ಪ್ರಧಾನಿ ಮೋದಿ ಮತ್ತು ನಾನಾ ಪಾಟೇಕರ್ 
ದೇಶ

ಮರೆಯಲಾಗದ ವಿಶಿಷ್ಟ ವ್ಯಕ್ತಿತ್ವ; ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | PM Modi

ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಮರೆಯಲಾಗದ ವಿಶಿಷ್ಟ ವ್ಯಕ್ತಿತ್ವ, ಬಹುಮುಖ ಪ್ರತಿಭೆ ಎಂದು ಬಣ್ಣಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಾಂತ್ವಾನ ಹೇಳಿದ್ದಾರೆ.

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದು, ಮರೆಯಲಾಗದ ವಿಶಿಷ್ಟ ವ್ಯಕ್ತಿತ್ವ, ಬಹುಮುಖ ಪ್ರತಿಭೆ ಎಂದು ಬಣ್ಣಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಾಂತ್ವಾನ ಹೇಳಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ ಮೋದಿ, ಪಾಟೇಕರ್ ಅವರ ಬಹುಮುಖ ಪ್ರತಿಭೆ, ಸೃಜನಶೀಲತೆ ಮತ್ತು ಮರೆಯಲಾಗದ ಪಾತ್ರಗಳನ್ನು ಸ್ಮರಿಸಿದರು. ನಟನ ಸಾಮರ್ಥ್ಯವನ್ನೂ ಶ್ಲಾಘಿಸಿದ್ದಾರೆ.

ನಾನಾ ಪಾಟೇಕರ್ ಜಿ ಅವರ ಬಳಿಯಿದ್ದ ವಿಶಿಷ್ಟ ಶೈಲಿ ಮತ್ತು ಅಪ್ಪಟ ವ್ಯಕ್ತಿತ್ವ ಕೆಲವೇ ಕೆಲವು ನಟರಲ್ಲಿ ಮಾತ್ರ ಇತ್ತು. ಅವರು ಪ್ರತಿಯೊಂದು ಪಾತ್ರಕ್ಕೂ ಗಮನಾರ್ಹವಾದ ಬಹುಮುಖತೆ ಮತ್ತು ಸೃಜನಶೀಲತೆಯನ್ನು ತಂದರು. ಮತ್ತು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುವ ಪಾತ್ರಗಳನ್ನು ನಮಗೆ ನೀಡಿದರು.

ಅವರು ತಮ್ಮ ಸ್ಪಷ್ಟ ಮತ್ತು ನೇರವಂತಿಕೆಯಿಂದ ಮೆಚ್ಚುಗೆ ಪಡೆದಿದ್ದರು. ತಾವು ನಂಬಿದ್ದನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯಲಿಲ್ಲ. ಹಿಂದಿ ಮತ್ತು ಮರಾಠಿ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಅವರ ಅಗಲಿಕೆ ದೊಡ್ಡ ಶೂನ್ಯವನ್ನುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

ಹೃದಯಾಘಾತದಿಂದ ಪಾಟೇಕರ್ ನಿಧನ

ನಾನಾ ಪಾಟೇಕರ್ ಅವರು ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ 5.20ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೀಡಾಗಿದ್ದಾರೆ. ತಕ್ಷಣ ಕುಟುಂಬಸ್ಥರು ಅವರನ್ನು ಪಣಜಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸುಮಾರು 45 ನಿಮಿಷಗಳ ಕಾಲ ಅವರನ್ನು ಬದುಕುಳಿಸಲು ಸಿಪಿಆರ್ ಸೇರಿ ಅನೇಕ ಚಿಕಿತ್ಸೆ ನೀಡಿದ್ದಾರೆ. ಆದ್ರೆ ಯಾವುದೇ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ ಎಂದು ಘೋಷಿಸಿದ್ದಾರೆ (ಏಜೆನ್ಸೀಸ್).