ದೇಶ

ಭಾರತದಲ್ಲಿ ಗುರುದ್ವಾರ, ಚರ್ಚು ಮತ್ತು ಮಸೀದಿಗಳ ಟಾರ್ಗೆಟ್ ಆರೋಪ: USCIRF ವರದಿ ತಿರಸ್ಕರಿಸಿದ ಭಾರತ ಸರ್ಕಾರ | central government

ಭಾರತದಲ್ಲಿ ಗುರುದ್ವಾರ, ಚರ್ಚು ಹಾಗೂ ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ಟಾರ್ಗೆಟ್ ಮಾಡುವ ಘಟನೆಗಳು ಹೆಚ್ಚುತ್ತಿವೆ ಎಂದು ಅಮೆರಿಕದ ಯುಎಸ್‌ಸಿಐಆರ್‌ಎಫ್ ಸಂಸ್ಥೆ ನೀಡಿದ ವರದಿಯನ್ನು ಭಾರತ ಸರ್ಕಾರ ತಿರಸ್ಕರಿಸಿದ್ದು, ಅದನ್ನು ಪಕ್ಷಪಾತ ಮತ್ತು ತಪ್ಪು ಮಾಹಿತಿ ಎಂದು ಟೀಕಿಸಿದೆ.

ನವದೆಹಲಿ: ಭಾರತದಲ್ಲಿ ಗುರುದ್ವಾರ, ಚರ್ಚು ಹಾಗೂ ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ಟಾರ್ಗೆಟ್ ಮಾಡುವ ಘಟನೆಗಳು ಹೆಚ್ಚುತ್ತಿವೆ ಎಂದು ಅಮೆರಿಕದ ಯುಎಸ್‌ಸಿಐಆರ್‌ಎಫ್ ಸಂಸ್ಥೆ ನೀಡಿದ ವರದಿಯನ್ನು ಭಾರತ ಸರ್ಕಾರ ತಿರಸ್ಕರಿಸಿದ್ದು, ಅದನ್ನು ಪಕ್ಷಪಾತ ಮತ್ತು ತಪ್ಪು ಮಾಹಿತಿ ಎಂದು ಟೀಕಿಸಿದೆ.

ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್) ಅರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ(ನ. 10) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್, ಯುಎಸ್‌ಸಿಐಆರ್‌ಎಫ್ ಅನ್ನು ಪಕ್ಷಪಾತ ಮತ್ತು ತಪ್ಪು ಮಾಹಿತಿ ಹೊಂದಿರುವ ಸಂಸ್ಥೆ ಎಂದರು. ಇದು ಸ್ಪಷ್ಟ ರಾಜಕೀಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ.

USCIRF ಎಂಬುದು ಸ್ಪಷ್ಟವಾದ ರಾಜಕೀಯ ಕಾರ್ಯಸೂಚಿಯನ್ನು ಹೊಂದಿರುವ, ಪೂರ್ವಗ್ರಹಪೀಡಿತ ಮತ್ತು ಸರಿಯಾದ ಮಾಹಿತಿ ಇಲ್ಲದ ಸಂಸ್ಥೆಯಾಗಿದೆ. ಗಮನಿಸಬೇಕಾದ ಪ್ರಮುಖ ಸಂಗತಿಯೆಂದರೆ, ಅಮೆರಿಕದಲ್ಲಿ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳ ಬಗ್ಗೆ ಹಾಗೂ ಅಲ್ಲಿನ ಭಾರತೀಯರನ್ನು ಗುರಿಯಾಗಿಸಿಕೊಂಡು ನಡೆಯುವ ದ್ವೇಷಪೂರಿತ ಅಪರಾಧಗಳು ಮತ್ತು ಜನಾಂಗೀಯ ನಿಂದನೆಗಳ ವಿಷಯದಲ್ಲಿ ಈ ಸಂಸ್ಥೆ ಮತ್ತು ಅದರ ಆಯುಕ್ತರು ಸತತವಾಗಿ ಮೌನ ವಹಿಸಿದ್ದಾರೆ. ಈ ಹಿನ್ನೆಲೆ ಅಂತಹ ಸಂಸ್ಥೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).