Andhra Woman Killed Husband With Lover  
ದೇಶ

ದೇಗುಲಕ್ಕೆ ಕರೆದೊಯ್ಯೋ ನೆಪದಲ್ಲಿ ಗಂಡನ ಬರ್ಬರ ಹತ್ಯೆ; ಪತ್ನಿ ಹಾಗೂ ಪ್ರಿಯಕರ ಅರೆಸ್ಟ್​..Andhra Murder

ಪ್ರಮುಖ ಮುಖ್ಯಾಂಶಗಳು

  • ಆಂಧ್ರದ ಚಿತ್ತೂರಿನಲ್ಲಿ ಪತ್ನಿಯ ಪ್ರಿಯಕರನಿಂದ ರಮೇಶ್​ ಎಂಬಾತನ ಕೊಲೆ
  • ಬಾಲ್ಯದ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಸಿನಿ
  • ಯುಗಂಧರ್​​ಗಾಗಿ ಗಂಡ ರಮೇಶ್​ ಕೊಲೆಗೆ ಪ್ಲ್ಯಾನ್​ ಮಾಡಿದ್ದ ಪತ್ನಿ ಅರೆಸ್ಟ್
Andhra Woman Killed Husband With Lover: ದೇವಸ್ಥಾನಕ್ಕೆ ಕರೆದೊಯ್ಯುವ ನೆಪದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಡಿಜಿಟಲ್​ ಪುರಾವೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸುಳಗಿರಿ ನಿವಾಸಿ 23 ವರ್ಷದ ರಮೇಶ್ ಕೊಲೆಯಾದ ವ್ಯಕ್ತಿ. ಇನ್ನು ಶಾಂತಿಪುರಂನ 19 ವರ್ಷದ ಹಾಸಿನಿ ಆರೋಪಿ ಪತ್ನಿ ಎಂದು ಗುರುತಿಸಲಾಗಿದೆ. ಯುಗಂಧರ್ ಆಕೆಯ ಪ್ರಿಯಕರ ಎಂದು ಪೊಲೀಸರು ಗುರುತಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಚಿಕ್ಕ ಮಗಳಿದ್ದಳು. ರಮೇಶ್​ ಹೂಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಅಕ್ರಮ ಸಂಬಂಧ ಹುಟ್ಟಿಕೊಂಡಿದ್ದೇಗೆ?

ಇತ್ತೀಚೆಗೆ ರಮೇಶ್​ ಅವರು ತಮ್ಮ ಸಂಬಂಧಿಕರ ಮದುವೆಗೆ ತೆರಳಿದ್ದರು. ಈ ವೇಳೆ ಹಾಸಿನಿಗೆ ತನ್ನ ಬಾಲ್ಯದ ಗೆಳೆಯ 20 ವರ್ಷದ ಯುಗಂಧರ್ ಮತ್ತೆ ಪರಿಚಯಸ್ಥನಾದ. ಆತನ ಜೊತೆ ಸಂಬಂಧ ಮುಂದುವರೆಸಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹೇಗಾದರೂ ದೂರಮಾಡಿಕೊಳ್ಳಬೇಕಲ್ಲ ಎನ್ನುವಾಗ ಆತನನ್ನು ಕೊಲ್ಲಲ್ಲು ಪ್ಲ್ಯಾನ್​ ಮಾಡಿದ್ದರು ಎನ್ನಲಾಗಿದೆ.
ಜುಲೈ.14ರಂದು ಮಂಗಳವಾರ ಗುಡುಪಲ್ಲೆ ಮಂಡಲದ ಮಲ್ಲಪ್ಪ ಕೊಂಡದ ಮೇಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಪಟ್ಟು ಹಿಡಿದಿದ್ದಳು. ಆಕೆಯ ಮನವಿಗೆ ಒಪ್ಪಿಗೆ ಕೊಟ್ಟ ಆತ ಪತ್ನಿ ಹಾಗೂ ಮಗುವಿನೊಂದಿಗೆ ಗಾಡಿಯಲ್ಲಿ ಹೊರಟಿದ್ದ. ಇತ್ತ ಹಾಸಿನಿ ಪ್ರಿಯಕರನಿಗೆ ಲೈವ್​ ಲೊಕೇಶನ್​ ಕೊಟ್ಟಿದ್ದಳು. ಈ ಬಗ್ಗೆ ಅರಿಯದ ರಮೇಶ್​​ ಪತ್ನಿ, ಮಗುವಿನೊಂದಿಗೆ ಸಂತೋಷದಿಂದ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಲ್ಯಾನ್​ ಹಾಕಿಕೊಂಡಂತೆ ಕೊಲೆ

ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಾಗುವ ಹಿಲ್ ರಸ್ತೆಯ ಮೂರನೇ ಹೇರ್ ಪಿನ್ ತಿರುವಿನಲ್ಲಿ ರಮೇಶ್​​ರನ್ನು ಕೊಲೆ ಮಾಡಬೇಕು ಎನ್ನುವ ಸ್ಕೆಚ್​ ಹಾಕಲಾಗಿತ್ತು. ಅದರಂತೆ ಸ್ಥಳಕ್ಕೆ ತೆರಳುತ್ತಿದ್ದಂತೆ ಬೇಕಂತಲೇ ಹಾಸಿನಿ ತನ್ನ ಬ್ಯಾಗ್​ ಅನ್ನು ನೆಲಕ್ಕೆ ಬೀಳಿಸಿದ್ದಾಳೆ. ಹೀಗಾಗಿ ರಮೇಶ್​ ಗಾಡಿ ನಿಲ್ಲಿಸಿದ್ದಾಗ ಪ್ರಿಯಕರ ಯುಗಂಧರ್​ ಹಾಗೂ ಸಹಚರರು ಬಂದರು. ರಮೇಶ್ ಅವರನ್ನು ಹತ್ತಿರದ ಕಾಡಿಗೆ ಸುಮಾರು 100 ಮೀಟರ್ ದೂರ ಓಡಿಸಿ, ಹರಿತವಾದ ಆಯುಧಗಳಿಂದ ಕೊಚ್ಚಿ ಕೊಂದಿದ್ದಾರೆ. ರಮೇಶ್​ ಕೊಲೆಯಾಗುವಾಗ ಪತ್ನಿ ಹಾಗೂ ಮಗು ಅವರ ಕಣ್ಮುಂದೆಯೇ ಇದ್ದರು ಎನ್ನಲಾಗಿದೆ.

ತಾಯಿ ದೂರು, ಆರೋಪಿಗಳು ಅರೆಸ್ಟ್

ಹಾಸಿನಿ ಹಾಗೂ ಮಗು ಇಬ್ಬರೆ ವಾಪಸ್​​ ಮನೆಗೆ ಬಂದಿದ್ದನ್ನು ಗಮನಿಸಿದ ರಮೇಶ್ ತಾಯಿ ಎಲ್ಲವನ್ನು ವಿಚಾರಿಸಿ ಪೊಲೀಸರಿಗೆ ದೂರು ಕೊಟ್ಟರು. ದೂರಿನ ಮೇರೆಗೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ದೇವಸ್ಥಾನದ ಸುತ್ತಮುತ್ತಲು ಇರುವ ಸಿಸಿ ಕ್ಯಾಮೇರಾಗಳನ್ನು ಪರಿಶೀಲನೆ ನಡೆಸಿದರು. ಮೊಬೈಲ್​ ಕಾಲ್​ಗಳ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ.
ಹಾಸಿನಿ ಇನ್ನೂ ಅಪ್ರಾಪ್ತೆ. ಆಕೆ ರಮೇಶ್​​ನನ್ನು ಮದುವೆಯಾದಾಗ ಆಕೆ 9ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಅಕಸ್ಮಾತ್​ ಇದು ನಿಜವಾದರೆ ಬಾಲ್ಯವಿವಾಹ ನಿಷೇಧ ಕಾನೂನಿನ ಅಡಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).