Pawan Kalyan Hindi Raj Bhasha controversy
- ಹಿಂದಿ ಭಾಷೆ ಪರ ಬ್ಯಾಟ್ ಬೀಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್.
- ಹಿಂದಿ ರಾಜ ಭಾಷೆ, ಆ ಬಗ್ಗೆ ಗೌರವ ಇದೆ ಎಂದಿದ್ದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್.
- ಇಂತವರಿಗೆ ಈ ಜನ ವೋಟ್ ಹಾಕ್ತಾರೆ ಎಂದು ದಕ್ಷಿಣ ಭಾರತದ ನೆಟ್ಟಿಗರು ಕಿಡಿ.
Pawan Kalyan Hindi Raj Bhasha controversy: ಈ ಹಿಂದೆ ಹಿಂದಿ ಹೇರಿಕೆ ವಿರುದ್ಧ ಮಾತನಾಡುತ್ತಿದ್ದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಈಗ ತಮ್ಮ ವಾದವನ್ನು ಬದಲಾಯಿಸಿದ್ದಾರೆ. ಹಿಂದಿಯನ್ನು ರಾಜಭಾಷೆಯನ್ನಾಗಿ ಮಾಡಬೇಕು ಎಂದು ವಕಾಲತ್ತು ವಹಿಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ರಾಜಕಾರಿಣಿಗಳು ಧರ್ಮ ಹಾಗೂ ಜಾತಿ ರಾಜಕೀಯ ಬಿಟ್ಟು ಭಾಷೆಗಳ ಮಧ್ಯೆ ಕಟ್ಟಿಹಾಕಲು ಶುರುವಿಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು ಹಿಂದಿ ಭಾಷೆ ಪರ ಬ್ಯಾಟ್ ಬೀಸಿದ್ದಾರೆ. ತೆಲುಗಿನಲ್ಲಿ ಮಾತನಾಡೋದು ಬಿಟ್ಟು ಹಿಂದಿಯಲ್ಲಿ ಭಾಷಣ ಮಾಡಿದ ಅವರು ಆ ಬಗ್ಗೆ ಸಮರ್ಥಿಸಿಕೊಂಡಿದ್ದು ಹೀಗೆ, 'ನಾನೀಗ.. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವುದು ಯಾಕೆ ಎಂದರೆ, ಹಿಂದಿ ರಾಷ್ಟ್ರ ಭಾಷೆ ಮಾತ್ರವಲ್ಲ ನಾವು ಅದನ್ನು ಗೌರವಿಸುತ್ತೇವೆ. ಇದು ರಾಜ ಭಾಷೆ. ನಮ್ಮ ಭಾಷಾವಿಭಿನ್ನವಾಗಿರಬಹುದು ಆದರೆ ನಾವೆಲ್ಲರೂ ಒಂದೇ, ಭಾವ ಒಂದೇ ನಾವು ಭಾರತೀಯರು' ಎಂದಿದ್ದಾರೆ.
ನೆಟ್ಟಿಗರಿಂದ ಕಿಡಿ
ಈ ಹೇಳಿಕೆ ವಿರುದ್ಧ ಕಿಡಿಕಾರಿದ ಟ್ರೋಲ್ ಪೇಜ್ಗಳು ಅವರ ಹಳೆಯ ಹೇಳಿಕೆ ಮತ್ತು ಇತ್ತೀಚಿನ ಹೇಳಿಕೆಗಳನ್ನು ಮರ್ಜ್ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಇಂಥ ಮನುಷ್ಯನಿಗೆ ಆಂಧ್ರದವರು ಅಷ್ಟೆಲ್ಲ ಮತ ಹಾಕಿದ್ದಾರ. ಆ ಮಾತ್ರ ಅವರಿಗೆ ಗೊತ್ತಾಗೋದಿಲ್ವಾ ಎಂದು ಅಶೋಕ್ ಕುಮಾರ್ ಎಂಬುವವರು ಕಿಡಿಕಾರಿದ್ದಾರೆ.
ಈ ಪವನ್ ಕಲ್ಯಾಣ್ನಂತಹ ಊಸರವಳ್ಳಿತಯಂತಹ ಜನರನ್ನು ಇನ್ನೆಷ್ಟು ನೋಡಬೇಕೋ, ಇನ್ನೆಷ್ಟು ಡ್ರಾಮಾದಂತಹ ಮಾತುಗಳನ್ನು ಕೇಳಬೇಕು ಎಂದು ಲೇವಡಿ ಮಾಡಿದ್ದಾರೆ.
ಹಿಂದೆ ಕೊಟ್ಟಿದ್ದ ಹೇಳಿಕೆ ಏನು?
ಉತ್ತರ ಭಾರತದ ನಾಯಕರು ದಕ್ಷಿಣ ಭಾರತದವರನ್ನು ದ್ವೀತಿಯ ದರ್ಜೆ ಮನಸ್ಥಿತಿಯಲ್ಲಿ ನೋಡಬಾರದು. ನಮಗೆ ನಮ್ಮದೇ ಆದ ಪ್ರಾದೇಶಿಕ ಗುಣಗಳು, ಅಸ್ಮಿತೆ ಇದೆ. ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲಾಗುತ್ತದೆ. ಅದೇ ರೀತಿ ಹಿಂದಿ ಸಿನಿಮಾಗಳನ್ನು ತಮಿಳಿಗೆ ಡಬ್ ಮಾಡಲಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಸದ್ಯ ಹಿಂದಿಯನ್ನು ಹಾಡಿ ಕೊಂಡಾಡುತ್ತಿರುವ ಬಗ್ಗೆ ಪವನ್ ಕಲ್ಯಾಣ್ ಅಭಿಮಾನಿಗಳು ಸೇರಿದಂತೆ ಹಲವರು ಕಿಡಿಕಾರಿದ್ದಾರೆ, (ಏಜೆನ್ಸೀಸ್).