- ಯುಎಸ್-ಇರಾನ್ ಶಾಂತಿ ಒಪ್ಪಂದ ಬೆನ್ನಲ್ಲೇ ದಿಢೀರ್ ಹೆಚ್ಚಳ
- 10 ಗ್ರಾಂ 24 ಕ್ಯಾರೆಟ್ ಚಿನ್ನ 2,450 ರೂ. ಏರಿಕೆ
- ಕೆಜಿ ಬೆಳ್ಳಿ 10,000 ರೂ. ಏರಿಕೆ
Gold Rates: ಫೆ.28ರಂದು ಶುರುವಾದ ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧಕ್ಕೆ ಇದೀಗ ಬ್ರೇಕ್ ಬೀಳುವ ಎಲ್ಲ ಮುನ್ಸೂಚನೆಗಳು ಸಿಕ್ಕಿದ್ದು, ಇದೇ ಜೂನ್ 19ರಂದು ಈ ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಸೋಮವಾರ (ಜೂ.15) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 2,450 ರೂ. ಹೆಚ್ಚಾದರೆ, 22 ಕ್ಯಾರೆಟ್ 2,250 ರೂ. ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಗಣನೀಯವಾಗಿ ಹೆಚ್ಚಳವಾಗಿದ್ದು, ಒಂದು ಔನ್ಸ್ ಚಿನ್ನದ ದರ 107 ಡಾಲರ್ ಏರಿದೆ. ಪ್ರಸ್ತುತ ಔನ್ಸ್ 4,329 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಬೆಳ್ಳಿಯ ಬೆಲೆಯೂ ದುಬಾರಿ ಆಗಿದೆ. ಪ್ರತಿ ಕೆಜಿಗೆ 10,000 ರೂ. ಹೆಚ್ಚಳವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರವೆಷ್ಟು?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,51,680 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ 1,39,050 ರೂ. ಇದೆ. ಮುಂಬೈ, ಕೋಲ್ಕತ ಮತ್ತು ಚೆನ್ನೈ ನಗರಗಳಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,51,530 ರೂ. ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,38,900 ರೂ. ತಲುಪಿದೆ. ಅದೇ ತೆಲುಗು ರಾಜ್ಯಗಳಾದ ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ 10 ಗ್ರಾಂ 24 ಕ್ಯಾರೆಟ್ ಬೆಲೆ 1,51,530 ರೂ. ಮತ್ತು 22 ಕ್ಯಾರೆಟ್ ಚಿನ್ನದ ದರ 1,38,900 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಗಳನ್ನು ನೋಡುವುದಾದರೆ, ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 2,70,000 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ 2,80,000 ರೂ. ಆಗಿದೆ. ಇನ್ನು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ 2,80,000 ರೂ.ಗೆ ತಲುಪಿದೆ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿನ ಬದಲಾವಣೆಗಳು. ಚಿನ್ನ-ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಹೀಗಾಗಿ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿ.