ಶಾಲೆ ಆವರಣದಲ್ಲೇ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿದ ವಿದ್ಯಾರ್ಥಿಗಳು
- ಶಾಲೆ ಆವರಣದಲ್ಲೇ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿದ ವಿದ್ಯಾರ್ಥಿಗಳು
- ತಮಿಳುನಾಡಿನ ಕನ್ಯಾಕುಮಾರಿಯ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ
- ಪ್ರಕರಣದಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕಿ ವರ್ಗಾವಣೆ
ಚೆನ್ನೈ: ಶಾಲಾ-ಕಾಲೇಜುಗಳೆಂದರೆ ಅವು ವಿದ್ಯಾರ್ಜನೆ ಕೇಂದ್ರಗಳು, ಅಲ್ಲಿ ಗುರುಗಳಿಂದ ವಿದ್ಯೆ ಕಲಿತು ಉತ್ತಮ ನಾಗರಿಕರಾಗುವುದು ವಿದ್ಯಾರ್ಥಿಗಳ ಲಕ್ಷಣ. ಆದರೆ ಇತ್ತೀಚೆಗೆ ತಮಿಳುನಾಡಿನ, ಕನ್ಯಾಕುಮಾರಿ ಜಿಲ್ಲೆಯೊಂದರ ಶಾಲೆಯಲ್ಲಿ ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿಯೇ ಮದ್ಯಸೇವನೆ (Alcohol Drinking in School) ಮಾಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ, ಈ ಘಟನೆ ಜುಲೈ ತಿಂಗಳಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಕನ್ಯಾಕುಮಾರಿ ಜಿಲ್ಲೆಯ ಥಕ್ಕಲೈನಲ್ಲಿರುವ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಶಾಲೆಯಿಂದ ತನಿಖೆ ಆರಂಭ!
ಶಾಲೆಯಲ್ಲಿ ಮದ್ಯಪಾನ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ, ಶಾಲಾ ಸಿಬ್ಬಂದಿಗಳು ಎಚ್ಚೆತ್ತಿದ್ದು, ಮುಖ್ಯ ಶಿಕ್ಷಕರಲ್ಲಿ ದೂರನ್ನು ಸಲ್ಲಿಸಿದ್ದಾರೆ. ಸದ್ಯ ವಿಡಿಯೋನಲ್ಲಿರುವ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿರುವ ಶಾಲಾ ಆಡಳಿತ ಮಂಡಳಿ, ಈ ಘಟನೆ ಬಗ್ಗೆ ಲಿಖಿತ ರೂಪದಲ್ಲಿ ವಿವರಣೆ ಕೇಳಿದೆ.
ಆದರೆ, ಮುಖ್ಯ ಶಿಕ್ಷಕಿ ಈ ಪ್ರಕರಣವನ್ನು ಮುಚ್ಚಾಕಲು ಪ್ರಯತ್ನಿಸಿದ್ದು, ತಮ್ಮನ್ನು ಇದರಿಂದ ಪಾರು ಮಾಡಿಕೊಳ್ಳಲು, ವಿದ್ಯಾರ್ಥಿಗಳಿಗೆ ಈ ಕೆಲಸವನ್ನು ನಾವು ಮನೆಯಲ್ಲಿ ಮಾಡಿದ್ದು, ಶಾಲೆಯಲ್ಲಿ ಯಾವುದೇ ರೀತಿಯ ಅಸಭ್ಯ ವರ್ತನೆ ತೋರಿಲ್ಲ ಎಂದು ಬರೆಯುವಂತೆ ಒತ್ತಾಯಿಸಿದ್ದಾಗಿ ಹೇಳಲಾಗುತ್ತಿದೆ.
ವಿಡಿಯೋ ಹಂಚಿಕೆ ತೀವ್ರಗೊಂಡ ಹಿನ್ನಲೆ ಜಿಲ್ಲಾ ಶಿಕ್ಷಣಾಧಿಕಾರಿಗಳು ವಿವಾಧಿತ ಶಾಲೆಗೆ ಆಗಮಿಸಿ, ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರನ್ನು ಕೂಡಲೇ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದ್ದು, ಆದಷ್ಟು ಬೇಗ ಈ ವಿವಾದದ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ, (ಏಜನ್ಸೀಸ್).