜಿಯಲ್ಲೇನಿದೆ?
ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಪತ್ರಕರ್ತೆ ವಿರುದ್ಧ ಮೇಲೆ ನಮೂದಿಸಿರುವ ಶಿಕ್ಷಕರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಒಬ್ಬ ಮಹಿಳಾ ಪತ್ರಕರ್ತೆಯ ತೆಜೋವಧೆ ನಡೆಸಿದ್ದಾರೆ. ಆ ವಿಡಿಯೋಗಳ ಕೆಳಗೆ ಕೀಳು ಮಟ್ಟದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಹೀಗಾಗಿ ಆ ಎಲ್ಲಾ ವಿಡಿಯೋಗಳನ್ನು ಈ ಕೂಡಿಲೇ ಡೀಲಿಟ್ ಮಾಡಬೇಕು ಹಾಗೂ 2 ಕೋಟಿಯನ್ನು ಪರಿಹಾರ ಮೊತ್ತವಾಗಿ ನೀಡಬೇಕೆಂದು ಕೋರಲಾಗಿದೆ.
ಇತ್ತೀಚೆಗೆ ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ದೇಶಾದ್ಯಂತ ಚರ್ಚೆಯಾಗಿತ್ತು. ಈ ಸಮಯದಲ್ಲಿ ಪತ್ರಕರ್ತೆ ಅಂಜನಾ ಓಂ ಕಶ್ಯಪ್, ಆನ್‌ಲೈನ್ ಶಿಕ್ಷಕರಿಗೆ ಈ ನೀಟ್, ಸಿಬಿಎಸ್ಇ ಪರೀಕ್ಷೆ ಹಾಗೂ ಅದರ ಮುಂದೂಡಿಕೆ ಬಗ್ಗೆ ಮಾಹಿತಿ ಕೊರತೆಯಿದೆ. ಆದರೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇವರ ಪಾಠಗಳು ಹಲವಾರು ರೀಟೇಕ್, ಸ್ಕಿಪ್ಟ್, ಅಲ್ಗಾರಿದಮ್ಗೆ ತಕ್ಕಂತ ಎಡಿಟಿಂಗ್ ಇರುತ್ತದೆ. ಇವರು ಕೇವಲ ಅಧಿಕ ವೀಕ್ಷಣೆಯನ್ನು ಪಡೆಯಲು ಸೂಕ್ಷ್ಮ ವಿಷಯಗಳ ಬಗ್ಗೆ ತಮಗೆ ತೋಚಿದಂತೆ ಮಾತನಾಡುತ್ತಾರೆಂದು ಹೇಳಿದ್ದರು.
ಆನ್‌ಲೈನ್ ಶಿಕ್ಷಕರ ಆಕ್ರೋಶ
ಅಂಜಾನಾ ಓಂ ಕಶ್ಯಪ್ ಅವರ ಈ ಹೇಳಿಕೆಯಿಂದ ಕುಪಿತವಾದ ಆನ್‌ಲೈನ್ ಶಿಕ್ಷಕರ ಸಮೂಹ ಪತ್ರಕರ್ತೆ ಮೇಲೆ ಮುಗಿ ಬಿದ್ದಿದ್ದಾರೆ. ನಾವು ಶಿಕ್ಷಕರು ನ್ಯಾಯಯುತ, ಪ್ರಾಮಾಣಿಕತೆಯಿಂದ ದುಡಿಯುತ್ತೇವೆ, ಹೀಗಾಗಿ ವ್ಯವಸ್ಥೆಯನ್ನು ನಾವು ಪ್ರಶ್ನಿಸುತ್ತಿದ್ದೆವೆ. ಆನ್‌ಲೈನ್ ಶಿಕ್ಷಕರ ಬಗ್ಗೆ ಮಾತನಾಡುವ ಮೊದಲು ಪತ್ರಕರ್ತರಲ್ಲಿರುವ ಸಮಸ್ಯೆಗಳನ್ನು ಮೊದಲು ಸರಿಮಾಡಿಕೊಳ್ಳಿ ಎಂದು ತಿರುಗೇಟನ್ನು ನೀಡಿದ್ದರು, (ಏಜನ್ಸೀಸ್).