ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 3 ನವಜಾತ ಶಿಶುಗಳ ದಾರುಣ ಸಾವು
- ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಅಗ್ನಿ ದುರಂತ
- ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 3 ನವಜಾತ ಶಿಶುಗಳ ದಾರುಣ ಸಾವು
- ವಿಶೇಷ ತಂಡ ರಚನೆ; ಮುಂದುವರಿದ ತನಿಖೆ
ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಜಿಲ್ಲಾ ಮಹಿಳೆಯರ ಆಸ್ಪತ್ರೆ
(Amravati Hospital Tragedy) ಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಗಢ ಸಂಭವಿಸಿದ ಹಿನ್ನಲೆ ಮೂವರು ನವಜಾತ ಶಿಶುಗಳು ದುರ್ಮರಣ ಹೊಂದಿದ ಘಟನೆ ವರದಿಯಾಗಿದೆ.
ಮಾಹಿತಿ ಪ್ರಕಾರ, ಮೂರನೇ ಮಹಡಿಯಲ್ಲಿದ್ದ ವೆಂಟಿಲೇಟರ್ ಸ್ಪೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸುತ್ತಿದ್ದು, ತನಿಖೆ ನಂತರ ಸಂಪೂರ್ಣ ಚಿತ್ರಣ ತಿಳಿದು ಬರಲಿದೆ.
ಈ ಅನಾಹುತವು ಬೆಳಗ್ಗಿನ ಜಾವ 3.30 ರ ಸಮಯಕ್ಕೆ ನಡೆದಿದ್ದು, ನವಜಾತ ಶಿಶುಗಳಿದ್ದ ಕೊಠಡಿಗೆ ಬೆಂಕಿ ತಲುಪಿದೆ. ಈ ವಾರ್ಡ್‌ನಲ್ಲಿ ಒಟ್ಟು 39 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಮೂರು ಶಿಶುಗಳು ಸಾವಿಗೀಡಾಗಿವೆ ಹಾಗೂ ಆರು ಶಿಶುಗಳು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ತನಿಖೆ ನಡೆಸಲಾಗುತ್ತಿದೆ!
ಈ ದುರ್ಘಟನೆ ನಡೆದ ಬೆನ್ನಲೆ ಆಸ್ಪತ್ರೆ ಆಡಳಿತ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದು, ಬೆಂಕಿ ಅವಗಢಕ್ಕೆ ಕಾರಣವೇನು? ವೆಂಟಿಲೇಟರ್ ಎಕೆ ಸ್ಪೋಟಗೊಂಡಿತು? ಬೆಂಕಿ ಕಾಣಿಸಿಕೊಂಡಾಗ, ಅಗ್ನಿ ನಿರೋಧಕಗಳು ಸರಿಯಾಗಿ ಕೆಲಸ ಮಾಡಿಲ್ಲವೇ? ಮೂರು ಮಕ್ಕಳನ್ನು ಉಳಿಸುವಲ್ಲಿ ವಿಫಲವಾಗಿದ್ದು ಏಕೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ತಜ್ಞರ ತಂಡ ರಚನೆಯಾಗಿದ್ದು, ಆದಷ್ಟು ಬೇಗ ವರದಿ ಸಲ್ಲಿಕೆಯಾಗಿ ಉತ್ತರ ದೊರೆಯಲಿದೆ ಎಂದು ಹೇಳಬಹುದಾಗಿದೆ, (ಏಜನ್ಸೀಸ್).