Dr Navjot Kaur Sidhu 
ದೇಶ

500 ಕೋಟಿ ಆಫರ್ ಆರೋಪ: ಕಾಂಗ್ರೆಸ್​​ನಿಂದ​ ಡಾ.ನವಜೋತ್ ಕೌರ್ ಸಿಧುಗೆ ಗೇಟ್​ಪಾಸ್​!

ಪಂಜಾಬ್​: ಕ್ರಿಕೆಟಿಗ ಕಮ್ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಪತ್ನಿ ಡಾ.ನವಜೋತ್ ಕೌರ್ ಸಿಧು ಅವರನ್ನು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. 
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು "500 ಕೋಟಿ ರೂ. ತುಂಬಿದ ಬ್ರೀಫ್‌ಕೇಸ್" ಅಗತ್ಯವಿದೆ ಎಂದು ಮಾಜಿ ಶಾಸಕಿ ಡಾ.ನವಜೋತ್ ಕೌರ್ ಸಿಧು ಹೇಳಿಕೊಂಡ ಕೆಲವೇ ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪಿಪಿಸಿಸಿ(ಪಂಜಾಬ್​ ಪ್ರದೇಶ್​ ಕಾಂಗ್ರೆಸ್​ ಕಮಿಟಿ) ಮುಖ್ಯಸ್ಥ ಅಮರಿಂದರ್ ರಾಜಾ ವಾರಿಂಗ್ ಸಹಿ ಮಾಡಿದ ಅಮಾನತು ಪತ್ರದಲ್ಲಿ ಯಾವುದೇ ಅಧಿಕೃತ ಕಾರಣವನ್ನು ಉಲ್ಲೇಖಿಸಲಾಗಿಲ್ಲವಾದರೂ, ಪಕ್ಷದ ನಾಯಕರು ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ನಿರತರಾಗಿದ್ದ ಸಮಯದಲ್ಲಿ ಪಂಜಾಬ್ ಕಾಂಗ್ರೆಸ್ ನಾಯಕರನ್ನು ಟೀಕಿಸುವಂತೆ ತೋರುವ ಅವರ ಹೇಳಿಕೆಗಳನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
"ಬಿಜೆಪಿ ಮತ್ತು ಎಎಪಿ ಕಾಂಗ್ರೆಸ್ ವಿರುದ್ಧ ಬಳಸುತ್ತಿರುವುದರಿಂದ ಡಾ. ಸಿಧು ಅವರ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ದೊಡ್ಡ ಮುಜುಗರ ಉಂಟುಮಾಡಿದೆ" ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ,(ಏಜೆನ್ಸೀಸ್).