comedian Anudeep Katikala
- ಕಾಮಿಡಿಯನ್ ಅನುದೀಪ್ ವಿರುದ್ಧ ದೂರು ದಾಖಲು
- ಪವನ್ ಕಲ್ಯಾಣ್, ರಾಮಚರಣ್, ನಿಹಾರಿಕಾ ಬಗ್ಗೆ ತಮಾಷೆ ಮಾಡಿದ್ದ ಅನುದೀಪ್
- ಪ್ರಯಾಗ್ ರಾಜ್ನಲ್ಲಿ ಅನುದೀಪ್ರನ್ನು ವಶಕ್ಕೆ ಪಡೆದುಕೊಂಡ ಆಂಧ್ರ ಪೊಲೀಸರು
ಹೈದರಾಬಾದ್: ಮಹಾರಾಷ್ಟ್ರದ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ದ್ರೋಹಿ ಎಂದು ಕರೆದು, ಕುನಾಲ್ ಕಾಮ್ರಾ ಅವರು ಇಂದಿಗೂ ವಿಚಾರಣೆ ಎದುರಿಸುತ್ತಿದ್ದಾರೆ. ರಣವೀರ್ ಅಲ್ಲಬಾಡಿಯಾ ಅವರು ಸಹ ತಮಾಷೆ ಮಾಡುವ ಭರದಲ್ಲಿ ಪೋಷಕರ ಲೈಂಗಿಕತ್ವದ ಬಗ್ಗೆ ಮಾತನಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸದ್ಯ ಅದೇ ಸಾಲಿನಲ್ಲಿ ಹೈದರಬಾದ್ ಮೂಲದ ಕಾಮಿಡಿಯನ್ ಅನುದೀಪ್ ಕಾಟಿಕಾಲ ಇದ್ದಾರೆ.
ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಗುರಿಯಾಗಿಸಿ ಮಾಡಿದ್ದ ತಮಾಷೆಯು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹಾಗೂ ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗಿದೆ. ಇದ್ರಿಂದಾಗಿ ಸದ್ಯ ಅನುದೀಪ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಜನಸೇನಾ ಪಕ್ಷದ ಕಾರ್ಯಕರ್ತನೊಬ್ಬ ದಾಖಲಿಸಿದ್ದ ದೂರಿನ ಆಧಾರದ ಮೇಲೆ, ಪ್ರಯಾಗ್ರಾಜ್ನಿಂದ ಪೋಷಕರನ್ನು ಕರೆತರವಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೆಗಾ ಸ್ಟಾರ್ ಕುಟುಂಬದ ಬಗ್ಗೆ ಹಾಸ್ಯ
ಅನುದೀಪ್ ಅವರು, ರಾಮ್ ಚರಣ್, ನಿಹಾರಿಕಾ ಕೊಂನಿಡೇಲ ವಿಚ್ಛೇದನ, ಹಾಗೂ ಪವನ್ ಕಲ್ಯಾಣ್ ವಿಚ್ಛೇದನದ ಬಗ್ಗೆ ಕಾಮಿಡಿ ಮಾಡಿದ್ದರು. ಒಟ್ಟಾರೆಯಾಗಿ ಮೆಗಾಸ್ಟಾರ್ ಕುಟುಂಬವನ್ನು ತಮಾಷೆಗೆ ತಳಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನ ಸೇನಾ ಪಕ್ಷದ ಕೋಪಕ್ಕೆ ಗುರಿಯಾಗಿದೆ. ಕೆಲವರು ಅವರ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ ಪ್ರಸಂಗವು ನಡೆದಿತ್ತು.
ದೂರು ದಾಖಲು
ಏಪ್ರಿಲ್ 11ರಂದು ಮಧ್ಯಾಹ್ನ 1.15 ಕ್ಕೆ ಕಾಕಿನಾಡ ಐ ಟೌನ್ ಪೊಲೀಸ್ ಠಾಣೆಯಲ್ಲಿ ಬಡೇ ವೆಂಕಟ ಕೃಷ್ಣ ಎಂಬುವವರು ಅನುದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್ 14ರ ಸಂಜೆ 7ರ ಸುಮಾರಿಗೆ ಅನುದೀಪ್ ಅವರನ್ನು ಬಂಧಿಸಲಾಗಿದೆ. ಅನುದೀಪ್ ವಿರುದ್ಧ ಸದ್ಯ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 356(2), 353(2), 79 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಅನುದೀಪ್ ಮಾಡಿದ್ದ ಜೋಕ್ ಏನು?
ಪವನ್ ಕಲ್ಯಾಣ್ರಿಂದ ಎಲ್ಲ ಪುರುಷರು ಕಲಿಯಬೇಕಾದ ವಿಚಾರ ಎಂದರೆ, ಹೆಂಡತಿಯಿಂದ ಹೇಗೆ ವಿಚ್ಛೇದನ ನೀಡುವುದು ಎಂದು ಅವರ ಮೂರು ಡಿವೋರ್ಸ್ ಪ್ರಕರಣ ಮುಂದಿಟ್ಟು ತಮಾಷೆ ಮಾಡಿದರು. ಇನ್ನು ನಿಹಾರಿಕ ಕೊನಿಡೇಲ ಅವರು ಡಿವೋರ್ಸ್ ಪಡೆಯುವ ಬಗ್ಗೆ ಅವರ ಚಿಕ್ಕಪ್ಪನಿಂದ ಸಲಹೆ ಪಡೆದುಕೊಳ್ಳಬಹುದು. ಪವನ್ ಕಲ್ಯಾಣ್ ಈ ವಿಚಾರದಲ್ಲಿ ಮಾಸ್ಟರ್ ಪೀಸ್ ಇದ್ದಂತೆ ಎಂದು. ರಾಮ್ ಚರಣ್ ಸ್ತ್ರೀ ವಾದಿ ಏಕೆಂದರೆ ತಮ್ಮ ಪತ್ನಿ ಉಪಸನಾ ಅವರಿಗಿಂತ ಶ್ರೀಮಂತೆ. ಅವರಿಗಿಂತ ಕಡಿಮೆ ಸಂಬಳವನ್ನು ಅವರು ಪಡೆದುಕೊಳ್ಳುತ್ತಾರೆ ಎಂದು ಹಾಸ್ಯ ಮಾಡಿದರು. ಜೊತೆಗೆ ಮಹೇಶ್ ಬಾಬು, ಬಾಲಕೃಷ್ಣ ಬಗ್ಗೆ ಹಾಸ್ಯ ಮಾಡಿದ್ದಾರೆ.
ಘಟನೆ ವೈರಲ್ ಆಗುತ್ತಲೇ ಸೂಕ್ಷ್ಮತೆ ಗಮನಿಸಿದ ಅವರು , ಪವನ್ ಕಲ್ಯಾಣ್ ಬಳಿ ಕ್ಷಮೆ ಯಾಚಿಸಿದ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)