ಘಟನೆಯ ಸ್ಥಳ 
ದೇಶ

ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಬೆಂಗಾವಲು ವಾಹನ ಅಪಘಾತ | Pawan Kalyan

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) ಅವರ ಬೆಂಗಾವಲು ಪಡೆಯ ವಾಹನವೂ ಬುಧವಾರ(ಫೆ. 18) ಬೆಳಗ್ಗೆ ವಿಶಾಖಪಟ್ಟಣದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.
ವಿಶಾಖಪಟ್ಟಣದ ಸಿರಿಪುರಂನಿಂದ ಪೆದ್ದಾ ವಾಲ್ಥರ್ ಕಡೆಗೆ ಹೋಗುತ್ತಿದ್ದಾಗ, ತ್ರಿ ಟೌನ್ ಪೊಲೀಸ್ ಠಾಣೆ ಬಳಿ ಬೆಂಗಾವಲು ಪಡೆಯಲ್ಲಿದ್ದ ವಾಹನವೊಂದು ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಮತ್ತೊಂದು ಬೆಂಗಾವಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ವಾಹನದ ಮುಂಭಾಗವು ಸ್ವಲ್ಪ ಹಾನಿಗೊಳಗಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನೂ ಅಪಘಾತದ ಸಮಯದಲ್ಲಿ ಪವನ್ ಕಲ್ಯಾಣ್ ಸ್ಥಳದಲ್ಲಿ ಇರಲಿಲ್ಲ. ಅವರನ್ನು ಕರೆದುಕೊಂಡು ಹೋಗಲು ತೆರಳುವಾಗ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (ಏಜೆನ್ಸೀಸ್).