ಸಾಂದರ್ಭಿಕ ಚಿತ್ರ 
ದೇಶ

ಲ್ಯಾಂಡಿಂಗ್ ವೇಳೆ ಸ್ಪೋಟಗೊಂಡ ಅಲಯನ್ಸ್ ಏರ್ ವಿಮಾನದ ಟಯರ್; ಸ್ವಲ್ಪದಲ್ಲೇ ತಪ್ಪಿದ ಅನಾಹುತ; ಪ್ರಯಾಣಿಕರು ಸುರಕ್ಷಿತ | Alliance Air flight

ರಾಯ್​ಪುರ: ಛತ್ತೀಸ್‌ಗಢದ ಬಿಲಾಸ್ಪುರ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಆ. 28) ದೆಹಲಿ-ಬಿಲಾಸ್ಪುರ್ ಅಲೈಯನ್ಸ್ ವಿಮಾನದ(Alliance Air flight) ಲ್ಯಾಂಡಿಂಗ್ ವೇಳೆ ಟಯರ್ ಸ್ಫೋಟಗೊಂಡು ಅವಘಡ ನಡೆದಿದ್ದು, ಸ್ವಲ್ಪದಲ್ಲೇ ಅನಾಹುತ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಅಲೈಯನ್ಸ್ ಏರ್ ವಿಮಾನ 9I613 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯಿಂದ ಬಿಲಾಸ್‌ಪುರಕ್ಕೆ ಆಗಮಿಸಿತು. ಆದರೆ, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ವಿಮಾನದ ಟೈರ್ ರನ್‌ವೇಯಲ್ಲಿ ಸ್ಫೋಟಗೊಂಡಿದೆ. ಈ ವೇಳೆ ವಿಮಾನದಲ್ಲಿ 41 ಪ್ರಯಾಣಿಕರಿದ್ದು, ಭಯಬೀತರಾಗಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಲಯನ್ಸ್ ಏರ್ ಸಂಸ್ಥೆ, ವಿಮಾನದಲ್ಲಿದ್ದ 37 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 41 ಜನರು ಸುರಕ್ಷಿತವಾಗಿದ್ದಾರೆ. ನಂತರದ ಪ್ರಯಾಣಕ್ಕಾಗಿ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಇನ್ನೂ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಎಡ ಟೈರ್ ಪಂಕ್ಚರ್ ಆಗಿತ್ತು. ಘಟನೆಯ ನಂತರ, ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರನ್‌ವೇಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿಸಿದೆ.
ಟಯರ್ ಸ್ಫೋಟದಂತ ಅವಘಡದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವರದಿ ಕೇಳಿದ್ದು, ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ (ಏಜೆನ್ಸೀಸ್).