ಗುಂಡು ತಗುಲಿದ ಜುನೈದ್ ಅಹ್ಮದ್​ನ್ನು ಕರೆದೊಯ್ಯುತ್ತಿರುವ ಪೊಲೀಸರು 
ದೇಶ

ಅಮೇಥಿ ಪೊಲೀಸರ ಸಿನಿಮಿಯ ಶೈಲಿ ಎನ್​ಕೌಂಟರ್​: ಗುಂಡು ತಿಂದು ಆಸ್ಪತ್ರೆ ಪಾಲಾದ ಗೋಹಂತಕ ಜುನೈದ್!Junaid Ahmed

ಪ್ರಮುಖ ಮುಖ್ಯಾಂಶಗಳು

  • ಅಮೇಥಿಯಲ್ಲಿ ಪೊಲೀಸರ ಸಿನಿಮಿಯ ಶೈಲಿ ಎನ್​ಕೌಂಟರ್​
  • ದಾಳಿಯಲ್ಲಿ ಗೋಹಂತಕ ಜುನೈದ್ ಅಹ್ಮದ್ ಕಾಲಿಗೆ ತಗುಲಿದ ಗುಂಡು
  • ಜುನೈದ್ ಅಹ್ಮದ್ ಆಸ್ಪತ್ರೆಗೆ ದಾಖಲು
  • ಇತರ ಐದು ಸಹಚರರನ್ನು ಬಂಧಿಸಿದ ಪೊಲೀಸರು
ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ಪೊಲೀಸರು ಮತ್ತು ಗೋಹಂತಕರ ನಡುವೆ ಸಿನಿಮಾ ಶೈಲಿಯ ಎನ್ಕೌಂಟರ್ ನಡೆದಿದೆ. ಕರಂಗಾವ್‌ನಲ್ಲಿ ನಡೆದಿದ್ದ ಗೋಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ (Junaid Ahmed) ಪೊಲೀಸರ ಗುಂಡಿಗೆ ತುತ್ತಾಗಿದ್ದು, ಸದ್ಯ ಆಸ್ಪತ್ರೆ ಪಾಲಾಗಿದ್ದಾನೆ.

ನಡೆದಿದ್ದೇನು?

ಇನ್ಹೌನಾ ಪೊಲೀಸ್ ಠಾಣೆ ವ್ಯಾಪ್ತಿಯ ಗಂಡ್ನಾಲಾ ಸೆಮ್ರೌತಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕರಂಗಾವ್‌ನಲ್ಲಿ ನಡೆದಿದ್ದ ಗೋಹತ್ಯೆ ಪ್ರಕರಣದಲ್ಲಿ ಜುನೈದ್ ಅಹ್ಮದ್ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಅಪರಾಧಿ. ಈತ ಅದೇ ಮಾರ್ಗದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾನೆ ಎಂಬ ನಿಖರ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಇನ್ಹೌನಾ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
ತನ್ನನ್ನು ಪೊಲೀಸರು ಬೆನ್ನಟ್ಟುತ್ತಿರುವುದನ್ನು ಕಂಡ ಜುನೈದ್, ಭಯದಿಂದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಈ ಚಕಮಕಿಯಲ್ಲಿ ಜುನೈದ್ ಕಾಲಿಗೆ ಗುಂಡು ತಗುಲಿದ್ದು, ರಸ್ತೆಯಲ್ಲೇ ಬಿದ್ದಿದ್ದಾನೆ. ತಕ್ಷಣ ಆತನನ್ನು ವಶಕ್ಕೆ ಪಡೆದ ಪೊಲೀಸರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐವರು ಸಹಚರರು ಅರೆಸ್ಟ್

ಗುಂಡೇಟು ತಿಂದು ಬಿದ್ದಿದ್ದ ಜುನೈದ್‌ನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಆತನ ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನುಳಿದ ಐವರು ಸಹಚರರನ್ನು ಬೇರೆ ಬೇರೆ ಕಡೆಗಳಲ್ಲಿ ಅಡಗಿದ್ದಾಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರಕಾಸ್ತ್ರಗಳ ಜಪ್ತಿ

ಎನ್ಕೌಂಟರ್ ನಡೆದ ಸ್ಥಳದಿಂದ ಪೊಲೀಸರು ಒಂದು ಪಿಸ್ತೂಲ್, ಎರಡು ಜೀವಂತ ಬುಲೆಟ್‌ಗಳು, ಒಂದು ಮೋಟಾರ್ ಸೈಕಲ್ ಹಾಗೂ ಗೋಹತ್ಯೆ ಮಾಡಲು ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ಸಿಂಗ್ ಮಾತನಾಡಿ, ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು. ಸದ್ಯ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗೋಹತ್ಯೆಯಂತಹ ಹೀನ ಕೃತ್ಯದಲ್ಲಿ ತೊಡಗುವವರ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ,(ಏಜನ್ಸೀಸ್​).