Amit Shah Ready To Discuss In Parliament Delhi Police Action  
ದೇಶ

CJP ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರ ಕ್ರಮದ ಕುರಿತು ಚರ್ಚೆಗೆ ಅಮಿತ್​ ಶಾ ಸಿದ್ಧ: ಕಿರಣ್​ ರಿಜಿಜು

ಪ್ರಮುಖ ಮುಖ್ಯಾಂಶಗಳು

  • ಸಂಸತ್​ ಚಲೋ ವೇಳೆ ಸ್ಟೋಡೆಂಟ್ಸ್ ಮೇಲೆ ದೆಹಲಿ ಪೊಲೀಸರ ಕ್ರಮ; ಸಂಸತ್‌ನಲ್ಲಿ ಚರ್ಚೆಗೆ ಅಮಿತ್ ಶಾ ಸಿದ್ಧ ಎಂದ ಸಚಿವ ಕಿರಣ್ ರಿಜಿಜು
  • ದೆಹಲಿ ಪೊಲೀಸ್ ಆಕ್ಷನ್ ಕುರಿತು ಸಂಸತ್‌ನಲ್ಲಿ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿದ್ಧ
  • ಚರ್ಚೆ ಮಧ್ಯೆ ವಿಪಕ್ಷಗಳು ದಯವಿಟ್ಟು ಗೊಂದಲ ಸೃಷ್ಟಿಸಬಾರದು ಎಂದ ಕಿರಣ್​ ರಿಜಿಜು

ನವದೆಹಲಿ:

ಜುಲೈ 20ರಂದು ಸಂಸತ್​ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ಕ್ರಮದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧ, ಅಮಿತ್​ ಶಾ ಅವರು ಮಾತನಾಡುವಾಗ ಗೊಂದಲ ಸೃಷ್ಟಿಸಕೂಡದು ಎಂದು

ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ಕ್ರಮದ ಬಗ್ಗೆ

ವಿಪಕ್ಷ ನಾಯಕರು ಒತ್ತಡ ಹೇರಿದ್ದರು. ಆದರೆ, ಈ ಎಲ್ಲ ವಿದ್ಯಾಮಾನದ ಮಧ್ಯೆಯೂ ಅಮಿತ್​ ಶಾ ಅವರು ಸಂಸತ್​ಗೆ ಬರದೆ, ಈ ಬಗ್ಗೆ ಉತ್ತರಿಸದೇ ಮೌನಿಯಾಗಿದ್ದಾರೆ.

ಅಮಿತ್ ಶಾ ಮೌನವು ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಅವರು ಸಮರ್ಥಿಸುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು.

ಸಂಸತ್ ಆವರಣದಲ್ಲಿ ಮಾತನಾಡಿದ

ಕಿರಣ್​ ರಿಜಿಜು

ಅವರು,

ಚರ್ಚೆ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸ್ಪಷ್ಟನೆ ಕೊಟ್ಟರು. ಚರ್ಚೆ ವೇಳೆ ಸಮಸ್ಯೆ ಮಾಡಬಾರದು ಎಂದು ಹೇಳಿದರು.

ಕಿರಣ್​ ರಿಜಿಜು ಹೇಳಿದ್ದಿಷ್ಟು

ಸಂಸತ್​ ಚಲೋ ವೇಳೆ ವಿದ್ಯಾರ್ಥಿಗಳ ನಡೆಸಿದ ಪ್ರತಿಭಟನೆ ಮತ್ತು ಅದಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಮಾತನಾಡಲು ಸರ್ಕಾರ ಸಿದ್ಧವಾಗಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಹೇಳುವ ವಿಚಾರ ಎಂದರೆ ಚರ್ಚೆ ನಡೆಯುವಾಗ ಗೃಹ ಸಚಿವರ ಹೇಳಿಕೆಯನ್ನು ತಡೆಯಲು ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸಬಾರದು. ಸರ್ಕಾರ ಮತ್ತು ಗೃಹ ಸಚಿವರು ಏನು ಮಾತನಾಡುತ್ತಾರೆ ಎನ್ನುವುದನ್ನು ಸಾವಧಾನವಾಗಿ ಕೇಳಬೇಕು ಎಂದು ಕಿರಣ್​ ರಿಜಿಜು ಹೇಳಿದರು.

2026 ಜುಲೈ.20ರಂದು ಸಂಸತ್ ಚಲೋ

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲು ಉಂಟಾದ ಲೋಪದೋಷಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಿಡಬೇಕು ಎಂದು ಕಾಕ್ರೋಚ್​ ಜನತಾ ಪಾರ್ಟಿ ಸಂಸತ್​ ಚಲೋ ಹಮ್ಮಿಕೊಂಡಿತ್ತು. ಈವೇಲೆ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಪೆಲೆಟ್​ ಗನ್​ ಬಳಕೆ, ಲಾಠಿ ಚಾರ್ಜ್​, ಯುವತಿ ಮೇಲೆ ಹಲ್ಲೆ ಸೇರಿದಂತೆ ಸಾಕಷ್ಟು ಹಿಂಸಾತ್ಮಕವಾಗಿ ಈ ಪ್ರತಿಭಟನೆ ತಿರುಗಿತ್ತು. ನಂತರ ಆಗಸ್ಟ್​

ಜುಲೈ 25, 2026 ರಂದು ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟರು.

ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು, ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ರಮವನ್ನು ಖಂಡಿಸಿ, ಸುದೀರ್ಘವಾಗಿ ಬರೆದುಕೊಂಡು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಈ ಬಗ್ಗೆ ಸಂಸತ್​ನಲ್ಲಿ ಚರ್ಚೆ ನಡೆಸಬೇಕು ಎಂದು ವಿಪಕ್ಷ ನಾಯಕರು ಪಟ್ಟುಹಿಡಿದಿದ್ದರು,