ಲಖನೌ: ಸ್ವತಃ ತನ್ನ ಅತ್ತಿಗೆಗೆ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ 46 ವರ್ಷದ ಎಹ್ರಾಜ್ ಹುಸೇನ್ ಶೇಖ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಸಂದರ್ಭದಲ್ಲಿ ಆತ ನೀಡಿರುವ ಹೇಳಿಕೆಯೊಂದು ಸದ್ಯ ಭಾರೀ ಚರ್ಚೆಯ ವಿಷಯವಾಗಿದೆ.
ಆರೋಪಿತನಾಗಿರುವ ಎಹ್ರಾಜ್ ಹುಸೇನ್ ಶೇಖ್ ಕಳೆದ ಮೂರು ವರ್ಷಗಳಿಂದ ಅಹಮದಾಬಾದ್‌ನ ಜಮಾಲ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ. 2024 ರಲ್ಲಿ ಎಹ್ರಾಜ್ ತನ್ನ ಚಿಕ್ಕಮ್ಮನ ಸೊಸೆಯ ಮೇಲೆ ಆಸೆ ಪಟ್ಟು, ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಕೆಗೆ ಕಿರುಕುಳ ನೀಡುತ್ತಿರುವ ವಿಷಯ ಮನೆಯಲ್ಲಿ ತಿಳಿದ ಬಳಿಕ ಆಕ್ಷೇಪ ವ್ಯಕ್ತವಾಗಿದ್ದು, ಎಹ್ರಾಜ್, ಮಹಿಳೆಯ ಪತಿಗೆ ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿ, ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದಾನೆ. ತನ್ನನ್ನು ಯಾರಾದರು ತಡೆಯಲು ಪ್ರಯತ್ನಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದ್ದು, 2024 ರಲ್ಲಿಯೇ ಆತನ ವಿರುದ್ಧ ಡ್ಯಾನಿ ಲಿಮ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ಮುಂದುವರೆದಿದ್ದು, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೂ ತನ್ನ ನಡವಳಿಕೆಯನ್ನು ಬದಲಾಯಿಸಲಿಲ್ಲ ಮತ್ತು ಮತ್ತೆ ಮಹಿಳೆಯನ್ನು ಹಿಂಬಾಲಿಸಲು ಪ್ರಾರಂಭಿಸಿದನು ಎಂದು ಆರೋಪಿಸಲಾಗಿದೆ. ಡಿಸೆಂಬರ್ 23 ರಂದು ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದ ಎಹ್ರಾಜ್, ತನ್ನ ಅತ್ತಿಗೆಯ ಕೈ ಹಿಡಿದು, ಆಕೆಯನ್ನು ಪ್ರೀತಿಸುತ್ತೇನೆ ಎಂದು ತನ್ನೊಂದಿಗೆ ಬರುವಂತೆ ಆಕೆಯನ್ನು ಒತ್ತಾಯಿಸುತ್ತಾನೆ.
ಇದಕ್ಕೆ ಆ ಮಹಿಳೆ ಒಪ್ಪದಿದ್ದದಾಗ ಎಹ್ರಾಜ್, ಕೈ ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದಾಗ, ಆಗ ಆಕೆಯ ಅತ್ತೆ ಮಧ್ಯಪ್ರವೇಶಿಸಿ ಬಿಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲ ಘಟನೆಯಿಂದ ಬೇಸತ್ತ ಮಹಿಳೆ ಗಾಯಕ್ವಾಡ್ ಹವೇಲಿ ಪೊಲೀಸ್ ಠಾಣೆಯಲ್ಲಿ ಕಿರುಕುಳದ ಮತ್ತೊಂದು ದೂರು ದಾಖಲಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಎಹ್ರಾಜ್ ಹುಸೇನ್ ಶೇಖ್ನ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಹೀಗೆ ಮಾಡಲು ದೈವಿಕ ಧ್ವನಿಯೊಂದು ಕೇಳಿಬಂದಿವೆ ಎಂದು ಹೇಳಿಕೊಂಡಿದ್ದಾನೆ. ಅದರಲ್ಲಿ ಎಹ್ರಾಜ್, ನೀವು ಎಲ್ಲಿ ಸುತ್ತಾಡುತ್ತಿದ್ದೀರಿ? ಈ ವಿಷಯದ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಹೋಗಿ ಅವಳನ್ನು ಇಲ್ಲಿಗೆ ಎಳೆಯಿರಿ ಎಂದು ನನಗೆ ಹೇಳಲಾಗುತ್ತಿದೆ. ಇದು ಅಲ್ಲಾಹನ ಧ್ವನಿ, ಎಹ್ರಾಜ್, ಮತ್ತೆ ಅಲ್ಲಿಗೆ ಹೋಗಿ ಅವಳನ್ನು ಎಳೆಯಿರಿ' ಎಂಬ ಧ್ವನಿ ಕೇಳಿದ್ದಾಗಿ ಆರೋಪಿ ಹೇಳಿಕೊಳ್ಳುತ್ತಾನೆ.
ಮಹಿಳೆಯನ್ನು ಹಿಂಬಾಲಿಸಿದ, ಬೆದರಿಕೆ ಹಾಕಿದ ಮತ್ತು ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಿದ ಆರೋಪದ ಮೇಲೆ ಎಹ್ರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಎಹ್ರಾಜ್ ಆ ಮಹಿಳೆಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ. ಒಂದು ವರ್ಷದ ಹಿಂದೆ, ಅವನು ಅವಳನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ್ದನು, ಇದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ. ಅದಾದ ನಂತರವೂ, ಅವನು ಮಹಿಳೆಯ ಹೇಳಿಕೆಯನ್ನು ಬದಲಾಯಿಸುವಂತೆ ಮತ್ತು ಅವಳ ಗಂಡ ಮತ್ತು ಮಕ್ಕಳನ್ನು ತನ್ನೊಂದಿಗೆ ವಾಸಿಸಲು ಬಿಡುವಂತೆ ಒತ್ತಡ ಹೇರುತ್ತಲೇ ಇದ್ದನು. ಅವನು ಮತ್ತೆ ಅವಳನ್ನು ಹಿಂಬಾಲಿಸಿ ಕಿರುಕುಳ ನೀಡಿದ ಬಳಿಕ, ವಿಷಯದ ಗಂಭೀರತೆಯನ್ನು ಅರಿತು, ನಾವು ಅವನನ್ನು ಬಂಧಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ(ಏಜೆನ್ಸೀಸ್).